ಬೆಂಗಳೂರು, (ಜುಲೈ.06): ರಾಜ್ಯದ ಜನಪ್ರತಿನಿಧಿಗಳಿಗೂ ಕೊರೋನಾ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಕೊರೋನಾ ಅಟ್ಯಾಕ್ ಆಗಿದೆ.

ಕಾಂಗ್ರೆಸ್ ಹಿರಿಯ ನಾಯಕ ಜನಾದರ್ನ ಪೂಜಾರಿಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಮೇಲ್ಮನೆ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ತಗಲಿರುವುದಾಗಿ ಖುದ್ದು ಪ್ರಾಣೇಶ್ ತಮ್ಮ ಫೇಸ್‌ ಬುಕ್ ಅಕೌಂಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಬಿಜೆಪಿ ಶಾಸಕರೊಬ್ಬರಿಗೆ ವಕ್ಕರಿಸಿದ ಕೊರೋನಾ .

"

ಮಾಜಿ ಕೇಂದ್ರ ಸಚಿವರಿಗೂ ತಗುಲಿದ ಕೊರೋನಾ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

'ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿಯು ಬಂದಿದ್ದು, ನನಗೆ ಹಾಗೂ ನನ್ನ ಪತ್ನಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಈಗಾಗಲೇ ನಾವು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದೇವೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ, ಶೀಘ್ರದಲ್ಲೆ ನಾವು ಗುಣಮುಖರಾಗಿ ಬರುತ್ತೇವೆ. ಈ ವಿಷಯ ತಿಳಿದು ಎಲ್ಲರೂ ನನ್ನನ್ನು ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ಕಾರಣ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷಮೆ ಇರಲಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದ ಹಾರೈಕೆಗೆ ಆಭಾರಿಯಾಗಿದ್ದೇನೆ. ನಾನು ನನ್ನ ಕುಟುಂಬ ಸದಾ ನಿಮ್ಮಗೆಲ್ಲ ಚಿರಋುಣಿಯಾಗಿರುತ್ತೇವೆ' ಎಂದು ಪ್ರಾಣೇಶ್ ತಿಳಿಸಿದ್ದಾರೆ.

ಕಾಂಗ್ರೆಸ್-ಬಿಜೆಪಿ ಶಾಸಕರಿಗೆ ಕೊರೋನಾ
ಹೌದು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಕೊರೋನಾ ವಕ್ಕರಿಸಿದೆ. ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರಿಗೆ ಸೋಂಕು ದೃಢಪಟ್ಟಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕರ್ನಾಟಕದ ಮಾಜಿ MLCಗೆ ಕೊರೋನಾ ಅಟ್ಯಾಕ್, ಆಸ್ಪತ್ರೆಗೆ ದಾಖಲು

ಇನ್ನು  ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರಿಗೆ ಕೊರೋನಾ ಮಹಾಮಾರಿ ಅಟ್ಯಾಕ್ ಆಗಿದೆ. ಜು.5ರ ಭಾನುವಾರ ಕೊರೋನಾ ತಪಾಸಣೆಗೆ ಒಳಗಾಗಿದ್ದರು. ಜು.6ರ ಸೋಮವಾರ ಅವರ ವರದಿ ಬಂದಿದ್ದು, ಸೋಂಕು ತಗಲಿರುವುದು ದೃಢಪಟ್ಟಿದೆ. 

"

ಅಲ್ಲದೇ ಮಾಜಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣಗೂ ಸಹ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಿಲ್ಲರ್ ಕೊರೋನಾಗೆ ಶ್ರೀಮಂತ-ಬಡವ ಮತ್ತು ರಾಜಕಾರಣಿ ಎನ್ನುವುದು ಇಲ್ಲ. ಹಾಗಾಗಿ ಎಲ್ಲರೂ ಸೇಫ್ ಆಗಿ ಮನೆಯಲ್ಲೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ.