Asianet Suvarna News Asianet Suvarna News

ಇಂಡಿಯಾ ಘಟ್‌ಬಂಧನ್‌ ಒಗ್ಗಟ್ಟು ಕಂಡು ಬಿಜೆಪಿಗೆ ಭಯ ಶುರು: ಜಗದೀಶ್‌ ಶೆಟ್ಟರ್‌

ಬಿಜೆಪಿಯವರಿಗೆ ಭಾರತ ಎನ್ನುವುದು ಈಗೇಕೆ ನೆನಪಾಯಿತು? ಪ್ರಧಾನಿ ಮೋದಿ ಅವರದ್ದು ಇದು 2ನೇ ಅವಧಿ. ಕೇವಲ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇಂಡಿಯಾ ಡಿಬೇಟ್‌ ಶುರು ಮಾಡಿದ್ದು ಮೊದಲು ಎನ್‌ಡಿಎನವರು ಎಂಬ ಅರಿವು ಇರಲಿ ಎಂದ ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ 

Congress Leader Jagadish Shettar Slams BJP grg
Author
First Published Sep 8, 2023, 3:00 AM IST

ಹುಬ್ಬಳ್ಳಿ(ಸೆ.08): ಇಂಡಿಯಾ ಘಟ್‌ಬಂಧನ್‌ ಒಗ್ಗಟು ನೋಡಿ ಬಿಜೆಪಿಯವರು ಭಯಗೊಂಡಿದ್ದಾರೆ. ಇಂಡಿಯಾ ವಿದೇಶದ್ದು ಎಂಬ ತಕರಾರು ಈಗ ಶುರುವಾಗಿದೆ. ‘ಇಂಡಿಯಾ’ ಹೆಸರು ಜನಪ್ರಿಯತೆ ಪಡೆಯುತ್ತಿದೆ ಎಂದು ಗೊತ್ತಾಗಿಯೇ ಹೀಗೆ ಹೆಸರು ಬದಲಾಯಿಸುತ್ತಿದ್ದಾರೆ. ಮೋದಿಯವರಿಗೆ 9 ವರ್ಷದ ಬಳಿಕ ‘ಭಾರತ’ ನೆನಪಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿಯವರಿಗೆ ಭಾರತ ಎನ್ನುವುದು ಈಗೇಕೆ ನೆನಪಾಯಿತು? ಪ್ರಧಾನಿ ಮೋದಿ ಅವರದ್ದು ಇದು 2ನೇ ಅವಧಿ. ಕೇವಲ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇಂಡಿಯಾ ಡಿಬೇಟ್‌ ಶುರು ಮಾಡಿದ್ದು ಮೊದಲು ಎನ್‌ಡಿಎನವರು ಎಂಬ ಅರಿವು ಇರಲಿ ಎಂದರು.

ಶೆಟ್ಟರ್‌ ಪಕ್ಷ ಬಿಡುವಾಗ ಸಮಾಜವನ್ನು ಕೇಳಿದ್ದಾರೆಯೇ?: ಶಾಸಕ ಮಹೇಶ ಟೆಂಗಿನಕಾಯಿ

ವೈಯಕ್ತಿಕ ಹೇಳಿಕೆ: 

ಉದಯನಿಧಿ ಹೇಳಿಕೆ ವೈಯಕ್ತಿಕವಾದದ್ದು. ಸನಾತನ ವಿಚಾರವನ್ನು ಗಟ್ಟಿಯಾಗಿ ಮಾತಾಡಲು ಮೋದಿಯವರೇ ಹೇಳಿದ್ದಾರೆ. ಯಾವುದೇ ಕೆಲಸ ಮಾಡದೇ ಇದ್ದಾಗ ಇಂತಹ ಭಾವನಾತ್ಮಕ ವಿಷಯ ಮುನ್ನೆಲೆಗೆ ಬರುತ್ತವೆ ಎಂದರು.
ಇನ್ನು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಒಂದೇ ದಿನ ಚುನಾವಣೆ ನಡೆದರೆ ಒಳ್ಳೆಯದು. ಆದರೆ, ಅದು ಈಗ ಆಗುತ್ತಿಲ್ಲ. ಒಮ್ಮೆಲೇ ಚುನಾವಣೆ ಆಗಬೇಕೆಂದರೆ ಈಗ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರ ವಿಸರ್ಜಿಸಬೇಕಾ? ಇದೆಲ್ಲ ಆಗದ ಮಾತು ಎಂದರು.

Follow Us:
Download App:
  • android
  • ios