ಡಿಕೆಶಿ ಸಾಹೇಬಾಗೆ ಗ್ರ್ಯಾಂಡ್‌ ವೆಲ್‌ಕಮ್: ಈ ಶಕ್ತಿ ಪ್ರದರ್ಶನದ ಮರ್ಮವೇನು?

ಹವಾಲಾ ಹಣ ಪ್ರಕರಣದಲ್ಲಿ ಸುಮಾರು ಒಂದುವರೆ ತಿಂಗಳು ತಿಹಾರ್ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ಡಿಕೆ ಶಿವಕುಮಾರ್‌ಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಗ್ರ್ಯಾಂಡ್ ವೆಲ್‌ಕಮ್ ಸಿಕ್ಕಿದೆ.  ಬಳಿಕ ತೆರೆ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಗಿದೆ. ಆದ್ರೆ, ಈ ಶಕ್ತಿ ಪ್ರದರ್ಶನದ ಉದ್ದೇಶವೇನು..? ಇದು ಡಿಕೆಶಿ ಪ್ಲಾನ್‌ ನಾ? ಅಥವಾ ಕಾಂಗ್ರೆಸ್‌ ನ ರಣತಂತ್ರನಾ..?  

Congress leader DK Shivakumar welcomed by supporters at Bengaluru airport

ಬೆಂಗಳೂರು, (ಅ.26):  ಸುಮಾರು ಒಂದುವರೆ ತಿಂಗಳು ತಿಹಾರ್ ಜೈಲುವಾಸ ಅನುಭವಿಸಿ ಹೊರ ಬಂದಿರುವ ಡಿ ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಮುದಾಯ ಜನರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

 ಸರಿ ಸುಮಾರು ಎರಡು ತಿಂಗಳ ನಂತರ ಬೆಂಗಳೂರಿಗೆ ಆಗಮಿಸುತ್ತಿರುವ ಡಿ ಕೆ ಶಿವಕುಮಾರ್ ಅವರಿಗೆ ಬರಮಾಡಿಕೊಂಡಿರುವ ರೀತಿ ನೋಡಿದ್ರೆ ಈ ಶಕ್ತಿ ಪ್ರದರ್ಶನದ ಉದ್ದೇಶ ಏನು ಎಂಬ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. 

ಡಿಕೆಶಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ? ಸಿದ್ದರಾಮಯ್ಯ ಹೇಳಿದ್ದಿಷ್ಟೇ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಡಿಕೆಶಿಯನ್ನು ಅಭಿಮಾನಿಗಳು, ಕಾರ್ಯಕರ್ತರು ಹುಮ್ಮಸ್ಸಿನಿಂದ ಘೋಷಣೆಗಳನ್ನು ಕೂಗುತ್ತಾ ಹಾರ, ತುರಾಯಿ ಹಾಕಿ ಗ್ರ್ಯಾಂಡ್ ವೆಲ್‌ಕಮ್ ಮಾಡಿದರು. ಇದು ಮುಂಬರುವ ಉಪಚುನಾವಣೆಗೆ ನಡೆಯುತ್ತಿರುವ ಕಾಂಗ್ರೆಸ್ ಶಕ್ತಿ ಪ್ರದರ್ಶನ ಎನ್ನಲಾಗುತ್ತಿದೆ.

ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರು ತಮ್ಮ ಬಲ ಏನು ಎನ್ನುವುದು ಹೈಕಮಾಂಡ್‌ಗೆ ರವಾನಿಸಲು ಈ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವ ಮಾತುಗಳೂ ಸಹ ಕೇಳಿಬರುತ್ತಿವೆ. 

ಡಿಕೆಶಿಗೆ ಕೆಪಿಸಿಸಿ ಸಾರಥ್ಯ

Congress leader DK Shivakumar welcomed by supporters at Bengaluru airportಹೌದು...ಇಂತದೊಂದು ಗುಮಾನಿ ರಾಜ್ಯ ರಾಜಕಾರಣದಲ್ಲಿ ಗರಿಗೆದರಿದೆ. ಜೈಲಿನಿಂದ ಬರುವುದನ್ನೇ ಕಾಯುತ್ತಿದ್ದ ಹೈಕಮಾಂಡ್ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟುವುದು ಗ್ಯಾರಂಟಿಯಾಗಿದೆ. 

ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೀನಾಯ ಸೋಲು ಕಂಡಿದೆ. ಇದ್ರಿಂದ ಕೆಪಿಸಿಸಿಗೆ ಒಬ್ಬ ಸ್ಟ್ರಾಂಗ್ ಲೀಡರ್ ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಟ್ರಬಲ್ ಶೂಟರ್‌ ಕೆಪಿಸಿಸಿಗೆ ಸೂಕ್ತ ನಾಯಕ ಎನ್ನುವುದು ಹೈಕಮಾಂಡ್‌ಗೆ ಮನವರಿಕೆಯಾಗಿದೆ.

ಡಿ ಕೆ ಶಿವಕುಮಾರ್ ಪ್ರಭಾವಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ, ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಈ ಹಿಂದೆ ನಡೆಸಿದ್ದ ಲಾಬಿ ಫಲ ನೀಡಿರಲಿಲ್ಲ. ಆದ್ರೆ, ಡಿಕೆಶಿ ಜೈಲಿ ಹೋಗಿದಾಗಿನಿಂದ ಅವರ ಬೆನ್ನಿಗೆ ಒಕ್ಕಲಿಗ ಸಮುದಾಯ ನಿಂತಿದೆ. ಇದು ಪಕ್ಷಕ್ಕೂ ಪ್ಲಾಸ್ ಆಗಲಿದೆ ಎನ್ನುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ಗೊತ್ತಾಗಿದೆ.

Congress leader DK Shivakumar welcomed by supporters at Bengaluru airportಈ ಹಿನ್ನೆಲೆಯಲ್ಲಿ ಡಿಕೆಶಿಗೆ ಕೆಪಿಸಿಸಿ ಪಟ್ಟ ಕಟ್ಟಲು ಸೋನಿಯಾ ಗಾಂಧಿ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ, ಅಹಮದ್ ಪಟೇಲ್ ಮುಂತಾದ ವರಿಷ್ಠರೆಲ್ಲ ಭೇಟಿ ಮಾಡಿ ಧೈರ್ಯ ತುಂಬಿರುವುದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಈ ಶಕ್ತಿ ಪ್ರದರ್ಶನದ ಮೂಲಕ ಮತ್ತೆ ತಾನೇನು ಅನ್ನೋದನ್ನು ಪ್ರೂವ್ ಮಾಡಲು ಹೊರಟಿದ್ದಾರಾ? ಅಥವಾ ಕೆಪಿಸಿಸಿ ಅಧ್ಯಕ್ಷರಾಗಲು ಬಲ ಪ್ರದರ್ಶನ ಮಾಡಿದ್ದಾರಾ? ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios