Asianet Suvarna News Asianet Suvarna News

ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ: ಅಲ್ಲಿರೋದು ವಿಶ್ವಗುರು: ಪ್ರಧಾನಿ ಮೋದಿ ವಿರುದ್ದ ಬಿ.ಕೆ.ಹರಿಪ್ರಸಾದ್ ಟೀಕೆ

ಅಯೋಧ್ಯೆಯಲ್ಲಿ ರಾಮಮಂದಿರ ಪುನರ್ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ದೇಶವೇ ಸಂಭ್ರಮದ ಮಡಿಲಿನಲ್ಲಿ ತೇಲಾಡ್ತಿದೆ. ಆದ್ರೆ, ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸೋದನ್ನ ಮುಂದುವರಿಸಿದೆ. 
 

Congress Leader BK Hariprasad Slams On PM Narendra Modi At Chikkamagaluru gvd
Author
First Published Jan 21, 2024, 2:06 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.21): ಅಯೋಧ್ಯೆಯಲ್ಲಿ ರಾಮಮಂದಿರ ಪುನರ್ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ದೇಶವೇ ಸಂಭ್ರಮದ ಮಡಿಲಿನಲ್ಲಿ ತೇಲಾಡ್ತಿದೆ. ಆದ್ರೆ, ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸೋದನ್ನ ಮುಂದುವರಿಸಿದೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ದೇವರ ಕಾರ್ಯಕ್ರಮಕ್ಕೆ ಯಾವುದೇ ಆಮಂತ್ರಣ ಬೇಡ ಎಂದಿರೋ ಹರಿಪ್ರಸಾದ್, ಕಾಂಗ್ರೆಸ್ ರಾಮಮಂದಿರದಿಂದ ದೂರ ಉಳಿದಿರೋದನ್ನ ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದಾರೆ. 

ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ. ಅಲ್ಲಿರೋದು ವಿಶ್ವಗುರು. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು. ನಾವು ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದು ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಟ್ಡಿದ್ದಾರೆ. ಆದರೆ, ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆಗ ಯಾವ ಆಮಂತ್ರಣ ಏನೂ ಬೇಡ ನಾವು ಹೋಗ್ತಿದ್ವಿ. ಆದ್ರೆ, ಅಲ್ಲಿ ಜಗದ್ಗುರು ಬದಲು ವಿಶ್ವಗುರು ಇದ್ದಾರೆ. ಅದರೆ ಬಿಜೆಪಿಯ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದ್ದಾರೆ. 

ಚಾಮರಾಜನಗರ ಟಿಕೆಟ್‌ಗೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿದ್ದರಾಮಯ್ಯ ಪಾಲಿಗಿದು ಪ್ರತಿಷ್ಠೆಯ ಕ್ಷೇತ್ರ!

ಶಂಕರಾಚಾರ್ಯರು ಮಾಡಿದ್ರೆ ನಮಗೆ ಆಮಂತ್ರಣ ಬೇಡವಾಗಿತ್ತು: ದೇಶದ ನಾಲ್ಕು ಶಂಕರರಲ್ಲಿ ಇಬ್ಬರು ವಿರುದ್ಧ ಇದ್ದಾರೆ. ಮತ್ತಿಬ್ಬರು ತಟಸ್ಥರಿದ್ದಾರೆ ಎಂದಿದ್ದಾರೆ. ಆಮಂತ್ರಣ ಕೊಡೋಕೆ ಇವರು ಯಾರು. ರಾಮ ಪೋನ್ ಮಾಡಿ ಹೇಳಿದ್ನ ಕೊಡಿ ಅಂತ. ಶಂಕರಾಚಾರ್ಯರು ಮಾಡಿದ್ರೆ ನಮಗೆ ಆಮಂತ್ರಣ ಬೇಡವಾಗಿತ್ತು. ದೇವಸ್ಥಾನಕ್ಕೆ ಹೋಗಬೇಕು. ಇಂತಹದ್ದೇ ದೇವರು ಅಂತಿಲ್ಲ. ದೇಶದಲ್ಲಿ 33 ಕೋಟಿ ದೇವರಿವೆ. ಎಲ್ಲಾದ್ರು ಹೋಗ್ತೀವಿ. ನಾವು ಮಾರಮ್ಮ... ಅಣ್ಣಮ್ಮ... ಭೂತ ಪೂಜೆ ಮಾಡೋರು.ಭೂತದ ಬಳಿ ಹೋಗ್ತೀವಿ ಎಂದಿದ್ದಾರೆ. 

ನಾನು ಸರ್ಕಾರದಲ್ಲಿ ಇಲ್ಲ. ನಾನು ಹೊರಗಡೆ ಇದ್ದೀನಿ: ನಿಗಮ ಮಂಡಳಿ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ನೀವು ಸರ್ಕಾರದವರನ್ನೇ ಕೇಳಬೇಕು. ನಾನು ಸರ್ಕಾರದಲ್ಲಿ ಇಲ್ಲ. ನಾನು ಹೊರಗಡೆ ಇದ್ದೀನಿ ಎಂದರು. ಯಾವ ಮಾನದಂಡದಲ್ಲಿ ನಿಗಮ ಮಂಡಳಿ ಮಾಡ್ತಿದ್ದಾರೆ ಅವರನ್ನೇ ಕೇಳಬೇಕು. ಯಾವ ಮಾನದಂಡದಲ್ಲಿ ಮಾಡ್ತಿದ್ದಾರೆ ಅನ್ನೋದು ನನಗೇ ಗೊತ್ತಿಲ್ಲ. ಮಾಡ್ತಿರೋದು ಗೊತ್ತಿಲ್ಲ, ನಿಂತಿರೋದು ಗೊತ್ತಿಲ್ಲ, ಮುಂದಾಗೋದು ಗೊತ್ತಿಲ್ಲ ಎಂದರು.

ನಮ್ಮಿಂದ ‍4 ಲಕ್ಷ ಕೋಟಿ ಪಡೆದು 50000 ಕೋಟಿ ಮಾತ್ರ ಕೊಡ್ತಾರೆ: ಕೇಂದ್ರದ ಆರ್ಥಿಕ ಅನ್ಯಾಯ ವಿರುದ್ಧ ಸಿದ್ದು ಕಿಡಿ!

ಸಿಎಂ ವಿರುದ್ದ ಪರೋಕ್ಷ ಸಿಟ್ಟು: ನನಗೆ ಕಾಂಗ್ರೆಸ್ ಮೇಲೆ ಅಸಮಾಧಾನ ಇಲ್ಲ. ಯಾಕಂದ್ರೆ, ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾಂಗ್ರೆಸ್ಸಿನಲ್ಲಿ ಇದ್ದೀನಿ. ನಾನೇಕೆ ಅಸಮಾಧಾನಗೊಳ್ಳಲಿ. ಅಧಿಕಾರಕ್ಕಾಗಿ ನಾನು ಬೇರೆ-ಬೇರೆ ಪಕ್ಷಗಳನ್ನ ಬದಲಾವಣೆ ಮಾಡ್ದೋನಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಆದರೆ, ಕೆಲವರು ಕಾಂಗ್ರೆಸ್ಸೇ ನಮ್ದು ಅಂತಿದ್ದಾರೆ, ಅದಕ್ಕೆ ನಮ್ಮ ಅಸಮಾಧಾನ ಅಷ್ಟೆ. ಸಮಾಧಾನ-ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತೆ ಎಂದು ಅವರು, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಅವರು ಅವರ ಮೇಲೆ ಏಕೆ ಸಿಟ್ಟಾಗೋಣ ಎಂದು ಪರೋಕ್ಷವಾಗಿ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow Us:
Download App:
  • android
  • ios