Chikkamagaluru: ಎಸ್.ಎಲ್.ಭೋಜೇಗೌಡ ಆತ್ಮಾವಲೋಕನ ಮಾಡಿಕೊಳ್ಳಬೇಕು: ಬಿ.ಬಿ.ನಿಂಗಯ್ಯ

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬರೂ ಜೆಡಿಎಸ್ ಅಭ್ಯರ್ಥಿ ಗೆಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದಾರೆ.

Congress Leader BB Ningaiah Slams On SL Bhojegowda At Chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.18): ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬರೂ ಜೆಡಿಎಸ್ ಅಭ್ಯರ್ಥಿ ಗೆಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದಾರೆ. ಅವರ ನಡೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ.ಬಿ.ನಿಂಗಯ್ಯ ಹೇಳಿದರು. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭೋಜೇಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅವರ ಪಕ್ಷದ ಶಕ್ತಿ ಏನು ಎನ್ನುವುದು ಚುನಾವಣೆಯಲ್ಲಿ ಗೊತ್ತಾಗಿದೆ. ಇಲ್ಲಿ ಯಾರೂ ಗೆಲ್ಲಬಾರದು ನಾನೊಬ್ಬನೇ ಇರಬೇಕು ಎನ್ನುವುದು ಅವರ ಧೋರಣೆ. ಅದಕ್ಕಾಗಿ ಪಕ್ಷವನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದು ಟೀಕಿಸಿದರು.

ಭೋಜೇಗೌಡ ಅವರದ್ದು ರಾಜಕೀಯ ನೈತಿಕ ಅದಃಪತನ: ಕಣದಲ್ಲಿ ತಮ್ಮ ಪಕ್ಷದ ಅಬ್ಯರ್ಥಿ ಇದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಕೇಳಿದ ಭೋಜೇಗೌಡ ಅವರದ್ದು ರಾಜಕೀಯ ನೈತಿಕ ಅದಃಪತನವಾಗಿದೆ. ಜೆಡಿಎಸ್ ಸೋಲಿಗೆ ಭೋಜೇಗೌಡರು ಮತ್ತು ಅವರ ಪಕ್ಷದ ಜಿಲ್ಲಾ ಅಧ್ಯಕ್ಷರು ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು. ಜೆಡಿಎಸ್‌ನಲ್ಲಾದ ಅನ್ಯಾಯದಿಂದ ಬೇಸತ್ತು ತಾವು ಕಾಂಗ್ರೆಸ್ ಸೇರಬೇಕಾಯಿತು. ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಲ್ಲಿ ನಮ್ಮದೂ ಪಾತ್ರವಿದೆ. 

ಚಿಕ್ಕಮಗಳೂರಿನಲ್ಲಿ ಜನಸ್ನೇಹಿ ಆಡಳಿತ ನೀಡುವೆ: ಶಾಸಕ ಎಚ್‌.ಡಿ.ತಮ್ಮಯ್ಯ

ಜಿಲ್ಲೆಯಲ್ಲಿ ಐದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಸಂತೋಷ ತಂದಿದೆ. ಮತದಾರರು ಹಾಗೂ ಎಲ್ಲಾ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಲೆ, ಪಕ್ಷದ ನೀಡಿದ 5 ಗ್ಯಾರೆಂಟಿ ಭರವಸೆಗಳು, ಬಿಜೆಪಿ ಆಡಳಿತ ವೈಫಲ್ಯಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ಮುಂದೆ ಆಪರೇಷನ್‌ಗೆ ಅವಕಾಶವಿಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ನಿಚ್ಛಳವಾದ ಬಹುಮತ ಪಡೆದಿರುವುದು ಸ್ವಾಗತಾರ್ಹ ಎಂದರು.

ಎಚ್‌ಡಿಕೆಗೆ ಸಾಂತ್ವನ ಹೇಳುವುದು ಬಿಟ್ಟು ಹಾಲಿನಭೀಷೇಕಕ್ಕೆ ಕಿಡಿ: ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರು ಚುನಾವಣೆ ಸೋತಿದ್ದಾರೆ. ಅವರಿಗೆ ಸಾಂತ್ವನ ಹೇಳುವುದು ಬಿಟ್ಟು ಜೆಡಿಎಸ್ ಎಂಎಲ್ಸಿ ಭೋಜೇಗೌಡ ಅವರು ಹಾಲಿನಭೀಷೇಕ ಮಾಡಿಸಿಕೊಂಡಿದ್ದಾರೆ. ಅವರದ್ದು ವಿಕೃತ ಮನಸ್ಸು, ಇದು ಯಾವ ರಾಜಕಾರಣಿಗೂ ಇರಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಸಿದ್ಧಾಂತದ ರಾಜಕಾರಣಕ್ಕಾಗಿ ಬಂದವರು: ಸಿ.ಟಿ.ರವಿ

ಬಿಜೆಪಿಯಿಂದ ಬಂದ ಎಂ.ಪಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿಸಿದ ಎಸ್.ಎಲ್.ಭೋಜೇಗೌಡರು ಕುಮಾರಸ್ವಾಮಿ ಪರವಾಗಿ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ. ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮ ಪಕ್ಷದ್ದೆ ಅಭ್ಯರ್ಥಿ ಇದ್ದರೂ ಕಾಂಗ್ರೆಸ್‌ಗೆ ಬಹಿರಂಗವಾಗಿ ಮತ ಕೇಳಿದರು. ಮಾಜಿ ಶಾಸಕ ಕುಮಾರಸ್ವಾಮಿ ಅವರು ಹಠಕ್ಕೆ ಚೂರಿ ನುಂಗಿ ರಾಜಕೀಯ ಭವಿಷ್ಯವನ್ನು ಕಳೆದುಕೊಂಡರು ಎಂದು ದೂರಿದರು.ಎಂ.ಪಿ.ಕುಮಾರಸ್ವಾಮಿ ಹಾಗೂ ಸಿ.ಟಿ.ರವಿ ಸೋಲಿನಿಂದ ಭೋಜೇಗೌಡರಿಗೆ ಖುಷಿಯಾಗಿದೆ ಅಷ್ಟೇ. ತಮ್ಮ ಪಕ್ಷದ ಸಂಘಟನೆಗೆ ಮಾತ್ರ ಅವರು ಒತ್ತುಕೊಡಲಿಲ್ಲ ಎಂದರು.

Latest Videos
Follow Us:
Download App:
  • android
  • ios