Asianet Suvarna News Asianet Suvarna News

ಹಿಂದೂ ಭಯೋತ್ಪಾದನೆ ರಾಜಕೀಯ ಸೃಷ್ಚಿ, ಅಸ್ತಿತ್ವದಲ್ಲಿಲ್ಲ: ಗೃಹ ಸಚಿವಾಲಯ

ಹಿಂದೂ ಭಯೋತ್ಪಾದನೆ ಅನ್ನೋ ಪದ ಹಲವು ಬಾರಿ ಚರ್ಚೆಯಾಗಿದೆ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದವರೇ ಹಿಂದೂ ಭಯೋತ್ಪಾದನೆ ಹೇಳಿಕೆ ನೀಡಿದ್ದರೆ. ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಕೆಲ ಸಂಘಟನೆಗಳ ವಿರುದ್ದ ವಾಗ್ದಾಳಿ ನಡೆಸುವಾಗ ಹಿಂದೂ ಭಯೋತ್ಪಾದನೆ ಪದ ಬಳಕೆಯಾಗಿದೆ. ಆದರೆ ಈ ಕುರಿತು ಕೇಂದ್ರ ಗೃಹ ಇಲಾಖೆ ವಿವರವಾದ ಉತ್ತರ ನೀಡಿದೆ. ದೇಶದಲ್ಲಿ ಹಿಂದೂ ಭಯೋತ್ಪಾದನೆ ಅಸ್ತಿತ್ವದಲ್ಲಿಲ್ಲ, ಇದು ರಾಜಕೀಯ ನಾಯಕರು ಹುಟ್ಟು ಹಾಕಿದ ಪದ ಎಂದಿದೆ.

Hindu or Saffron terrorism does not exist political leaders coins word Home Ministry reply to RTI application ckm
Author
First Published Jan 14, 2023, 3:39 PM IST

ನವದೆಹಲಿ(ಜ.14): ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಪದ ರಾಜಕಾರಣಿಗಳ ಬಾಯಲ್ಲಿ ಹೆಚ್ಚಾಗಿ ಬಳಕೆಯಾಗಿದೆ. ನಾಯಕರು ಬಳಸಿದ ಬಳಿಕ ಅವರ ಹಿಂಬಾಲಕರು ಈ ಪದ ಹಿಡಿದು ಹಗ್ಗಜಗ್ಗಾಟ ನಡೆಸಿದ್ದಾರೆ. ಮಾಲೆಗಾಂವ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದನೆ ಅನ್ನೋ ಪದ ಹೆಚ್ಚಾಗಿ ಉಪಯೋಗಿಸಲಾಗಿದೆ. ಅಜ್ಮಲ್ ಕಸಬ್ ಬಂಧನದ ಬಳಿಕವೂ ಕೇಸರಿ ಭಯೋತ್ಪಾದನೆ ಹೆಚ್ಚು ಚರ್ಚೆಯಾಗಿತ್ತು. ಈ ಕುರಿತು ಪುಸ್ತಕವೂ ಬಿಡುಗಡೆಯಾಗಿತ್ತು. ಪದೇ ಪದೆ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ವಿವಾದ ಸೃಷ್ಟಿಯಾಗುತ್ತಲೇ. ಹೀಗಾಗಿ ಆರ್‌ಟಿಐ ಕಾರ್ಯಕರ್ತ ಈ ಕುರಿತು ಕೇಂದ್ರ  ಗೃಹ ಇಲಾಖೆಯನ್ನು ಪ್ರಶ್ನಿಸಿದ್ದ. ಇದೀಗ ಉತ್ತರ ಬಂದಿದ್ದು, ದೇಶದಲ್ಲಿ ಕೇಸರಿ ಭಯೋತ್ಪಾದನೆ ಅಥವಾ ಹಿಂದೂ ಭಯೋತ್ಪಾದನೆ ಅಸ್ತಿತ್ವದಲ್ಲಿಲ್ಲ ಎಂದಿದೆ. ಇಷ್ಟೇ ಅಲ್ಲ ದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಪ್ರಫುಲ್ ಪಿ ಸರ್ದಾ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ, ಅಥವಾ ಪ್ರಕರಣ ದಾಖಲಾಗಿರುವ, ಆರೋಪ ಹೊತ್ತಿರುವ ಕೇಸರಿ ಭಯೋತ್ಪಾದನೆ ಅಥವಾ ಹಿಂದೂ ಭಯೋತ್ಪಾದನೆ ಸಂಘಟನೆಗಳ ಪಟ್ಟಿ ನೀಡಿ. ಇದರ ಜೊತೆಗೆ ಯಾವೆಲ್ಲಾ ಭಯೋತ್ಪಾದನೆ ಸಂಘಟನೆ ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರ್‌ಟಿಐನಡಿ ಪ್ರಶ್ನಿಸಿದ್ದಾನೆ. ಮಾಲೆಗಾಂವ್ ಸ್ಪೋಟದಲ್ಲಿ ಕೇಸರಿ ಭಯೋತ್ಪಾದನೆ ಪಾತ್ರ, ದೇಶದಲ್ಲಿ ಬಾಂಬ್ ಸ್ಫೋಟದಲ್ಲ ಇಸ್ಲಾಮಿಕ್ ಭಯೋತ್ಪಾದನೆ ಪಾತ್ರದ ಕುರಿತು ಪ್ರಶ್ನಿಸಲಾಗಿತ್ತು. ಇದಕ್ಕೆ ಕೇಂದ್ರ ಗೃಹ ಇಲಾಖೆ ಉತ್ತರ ನೀಡಿದೆ.

ಎಲಾ ಕಳ್ಳರೇ..ದುರುಳರು ಅಂದುಕೊಂಡಂತಾಗಿದ್ದರೆ ಕಸಬ್ ಹಿಂದೂವಾಗಿ ಸಾಯುತ್ತಿದ!

ಕೇಂದ್ರ ಗೃಹ ಇಲಾಖೆಯ ಉತ್ತರ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಫುಲ್ಲಾ ಪಿ ಸರ್ದಾ, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇದುವರೆಗೂ ಹಿಂದೂ ಅಥವಾ ಕೇಸರಿ ಭಯೋತ್ಪಾದನೆ ಅಸ್ತಿತ್ವದಲ್ಲಿ ಇಲ್ಲ. ಇದು ರಾಜಕಾರಣಿಗಳು ಹುಟ್ಟುಹಾಕಿದ ಪದ ಎಂದು ಗೃಹ ಇಲಾಖೆ ಹೇಳಿದೆ. ದೇಶದಲ್ಲಿ ಭಯೋತ್ಪದನಾ ಕೃತ್ಯದಲ್ಲಿ ಯಾವುದೇ ಹಿಂದೂ ಸಂಘಟನೆಗಳು ಅಥವಾ ಕೇಸರಿ ಸಂಘಟನೆಗಳು ಭಾಗಿಯಾಗಿಲ್ಲ ಎಂದಿದೆ. ರಾಜಕೀಯ ನಾಯಕರು ಆಧಾರವಿಲ್ಲದೆ ಕೇಸರಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಹೇಳಿಕೆ ನೀಡುತ್ತಿರುವುದು ಭಾರತೀಯನಾಗಿ, ಹಿಂದೂವಾಗಿ ನೋವಾಗುತ್ತಿದೆ ಎಂದಿದ್ದಾರೆ.

ಆರ್‌ಟಿಐ ನೀಡಿದ ಉತ್ತರದಲ್ಲಿ ದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳ ವಿವರ ನೀಡಿದೆ. ಇದು ದೇಶ ಹಾಗೂ ವಿಶ್ವದಲ್ಲಿ ಇಸ್ಲಾಮಿಕ್ ಟೆರರಿಸಂ ಕುರಿತು ಬೆಳಕು ಚೆಲ್ಲುತ್ತಿದೆ. ಈ ಉಗ್ರ ಕೃತ್ಯಕ್ಕೆ ಅಮಾಯಕರು ಬಲಿಯಾಗುತ್ತಿರುವದು ನಿಜಕ್ಕೂ ದುರಂತ ಎಂದು ಪ್ರಫುಲ್ಲಾ ಪಿ ಸರ್ದಾನ್ ಹೇಳಿದ್ದಾರೆ.

 

ಹಿಂದೂ ಭಯೋತ್ಪಾದನೆ ಇದೆ; ವಿವಾದಕ್ಕೆ ಗ್ರಾಸವಾಗಿದೆ 'ಕಮಲ್ ಕಾಂಗ್ರೆಸ್ ಮಾತು'

ಭಾರತದಲ್ಲಿ 42 ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಹಲವು ಭಯೋತ್ಪಾದನೆ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಮಾಹಿತಿ ನೀಡಿದೆ.  1967 (UAPA) ಕಾಯ್ದೆಯಡಿ ದೇಶದಲ್ಲಿ ಭಯೋತ್ವಾದನ ಕೃತ್ಯ ಎಸಗುತ್ತಿರುವ ಸಂಘಟನೆಗಳ ಕುರಿತು ಮಾಹಿತಿ ನೀಡಿದೆ. ಈ ಮೊದಲು ಜಮ್ಮ ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭಯೋತ್ಪಾದನೆ ಸಂಘಟನೆಗಳು ಕಾರ್ಯನಿರ್ವಹಿಸುತ್ತಿತ್ತು. ಬಹುತೇಕ ಭಯೋತ್ಪಾದನೆ ಸಂಘಟನೆಗಳು ಕಣಿವೆ ರಾಜ್ಯವನ್ನೇ ಹೆಡ್ ಆಫೀಸ್ ಮಾಡಿಕೊಂಡಿತ್ತು. ಆದರೆ ಈಗ ಭಾರತದ ಹಲವು ರಾಜ್ಯಗಳಲ್ಲಿ ಈ ಸಂಘಟನೆಗಳು ಬೇರು ಬಿಟ್ಟಿದೆ.

Follow Us:
Download App:
  • android
  • ios