Asianet Suvarna News Asianet Suvarna News

Controversial Speech:'ತೇಜಸ್ವಿ ಸೂರ್ಯಗೆ ಈ 5 ಪದಗಳನ್ನು ಬಿಟ್ರೆ ಬೇರೇನೂ ಗೊತ್ತಿಲ್ಲ'

* ಸಂಸದ ತೇಜಸ್ವಿ ಸೂರ್ಯ ವಿವದಾತ್ಮಕ ಹೇಳಿಕೆ
* ತೇಜಸ್ವಿ ಸೂರ್ಯ  ವಿರುದ್ಧ ಕಿಡಿಕಾರಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್
* ತೇಜಸ್ವಿ ಸೂರ್ಯಗೆ ಈ 5 ಪದಗಳನ್ನು ಬಿಟ್ರೆ ಬೇರೇನೂ ಗೊತ್ತಿಲ್ಲ ಎಂದು ಕಿಡಿ

Congress Leader BV Srinivas Hits out at Tejasvi Surya over his Controversial Speech On Hindu Muslim rbj
Author
Bengaluru, First Published Dec 27, 2021, 9:55 PM IST

ನವದೆಹಲಿ, (ಡಿ.27): ತೇಜಸ್ವಿ ಸೂರ್ಯ (Tejasvi Surya) ಅವರಿಗೆ 5 ಪದಗಳನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (BV Srinivas) ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ (New Delhi) ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಓರ್ವ ಸಂಸದರಾಗಿ ತೇಜಸ್ವಿ ಸೂರ್ಯ ಪ್ರಚೋದನಕಾರಿ ಭಾಷಣಗಳನ್ನು(Speech) ಮಾಡುತ್ತಿದ್ದಾರೆ. ಪಾಕಿಸ್ತಾನ, ಮುಸ್ಲಿಂ, ಹಿಂದುತ್ವ, ನರೇಂದ್ರ ಮೋದಿ, ರಾಷ್ಟ್ರೀಯತೆ ಈ 5 ಪದಗಳನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

Ghar Wapsi:ವಿವಾದದ ಕಿಚ್ಚಿ ಹೆಚ್ಚಾಗುತ್ತಿದ್ದಂತೆಯೇ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ

ಸಂಸದರಾಗಿ ದ್ವೇಷದ ಭಾಷಣ ಮಾಡುವುದನ್ನು ಮೊದಲು ನಿಲ್ಲಿಸಬೇಕು. ತಮ್ಮದೇ ಕ್ಷೇತ್ರದಲ್ಲಿ ಎರಡು ಬ್ಯಾಂಕ್ ಗಳು ಮುಳುಗಿ ಗ್ರಾಹಕರು ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಜನರಲ್ಲಿ ಒಮ್ಮತದ ಭಾವನೆ ಮೂಡಿಸುವ ಬದಲು ಒಡಕು ಮೂಡಿಸಲು ಹೊರಟಿದ್ದಾರೆ. ಸಂಸದರಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಏನಿದು ವಿವಾದ?
ಡಿಸೆಂಬರ್ 25, ಶನಿವಾರ ಉಡುಪಿ(Udupi) ಶ್ರೀಕೃಷ್ಣ ಮಠದ ವಿಶ್ವಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ  ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೆ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದರು. ಸಂಸದರ ಈ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿತ್ತು. ಪ್ರತಿ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ತೇಜಸ್ವಿ ಸೂರ್ಯ ಬೇಷರತ್ ಆಗಿ ತಮ್ಮ ಹೇಳಿಕೆ ವಾಪಸ್ ಪಡೆದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶಾಸಕ ರಘುಪತಿ ಭಟ್, ಹೋಟೆಲ್ ಉದ್ಯಮಿ ಬಿಪಿ ರಾಘವೇಂದ್ರರಾವ್ ಉಪಸ್ಥಿತರಿದ್ದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಜಾತ್ಯತೀತತೆಯು ಹಿಂದೂಗಳ ಮೇಲೆ ಪರಿಣಾಮ ಬೀರಿದೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ದೌರ್ಜನ್ಯವನ್ನು ಖಚಿತಪಡಿಸಿದೆ ಎಂದೂ ಉಲ್ಲೇಖಿಸಿದ್ದರು.

ಹಿಂದೂಗಳ ಮೇಲಿನ ದೌರ್ಜನ್ಯ ಅವರ ಸ್ವಾಭಿಮಾನ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಸೂರ್ಯ ಹೇಳಿದ್ದಾರೆ. “ನಾವು ಈ ದೇಶದಲ್ಲಿ ರಾಮಮಂದಿರವನ್ನು ನಿರ್ಮಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕಲಾಗಿದೆ. ನಾವು ಪಾಕಿಸ್ತಾನದ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸಬೇಕು. ಘರ್ ವಾಪಸಿಗೆ ಆದ್ಯತೆ ನೀಡಬೇಕು. ಅಖಂಡ ಭಾರತ ಕಲ್ಪನೆಯಲ್ಲಿ ಪಾಕಿಸ್ತಾನವೂ ಸೇರಿದೆ. ಈ ನಿಟ್ಟಿನಲ್ಲಿ ಮಠಗಳು ಮತ್ತು ದೇವಸ್ಥಾನಗಳು ಮುಂದಾಳತ್ವ ವಹಿಸಬೇಕು,' ಎಂದಿದ್ದರು.

ಹೇಳಿಕೆ ವಾಪಸ್ ಪಡೆದ ತೇಜಸ್ವಿ ಸೂರ್ಯ
ಸಂಸದರ ಈ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿತ್ತು. ಪ್ರತಿ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ತೇಜಸ್ವಿ ಸೂರ್ಯ ಬೇಷರತ್ ಆಗಿ ತಮ್ಮ ಹೇಳಿಕೆ ವಾಪಸ್ ಪಡೆದುಕೊಂಡಿದ್ದಾರೆ.

ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ (BJP national Yuva Morcha president) ತೇಜಸ್ವಿ ಸೂರ್ಯ ಹೇಳಿದ್ದಾರೆ.

ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದವನ್ನು ಸೃಷ್ಟಿಸಿವೆ. ಹಾಗಾಗಿ ಬೇಷರತ್ತಾಗಿ ಹೇಳಿಕೆಗಳನ್ನು ಹಿಂಪಡೆಯುತ್ತೇನೆ' ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಟ್ವೀಟ್ (Tweet) ಮಾಡಿದ್ದಾರೆ.

Follow Us:
Download App:
  • android
  • ios