Asianet Suvarna News Asianet Suvarna News

ಸಿದ್ದರಾಮಯ್ಯ ನಿವಾಸದಲ್ಲಿ ತಡರಾತ್ರಿ ಸಭೆ : ಮಹತ್ವದ ಚರ್ಚೆ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಸೇರಿ ಸಭೆಯೊಂದನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ಬರ್ಖಾಸ್ತಾಗಿದೆ.

Congress Leader Discuss About Karnataka Cabinet Expansion in siddaramaiah House
Author
Bengaluru, First Published Nov 17, 2018, 9:03 AM IST

ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ- ಮಂಡಳಿ ನೇಮಕಾತಿಯನ್ನು ಬೆಳ​ಗಾವಿ ಅಧಿ​ವೇ​ಶ​ನದ ನಂತರ ಮಾಡ​ಬೇಕೇ ಅಥವಾ ಅದಕ್ಕೂ ಮುನ್ನವೇ ಪೂರ್ಣ​ಗೊ​ಳಿ​ಸ​ಬೇಕೇ ಎಂಬ ಜಿಜ್ಞಾಸೆ ಕಾಂಗ್ರೆಸ್‌ ನಾಯ​ಕ​ರನ್ನು ಕಾಡಿ​ದೆ. ಆದರೆ ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ಬರ್ಖಾಸ್ತಾಗಿದೆ.

ಸಂಪುಟ ವಿಸ್ತ​ರಣೆ ಯಾವಾಗ ನಡೆ​ಸ​ಬೇಕು ಎಂಬ ಬಗ್ಗೆ ನಿರ್ಧ​ರಿ​ಸಲು ಶಾಸ​ಕಾಂಗ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಉಪ ಮುಖ್ಯ​ಮಂತ್ರಿ ಪರ​ಮೇ​ಶ್ವರ್‌ ಹಾಗೂ ಜಲ​ಸಂಪ​ನ್ಮೂಲ ಸಚಿವ ಡಿ.ಕೆ. ಶಿವ​ಕು​ಮಾರ್‌ ಶುಕ್ರ​ವಾರ ತಡ​ರಾ​ತ್ರಿ​ವ​ರೆಗೂ ಸಭೆ ನಡೆ​ಸಿ​ದರು.

ಉಪ ಚುನಾ​ವಣೆ ನಂತರ ಸಂಪುಟ ವಿಸ್ತ​ರಣೆ ನಡೆ​ಸುವ ಭರ​ವಸೆ ನೀಡಿ​ರುವು​ದ​ರಿಂದ ಈ ಮಾಸಾಂತ್ಯ​ದೊ​ಳಗೆ ಸಂಪುಟ ವಿಸ್ತ​ರಣೆ ನಡೆ​ಸು​ವುದು ಸೂಕ್ತ ಎಂದು ಕೆಲ ನಾಯ​ಕರು ಸಭೆ​ಯಲ್ಲಿ ಅಭಿ​ಪ್ರಾಯ ಮಂಡಿ​ಸಿ​ದರು ಎನ್ನ​ಲಾ​ಗಿದೆ. ಆದರೆ, ಸಂಪುಟ ವಿಸ್ತ​ರ​ಣೆ​ಯನ್ನು ಮಾಡಿ​ದರೆ, ಅಸ​ಮಾ​ಧಾ​ನ​ಗೊಂಡ​ವರು ತಮ್ಮ ಅತೃಪ್ತಿ ಹೊರ ಹಾಕಲು ಡಿಸೆಂಬರ್‌ ಎರ​ಡನೇ ವಾರ​ದಲ್ಲಿ ನಡೆ​ಯ​ಲಿ​ರುವ ಬೆಳ​ಗಾವಿ ಅಧಿ​ವೇ​ಶ​ನ​ವನ್ನು ವೇದಿ​ಕೆ​ಯಾಗಿ ಬಳ​ಸಿ​ಕೊಂಡು ಪಕ್ಷ ಹಾಗೂ ಸರ್ಕಾ​ರಕ್ಕೆ ಮುಜು​ಗರ ಉಂಟು ಮಾಡ​ಬ​ಹುದು. ಹೀಗಾಗಿ, ಬೆಳ​ಗಾವಿ ಅಧಿ​ವೇ​ಶನದ ನಂತ​ರವೇ ಸಂಪುಟ ವಿಸ್ತ​ರಣೆ ಬಗ್ಗೆ ತೀರ್ಮಾನ ಕೈಗೊ​ಳ್ಳು​ವುದು ಉತ್ತಮ ಎಂದು ಮತ್ತೆ ಕೆಲ ನಾಯ​ಕರು ವಾದಿ​ಸಿ​ದರು ಎನ್ನ​ಲಾ​ಗಿ​ದೆ.

ಸುದೀರ್ಘ ಚರ್ಚೆಯ ನಂತ​ರವೂ ಯಾವುದೇ ತೀರ್ಮಾನ ಕೈಗೊ​ಳ್ಳಲು ಸಾಧ್ಯ​ವಾ​ಗದ ಹಿನ್ನೆ​ಲೆ​ಯಲ್ಲಿ ಪಕ್ಷದ ಇತರ ಎಲ್ಲಾ ಹಿರಿಯ ನಾಯ​ಕರ ಅಭಿ​ಪ್ರಾಯ ಪಡೆದು ಈ ಬಗ್ಗೆ ತೀರ್ಮಾನ ಕೈಗೊ​ಳ್ಳೋಣ ಎಂದು ನಿರ್ಧ​ರಿಸಿ ಸಭೆ ಬರ್ಖಾಸ್‌್ತ ಮಾಡ​ಲಾ​ಯಿತು ಎಂದು ಮೂಲ​ಗಳು ತಿಳಿ​ಸಿ​ವೆ.

Follow Us:
Download App:
  • android
  • ios