Asianet Suvarna News Asianet Suvarna News

ತೆರಿಗೆ ಕಟ್ಟುವವರಿಗೆ ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಇಲ್ಲ: ಹರಿಪ್ರಸಾದ್‌

ಆದಾಯ ತೆರಿಗೆ ಪಾವತಿಸುವವರನ್ನು ಬಿಟ್ಟು ಉಳಿದೆಲ್ಲಾ ಕುಟುಂಬಗಳಿಗೂ ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಉಚಿತ ವಿದ್ಯುತ್‌ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ: ಬಿ.ಕೆ.ಹರಿಪ್ರಸಾದ್‌ 

Congress Leader BK Hariprasad Talks Over Free Electricity grg
Author
First Published Jan 21, 2023, 3:38 AM IST

ಬೆಂಗಳೂರು(ಜ.21): ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದು ಹಾಗೂ ನಿರುದ್ಯೋಗ ಗೃಹಿಣಿಗೆ ಮಾಸಿಕ 2000 ರು. ನೀಡುವ ಭರವಸೆಯು ಆದಾಯ ತೆರಿಗೆ ಪಾವತಿದಾರರಿಗೆ ಅನ್ವಯಿಸುವುದಿಲ್ಲ ಎಂದು ಇದೇ ವೇಳೆ ಬಿ.ಕೆ.ಹರಿಪ್ರಸಾದ್‌ ಸ್ಪಷ್ಟಪಡಿಸಿದರು.

ಆದಾಯ ತೆರಿಗೆ ಪಾವತಿಸುವವರನ್ನು ಬಿಟ್ಟು ಉಳಿದೆಲ್ಲಾ ಕುಟುಂಬಗಳಿಗೂ ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಉಚಿತ ವಿದ್ಯುತ್‌ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 2 ಲಕ್ಷ ರೈತರ ಸಾಲಮನ್ನಾ ಹಣ ಬಿಡುಗಡೆ: ಎಚ್‌ಡಿಕೆ

ಸಾಲು ಸಾಲು ಉಚಿತ ಯೋಜನೆಗಳನ್ನು ಘೋಷಿಸುತ್ತಿದ್ದಿರುವ ಕಾಂಗ್ರೆಸ್‌ ಅದಕ್ಕೆಲ್ಲಾ ಹಣಕಾಸು ಎಲ್ಲಿಂದ ತರುತ್ತದೆ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಹಣಕಾಸಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದರ ಇತಿ ಮಿತಿಯಲ್ಲಿ ಯಾವೆಲ್ಲಾ ಜನಸ್ನೇಹಿ ಕಾರ್ಯಕ್ರಮಗಳನ್ನು ಕೊಡಬಹುದೋ ಅದನ್ನು ಘೋಷಿಸಲಾಗುತ್ತಿದೆ. ನಾವು ಘೋಷಿಸುತ್ತಿರುವ ಎಲ್ಲ ಯೋಜನೆಗಳನ್ನೂ ನೀಡುವಷ್ಟುಆರ್ಥಿಕ ಸಂಪತ್ತು ರಾಜ್ಯದಲ್ಲಿದೆ. ಇದಲ್ಲದೆ ಹೋಗಿದ್ದರೆ 13 ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರಂತಹವರು ಇದನ್ನು ಒಪ್ಪುತ್ತಿರಲಿಲ್ಲ ಎಂದು ಹೇಳಿದರು.

Follow Us:
Download App:
  • android
  • ios