ಕೇಸರಿ ಕಂಡರೆ ಕಾಂಗ್ರೆಸ್ ಕೊತ ಕೊತ ಕುದಿಯುವುದು ಯಾಕೆ ಅನ್ನೋ ಬಿಜೆಪಿ ನಾಯಕ ಪ್ರಶ್ನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಕೇಸರಿ ಬಣ್ಣದ ಕುರ್ತಾ ಧರಿಸಿದ ಕಾರಣಕ್ಕೆ ತಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ನಾಯಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಅಮೇಥಿ(ಏ.28): ಬಿಜೆಪಿಯನ್ನು ವಿರೋಧಿಸುವ ವೇಳೆ ಕಾಂಗ್ರೆಸ್ ಹಲವು ಬಾರಿ ಕೇಸರಿ ಬಣ್ಣ, ಕೇಸರೀಕರಣ ಪದಗಳನ್ನು ಉಪಯೋಗಿಸಿದೆ. ಕೇಸರಿಯಿಂದ ದೂರ ಉಳಿಯುವ ಕಾಂಗ್ರೆಸ್ ಇದೀಗ ತಮ್ಮದೇ ಪಕ್ಷದ ಕಾರ್ಯಕರ್ತ ಕೇಸರಿ ಬಣ್ಣದ ಕುರ್ತು ಧರಿಸಿದ ಕಾರಣಕ್ಕೆ ನಾಯಕನೋರ್ವ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಕೇಸರಿ ಬಣ್ಣ ಕುರ್ತಾ ಧರಿಸಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಕಾರ್ಯಕರ್ತ ಅಖಿಲೇಶ್ ಶುಕ್ಲಾ ಮೇಲೆ ಅಮೇಥಿ ಕಾಂಗ್ರಸ್ ಜಿಲ್ಲಾಧ್ಯಕ್ಷ ಪ್ರದೀಪ್ ಸಿಂಘಾಲ್ ಹಲ್ಲೆ ಮಾಡಿದ್ದಾರೆ. ಇಷ್ಟೇ ಅಲ್ಲ ಕಾರ್ಯಕರ್ನ ಕೇಸರಿ ಬಟ್ಟೆ ಹರಿದು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತಂದಿದೆ.
ಕಾಂಗ್ರೆಸ್ ಕಾರ್ಯಕರ್ತ, ಅಮೇಥಿ ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಅಖಿಲೇಶ್ ಶುಕ್ಲಾ, ಕೇಸರಿ ಕುರ್ತಾ ಹಾಗೂ ಬಿಳಿ ಪ್ಯಾಂಟ್ ಧರಿಸಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದಾನೆ. ಅಮೇಥಿ ಕಾಂಗ್ರೆಸ್ ಕಚೇರಿಯಲ್ಲಿ ಆಯೋಸಿದ್ದ ಕಾರ್ಯಕರ್ತರ ಸಭೆಗೆ ಆಗಮಿಸಿದ ಅಖಿಲೇಶ್ ಶುಕ್ಲಾ ಮೇಲೆ ಇತರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಿಲ್ಲಾಧ್ಯಕ್ಷ ಗರಂ ಆಗಿದ್ದಾರೆ. ಕೇಸರಿ ಕುರ್ತಾ ಧರಿಸಿ ಬಿಜೆಪಿಗೆ ಬೆಂಬಲಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಹಿಂದೂ ಭಯೋತ್ಪಾದನೆ ರಾಜಕೀಯ ಸೃಷ್ಚಿ, ಅಸ್ತಿತ್ವದಲ್ಲಿಲ್ಲ: ಗೃಹ ಸಚಿವಾಲಯ
ಈ ಕುರಿತು ವಾಗ್ವಾದ ನಡೆದಿದೆ. ಇದರ ಬೆನ್ನಲ್ಲೇ ಪ್ರದೀಪ್ ಸಿಂಘಾಲ್ ಹಲ್ಲೆ ಮಾಡಿದ್ದಾನೆ. ಕಾರ್ಯಕರ್ತ ಅಖಿಲೇಶ್ ಶುಕ್ಲಾ ಕುರ್ತಾ ಹರಿದು ಹಾಕಿದ್ದಾನೆ. ಈ ಘಟನೆ ಬಳಿಕ ಅಖಿಲೇಶ್ ಯಾದವ್ ದೂರು ದಾಖಲಿಸಿದ್ದಾರೆ. ಅಮೇಥಿಯ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರದೀಪ್ ಸಿಂಘಾಲ್ ಜೊತೆ ಇತರ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಈ ಘಟನೆ ಉತ್ತರ ಪ್ರದೇಶ ಕಾಂಗ್ರೆಸ್ ಮಾತ್ರವಲ್ಲ, ವಿಧಾಸಭಾ ಚುನಾವಣೆ ನಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್‌ಗೂ ಹಿನ್ನಡೆಯಾಗಿದೆ.
ಕೇಸರಿ ವಿವಾದ ರಾಜ್ಯದಲ್ಲೂ ಹಲವು ಬಾರಿ ನಡೆದಿದೆ. ಇತ್ತೀಚೆಗೆ ಬಿಜೆಪಿಯ ವಿವೇಕ ಶಾಲಾ ಯೋಜನೆಯಲ್ಲಿ ಕೇಸರಿ ಬಣ್ಣ ಭಾರಿ ಸದ್ದು ಮಾಡಿತ್ತು. ವಿವೇಕ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದಾರೆ. ಈ ಮೂಲಕ ಬಿಜಪಿ ಕೇಸರೀಕರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕೇಸರಿ ಬಣ್ಣ ವಿವಾದ ಭಾರಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಸಚಿವ ಬಿಸಿ ನಾಗೇಶ್ ಈ ಕುರಿತು ಸ್ಪಷ್ಟನೆ ನೀಡಿದ್ದರು.
ಸಿನಿಮಾಗಳಲ್ಲಿ ಅನಗತ್ಯ ‘ಕೇಸರಿ ಬಳಕೆ’ಗೆ ಸಂತೋಷ್ ಅಸಮಾಧಾನ
ಕೇಸಬಿ ಬಣ್ಣ ಸರ್ಕಾರದ ನಿರ್ಧಾರವಲ್ಲ ಆರ್ಕಿಟೆಕ್ಟ್ ಹಾಕಿದ್ದಾರೆ, ಇದನ್ನು ನಾವು ಆರ್ಕಿಟೆಕ್ಟ್ ಮೇಲೆ ಬಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದ್ದರು.
ಕೇಸರಿ ಬಣ್ಣ ಹೌದು ಅಲ್ವೋ?, ಕೇಸರಿ ಬಣ್ಣ ಚೆನ್ನಾಗಿದೆ ಅಂತಾ ಹಾಕಿದ್ದಾರೆ. ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ, ಆರ್ಕಿಟೆಕ್ಟ್ ಮೇಲೆ ಬಿಡುತ್ತೇವೆ. ಇನ್ನು ಒಂದಿಷ್ಟುಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ ಕೇಸರಿ ಇದೆ. ಅದನ್ನ ಯಾಕೆ ಬಿಟ್ಕೊಂಡಿದ್ದಾರೆ. ಪೂರ್ತಿ ಹಸಿರು ಮಾಡಿಕೊಂಡು ಬಿಡಲಿ ಎಂದು ಕಾಂಗ್ರೆಸ್ ಹೆಸರು ಹೇಳದೇ ಅವರನ್ನು ಟೀಕಿಸಿದರು. ಇನ್ನು ಟಿಪ್ಪು ಸುಲ್ತಾನ್ ಮೂರ್ತಿ ನಿರ್ಮಾಣ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೈಸೂರಲ್ಲಿ ಟಿಪ್ಪು ಮೂರ್ತಿ ನಿರ್ಮಾಣ ಮಾಡಿದರೆ ಜನರೇ ಉತ್ತರಿಸುತ್ತಾರೆ ಅದಕ್ಕೆ ಏನು ಮಾಡಬೇಕು ಎನ್ನುವ ನಿರ್ಧಾರ ಮಾಡುತ್ತಾರೆ.
ವಿವೇಕ ತರಗತಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ತಪ್ಪೇನು? ರಾಷ್ಟಧ್ವಜದಲ್ಲೇ ಕೇಸರಿ ಬಣ್ಣ ಇದೆ. ಕೇಸರಿ ಕೂಡ ಒಂದು ಬಣ್ಣ. ವಿವೇಕ ಯೋಜನೆ ವಿವೇಕಾನಂದರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆ. ಪ್ರತಿಯೊಂದನ್ನೂ ವಿವಾದ ಮಾಡುವುದು ಕಾಂಗ್ರೆಸ್‌ನವರ ಅಭ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದರು.
