* ಆಪರೇಷನ್ ಕಮಲದ ಮುಂದುವರೆದ ಭಾಗ * 'ಆಪರೇಷನ್ ಡಿವಿಜನ್ ಆಫ್ ಪಾರ್ಟಿ* ಬಿಜೆಪಿ ವಿರುದ್ಧ ಎಚ್‌ಕೆ ಪಾಟೀಲ್ ಕಿಡಿ

ಗದಗ, (ಜೂನ್.27): ಮಹಾ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸಂಕಷ್ಟದ ಮಧ್ಯೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಶಾಸಕ ಹೆಚ್ ಕೆ ಪಾಟೀಲ್‌ ಸ್ವ ಕ್ಷೇತ್ರ ಗದಗಕ್ಕೆ ಭೇಟಿ ನೀಡಿದ್ದಾರೆ.

ಅಗ್ನಿಪಥ ಯೋಜನೆ ವಿರುದ್ಧ ನಡೆದ ಪ್ರತಿಭಟನಾ ರ‌್ಯಾಲಿಯಲ್ಲಿ ಭಾಗಿಯಾಗಿ ನಂತ್ರ ಸುದ್ದಿಗಾರರ ಜೊತೆ ಮಾತ್ನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದರು.. ದೇಶದಲ್ಲಿ ಧೈರ್ಯವಾಗಿ ಧ್ವನಿ ಎತ್ತುವವರಿಗೆ ಇಡಿ ನೋಟಿಸ್ ಕೋಡೋದು ಸಾಮಾನ್ಯವಾಗಿದೆ‌. ಶಿವಸೇನೆ ನಾಯಕ ಸಂಜಯ್ ರಾವತ್ ಗೆ ಇಡಿ ಸಮನ್ಸ್ ಜಾರಿ ಮಾಡಿದೆ.. ಇಡಿ, ಇನ್ ಕಮ್ ಟ್ಯಾಕ್ಸ್ ಮೂಲಕ ನೋಟಿಸ್ ಕೊಡಿಸಿ ಭಯ ಸೃಷ್ಟಿಸಲಾಗ್ತಿದೆ‌. ದೇಶದ ಜನರನ್ನ ಭಯದ ನೆರಳಿನಲ್ಲಿ ಇಟ್ಟು ರಾಜ್ಯಭಾರ ಮಾಡುವುದು ನಡೆಯಲ್ಲ ಅನ್ನೋದನ್ನ ಬಿಜೆಪಿ ತಿಳಿಯಬೇಕು.. ಬರುವ ದಿನಗಳಲ್ಲಿ‌ ದೇಶದ ಜನರೇ ಪಾಠ ಕಲಿಸಲಿದ್ದಾರೆ ಅಂತಾ ಬಿಜೆಪಿ ವಿರುದ್ಧ ಕಿಡಿಕಾರಿದರು.

ಮಹಾರಾಷ್ಟ್ರ ಬಿಕ್ಕಟ್ಟು ಇದೀಗ ಸುಪ್ರೀಂಕೋರ್ಟ್‌ ಅಂಗಳಕ್ಕೆ

ಮಹಾರಾಷ್ಟ್ರ ಬಂಡಾಯಕ್ಕೆ ಬಿಜೆಪಿ ಬ್ಯಾಕ್ ಸೀಟ್ ಡ್ರೈವರ್..
ಆಪರೇಷನ್ ಕಮಲದ ಮುಂದಿನ ಹೆಜ್ಜೆ ಮಹಾರಾಷ್ಟ್ರದಲ್ಲಿ ಮಾಡಿದ್ದಾರೆ.. ಆಪರೇಷನ್ ಡಿವಿಜನ್ ಆಫ್ ಪಾರ್ಟಿಯನ್ನ ಬಿಜೆಪಿ ಮಾಡಿದೆ.. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಇಲ್ಲಿಯ 17 ಶಾಸಕರ ರಾಜಿನಾಮಿ ಕೊಡಿಸಿ ಪಕ್ಷ ಬಿಡಿಸಿದ್ರು.. ಆದ್ರೆ, ಮಹಾರಾಷ್ಟ್ರದಲ್ಲಿ ಪಕ್ಷ ಒಡೆಯುವ ಕೆಲಸ ಮಾಡಿದ್ದಾರೆ ಅಂತಾ ಆರೋಪಿಸಿದ್ರು‌.. ಈ ಕೆಲಸದಲ್ಲಿ ಬಿಜೆಪಿಗೆ ಯಶಸ್ಸು ಸಿಗೋದಿಲ್ಲ.. ಜನರು ಶಿವ ಸೇನೆಯ ಜೊತೆಗಿದ್ದಾರೆ.. ಕಾಂಗ್ರೆಸ್ ನ 44 ಶಾಸಕರು ಒಗ್ಗಟ್ಟಾಗಿದ್ದೇವೆ.. ಸರ್ವಾನುಮತದಿಂದ ವಿಕಾಸ್ ಅಘಾಡಿಯನ್ನ ಬೆಂಬಲಿಸುಲು ನಿರ್ಣಯಿಸಿದ್ದೇವೆ.. 

ಆಸ್ಸಾಂ ಮುಖ್ಯಮಂತ್ರಿ ಹಿಮವಂತ ಶರ್ಮಾ ಅವರು ಬಂಡಾಯ ಶಾಸಕರನ್ನ ಭೇಟಿಯಾಗಿದ್ದಾರೆ‌‌.. ನೆರೆಯ ಕಾರಣಕ್ಕೆ ಆಸ್ಸಾಂನಲ್ಲಿ‌ ನೂರಾರು ಜನ ಸಾವನಪ್ಪಿದ್ದಾರೆ.. ಆಸ್ಸಾಂ ಮುಖ್ಯಮಂತ್ರಿ ನೆರೆ ಸಂತ್ರಸ್ತರನ್ನ ಭೇಟಿಯಾವುದನ್ನ ಬಿಟ್ಟು, ಹುವಾಹಟಿಯಲ್ಲಿರುವ ಬಂಡಯಾ ಶಾಸಕರ ಜೊತೆಗೆ ಕೇಕ್ ಕಟ್ ಮಾಡೋದಕ್ಕೆ ಬರ್ತಾರೆ.. ಜನ ನೋಡುತ್ತಿದ್ದಾರೆ.. ಜನ ದಡ್ಡರಲ್ಲ ನಿಮಗೆ ಪಾಠ ಕಲಿಸಲಿದ್ದಾರೆ ಅಂತಾ ಆಸ್ಸಾಂ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ರು.. 

ಬುಲಾವ್ ಬಂದ್ರೆ ಮಹಾರಾಷ್ಟ್ರಕ್ಕೆ ಹೋಗ್ತೇನೆ..
ಮಹಾರಾಷ್ಟ್ರ ರಾಜಕೀಯ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.. ನನ್ನ ಕ್ಷೇತ್ರದಲ್ಲಿ ಇರಬೇಕಾಗಿದ್ದು ಪ್ರಾರ್ಥಮಿಕ ಜವಾಬ್ದಾರಿ.. ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಗದಗನಲ್ಲಿ ಪ್ರತಿಭಟನೆ ನಡೆಸಿದ್ದೇನೆ..ಬುಲಾವ್ ಬಂದಲ್ಲಿ ಮಹಾರಾಷ್ಟ್ರಕ್ಕೆ ತಕ್ಷಣವೇ ಹೋಗುತ್ತೇನೆ ಅಂತಾ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿರುವ ಶಾಸಕ ಹೆಚ್ ಕೆ ಪಾಟೀಲರು ಹೇಳಿದ್ರು..