Mangaluru Lit Fest 2023: ಮುಂದಿನ 25 ವರ್ಷ ಅಮೃತ ಕಾಲ; ಭಾರತ ಅತ್ಯುನ್ನತ ಸ್ಥಾನಕ್ಕೆ : ಆರ್‌.ಜಗನ್ನಾಥ್‌

ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ಅತ್ಯುನ್ನತ ಸ್ಥಾನಕ್ಕೆ ಏರಲಿದೆ ಎಂದು ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಆರ್‌.ಜಗನ್ನಾಥ್‌ ಹೇಳಿದರು.ಬೆಂಗಳೂರಿನ ಭಾರತ್‌ ಫೌಂಡೇಶನ್ ಟ್ರಸ್ಟ್‌ಇಲ್ಲಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಆಯೋಜಿಸಿದ ಎರಡು ದಿನಗಳ ಲಿಟ್‌ ಫೆಸ್ಟ್‌-2023 ಸಾಹಿತ್ಯ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

the 5th edition of mangaluru lit Fest2023 was Inaugurated by v nagaraj at mangaluru rav

ಮಂಗಳೂರು (ಫೆ.19) : ‘ಐಡಿಯಾ ಆಫ್‌ ಭಾರತ್‌ ಇಸ್‌ ದಿ ಐಡಿಯಾ ಆಫ್‌ ದಿ ಧರ್ಮ’ ಆಗಿದೆ. ಭಾರತದ ಚಿಂತನೆ ಧರ್ಮದ ಚಿಂತನೆಯೇ ಆಗಿದೆ. ದೇಶ ಸುಭಿಕ್ಷವಗಿ ಇರಬೇಕಾದರೆ ಅದರ ಮೂಲ ಧರ್ಮವೇ ಆಗಿರುತ್ತದೆ. ವರ್ತಮಾನ ಭಾರತ ಸುಭಿಕ್ಷದ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಆತ್ಮನಿರ್ಭರತೆ ಮೂಲಕ ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ಅತ್ಯುನ್ನತ ಸ್ಥಾನಕ್ಕೆ ಏರಲಿದೆ ಎಂದು ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಆರ್‌.ಜಗನ್ನಾಥ್‌(R Jaganath) ಹೇಳಿದರು.

ಬೆಂಗಳೂರಿನ ಭಾರತ್‌ ¶ೌಂಡೇಷನ್‌ ಟ್ರಸ್ಟ್‌(Bharat Foundation Trust) ಇಲ್ಲಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣ(TMA Pi International Hall)ದಲ್ಲಿ ಆಯೋಜಿಸಿದ ಎರಡು ದಿನಗಳ ಲಿಟ್‌ ಫೆಸ್ಟ್‌-2023(Mangalore Lit Fest-2023) ಸಾಹಿತ್ಯ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

2 ದಿನಗಳ ಭೇಟಿಗೆ ಮಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್

ನಿಟ್ಟೆವಿಶ್ವವಿದ್ಯಾಲಯ ಕುಲಪತಿ ಡಾ.ವಿನಯ ಹೆಗ್ಡೆ(Dr Vinay Hegde) ಅಧ್ಯಕ್ಷತೆ ವಹಿಸಿ, ಮಂಗಳೂರು ನಗರ ವಿದ್ಯೆ, ಆರೋಗ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತ್‌ ¶ೌಂಡೇಷನ್‌ ಮೂಲಕ ಆಯೋಜಿಸಲಾದ ಈ ಲಿಟ್‌ ಫೆಸ್ಟ್‌ಕಾರ್ಯಕ್ರಮ ಮಾರ್ಗದರ್ಶಿಯಾಗಿದೆ. ಕರಾವಳಿ ಪ್ರದೇಶ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಏರಿದ ಸ್ಥಳವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಮಂಗಳೂರು ಪ್ರದೇಶಕ್ಕೆ ವಿಶೇಷ ಸ್ಥಾನವಿತ್ತು. ಭೌಗೋಳಿಕವಾಗಿಯೂ ಶ್ರೀಮಂತಿಕೆ ಹೋಂದಿರುವ ಈ ಪ್ರದೇಶದಲ್ಲಿ ಆಯೋಜಿಸಲಾದ ಲಿಟ್‌ ಫೆಸ್ಟ್‌ ವಿಶ್ವಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಮಿಥಿಕ್‌ ಸೊಸೈಟಿ(Mythic Society) ಗೌರವ ಕಾರ್ಯದರ್ಶಿ ವಿ. ನಾಗರಾಜ್‌(V Nagaraj) ದೀಪ ಬೆಳಗಿಸಿ ಉದ್ಘಾಟಿಸಿ, ಲಿಟ್‌ ಫೆಸ್ಟ್‌ ಮೂಲಕ ವರ್ತಮಾನದ ದೇಶ, ಭಾಷೆ, ಕಲೆ, ಸಂಸ್ಕೃತಿಯ ಅನಾವರಣಗೊಳ್ಳುತ್ತದೆ. ಸಾಹಿತ್ಯವು ದೇಶದ ಸಂಸ್ಕೃತಿ ಮತ್ತು ಕಾಲವನ್ನು ಪ್ರತಿಬಿಂಬಿಸುತ್ತದೆ. ಕಳೆದ ಹಲವು ದಶಕಗಳು ನಮ್ಮದಲ್ಲದ ವಿಚಾರಗಳಿಂದ ತುಂಬಿ ಹೋಗಿತ್ತು, ಆದರೆ ಇಂದು ಕಾಲ ಬದಲಾಗಿದ್ದು, ಭಾರತೀಯ ಸಂಸ್ಕೃತಿಯ ಅನಾವರಣಗೊಳಿಸುವ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಡಾ.ತುಕಾರಾಂ ಪೂಜಾರಿಗೆ ಲಿಟ್‌ ಫೆಸ್ಟ್‌ ಪ್ರಶಸ್ತಿ:

ಈ ಸಂದರ್ಭ ಜಾನಪದ, ಇತಿಹಾಸ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ತುಕಾರಾಂ ಪೂಜಾರಿ ಅವರಿಗೆ ‘ಲಿಟ್‌ ಫೆಸ್ಟ್‌-2023’ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಮ್ಮ ಪೂರ್ವಜರಿಗೆ ಅಕ್ಷರಜ್ಞಾನ ಇಲ್ಲದಿದ್ದರೂ ಪ್ರಕೃತಿ ಮತ್ತು ಸಂಸ್ಕೃತಿಯ ಜ್ಞಾನ ಉತ್ತಮವಾಗಿತ್ತು. ಅವರಿಂದಲೇ ನಮ್ಮ ಸಂಸ್ಕೃತಿಯು ಈ ತನಕ ಹರಿದು ಬಂದಿದೆ. ಅದಕ್ಕೆ ನಾವು ಋುಣಿಯಾಗಿರಬೇಕಿದೆ ಎಂದರು.

ಕಾಂತಾರ ಚಿತ್ರದ ಮೂಲಕ ಇಲ್ಲಿನ ಸಂಸ್ಕೃತಿ ಮನದಟ್ಟಾಯಿತು, ಪುತ್ತೂರಿನಲ್ಲಿ ಅಮಿತ್ ಶಾ ಭಾಷಣದ ಹೈಲೈಟ್ಸ್!

ಭಾರತ್‌ ¶ೌಂಡೇಶನ್‌ ಟ್ರಸ್ಟಿಗಳಾದ ಕ್ಯಾ.ಬೃಜೇಶ್‌ ಚೌಟ, ಸುನಿಲ್‌ ಕುಲಕರ್ಣಿ, ತರ್ಜನಿ ಸಂಸ್ಥೆ ಮುಖ್ಯಸ್ಥ ಸಂಜಯ ಪ್ರಭು ಇದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಹೊರಾಂಗಣದಿಂದ ಸಭಾಂಗಣಕ್ಕೆ ಪಲ್ಲಕಿಯಲ್ಲಿ ವಿವಿಧ ಲೇಖಕರ ಕೃತಿಗಳ ಮೆರವಣಿಗೆ ನಡೆಯಿತು. ಹಿರಿಯ ಜಾನಪದ ಕಲಾವಿದೆ ಭವಾನಿ ಅಮ್ಮ ಪೆರ್ಗಡೆ ಅವರು ಪಾಡ್ದನಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೊರಾಂಗಣದಲ್ಲಿ ವಿವಿಧ ಲೇಖಕರ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮತ್ತು ತುಳು ಲಿಪಿ ಕಲಿಕಾ ಕಾರ್ಯಾಗಾರ ಏರ್ಪಡಿಸಲಾಗಿತ್ತು.

Latest Videos
Follow Us:
Download App:
  • android
  • ios