ಸಿದ್ದರಾಮಯ್ಯ ಅವರನ್ನು ಹೊಡೆದು ಕೊಲ್ಲಲು ಕರೆ ನೀಡಿರುವ ಅಶ್ವತ್ಥ ನಾರಾಯಣ ಅವರೇ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಜಗದೀಶ್‌ ಶೆಟ್ಟರ್‌ ಅವರನ್ನೂ ಹೊಡೆದು ಕೊಲ್ತೀರಾ? ಟಿಪ್ಪುವಿನಂತೆ ವೇಷಭೂಷಣ ಧರಿಸಿ ಟಿಪ್ಪು ದೇಶಪ್ರೇಮಿ ಎಂದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರಿಗೂ ನಿಮ್ಮ ಹೇಳಿಕೆ ಇದು ಅನ್ವಯಿಸುತ್ತಾ ಎಂದು ಪ್ರಶ್ನಿಸಿದ ಐವನ್‌ ಡಿಸೋಜ. 

ಮಂಗಳೂರು(ಫೆ.20): ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವತ್ಥನಾರಾಯಣ ವಿರುದ್ಧ ಪೊಲೀಸ್‌ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು. ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಎಂಎಲ್ಸಿ ಐವನ್‌ ಡಿಸೋಜ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಹೊಡೆದು ಕೊಲ್ಲಲು ಕರೆ ನೀಡಿರುವ ಅಶ್ವತ್ಥ ನಾರಾಯಣ ಅವರೇ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಜಗದೀಶ್‌ ಶೆಟ್ಟರ್‌ ಅವರನ್ನೂ ಹೊಡೆದು ಕೊಲ್ತೀರಾ? ಟಿಪ್ಪುವಿನಂತೆ ವೇಷಭೂಷಣ ಧರಿಸಿ ಟಿಪ್ಪು ದೇಶಪ್ರೇಮಿ ಎಂದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರಿಗೂ ನಿಮ್ಮ ಹೇಳಿಕೆ ಇದು ಅನ್ವಯಿಸುತ್ತಾ ಎಂದು ಪ್ರಶ್ನಿಸಿದರು.

MANGALURU LIT FEST 2023: ಮುಂದಿನ 25 ವರ್ಷ ಅಮೃತ ಕಾಲ; ಭಾರತ ಅತ್ಯುನ್ನತ ಸ್ಥಾನಕ್ಕೆ : ಆರ್‌.ಜಗನ್ನಾಥ್‌

ಸಿದ್ದರಾಮಯ್ಯ ಅವರನ್ನು ನಿರ್ಭೀತಿಯಿಂದ ಕೆಲಸ ಮಾಡದಂತೆ ತಡೆಯುವ ಹುನ್ನಾರ ಇದು ಮತ್ತು ಜನರಿಗೆ ಅಪರಾಧ ಮಾಡಲು ಪ್ರಚೋದನೆ ನೀಡುವ ಹೇಯ ಕೃತ್ಯ. ಇಂಥವರಿಗೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ಅಶ್ವತ್ಥನಾರಾಯಣ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಕಾಂಗ್ರೆಸ್‌ ಮುಖಂಡರಾದ ಕೋಡಿಜಾಲ್‌ ಇಬ್ರಾಹಿಂ, ಅಪ್ಪಿ, ಸಬಿತಾ ಮಿಸ್ಕಿತ್‌, ಪ್ರಕಾಶ್‌ ಸಾಲ್ಯಾನ್‌, ಭಾಸ್ಕರ ರಾವ್‌, ಸುಹೈಲ್‌ ಕಂದಕ್‌, ಮನುರಾಜ, ಸಲೀಂ ಮಕ್ಕಾ, ಸಿ.ಎಂ.ಮುಸ್ತಫಾ, ಯು.ಪಿ.ಇಬ್ರಾಹಿಂ ಇದ್ದರು.