Asianet Suvarna News Asianet Suvarna News

ಕಾಂಗ್ರೆಸ್‌, ಜೆಡಿಎಸ್‌ ಚಕಮಕಿ, ಮಾಜಿ ಶಾಸಕ ಬಾಲಕೃಷ್ಣ ಕಾರಿಗೆ ಕಲ್ಲು

  • ಕಾಂಗ್ರೆಸ್‌, ಜೆಡಿಎಸ್‌ ಚಕಮಕಿ, ಮಾಜಿ ಶಾಸಕ ಬಾಲಕೃಷ್ಣ ಕಾರಿಗೆ ಕಲ್ಲು
  • ಮಾಜಿ ಶಾಸಕ ಮತ್ತು ಬಮೂಲ್‌ ಅಧ್ಯ​ಕ್ಷರ ಕಾರಿನ ಮೇಲೆ ಕಲ್ಲು ತೂರಾಟ
  •  ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ ವೇಳೆ ಕಲ್ಲೆಸೆತ
Congress JDS clash ex MLA Balakrishna car damaged maddur ramanagara rav
Author
First Published Nov 3, 2022, 2:29 AM IST

ಕುದೂರು(ರಾಮನಗರ) (ನ.3) ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ವಿಚಾ​ರವಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕ​ಮಕಿ ನಡೆದು ಉದ್ರಿಕ್ತ ಗುಂಪೊಂದು ಮಾಜಿ ಶಾಸಕ ಎಚ್‌.ಸಿ.ಬಾಲ​ಕೃಷ್ಣ ಮತ್ತು ಬಮೂಲ್‌ ಅಧ್ಯಕ್ಷ ನರ​ಸಿಂಹ​ಮೂ​ರ್ತಿ​ ಅ​ವರ ಕಾರು​ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕಾಮಸಾಗರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಬಾಲ​ಕೃಷ್ಣ ಅವರು ಕಟ್ಟ​ಡ ಉದ್ಘಾ​ಟ​ನೆ​ಗಾಗಿ ಆ​ಗ​​ಮಿ​​ಸಿದ್ದರು. ಶಾಸಕ ಎ.ಮಂಜುನಾಥ್‌ ಕೋರ್ಚ್‌ ಕೆಲಸದ ಕಾರಣ ಬರಲು ತಡವಾಗಿದ್ದು, ಅಷ್ಟರಲ್ಲಿ ಬಮೂಲ… ಅಧ್ಯಕ್ಷ ನರಸಿಂಹಮೂರ್ತಿ ನಮಗೆ ಬೇರೆ ಕೆಲಸವಿದೆ ಎಂದು ನೂತನ ಕಟ್ಟಡದ ಉದ್ಘಾಟನೆಗೆ ಟೇಪ್‌ ಕತ್ತರಿಸಲು ಮಾಜಿ ಶಾಸಕರೊಂದಿಗೆ ಹೋದಾಗ ಜೆಡಿಎಸ್‌ ಕಾರ್ಯಕರ್ತರು ಅಡ್ಡಿಪಡಿ​ಸಿ​ದ್ದಾ​ರೆ. ಟೇಪ್‌ ಕಿತ್ತುಹಾಕಿದ್ದಾರೆ. ಇದ​ರಿಂದ ಕೆರ​ಳಿದ ಕಾಂಗ್ರೆಸ್‌ ಕಾರ್ಯ​ಕರ್ತರು ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಕೆಲ ಕಾರ್ಯ​ಕ​ರ್ತರು ಪರ​ಸ್ಪರ ಕಲ್ಲು ತೂರಾ​ಟ ನಡೆ​ಸಿ​ದ್ದಾರೆ. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ನಂತರ ಬಾಲಕೃಷ್ಣ ವೇದಿಕೆ ಕಾರ್ಯಕ್ರಮ ಮುಗಿಸಿ ಹೊರ ನಡೆ​ದರು. ಆಗ ಆಕ್ರೋಶಗೊಂಡ ಜೆಡಿ​ಎಸ್‌ ಕಾರ್ಯ​ಕ​ರ್ತರು ಬಾಲಕೃಷ್ಣ ಮತ್ತು ನರ​ಸಿಂಹ​ಮೂ​ರ್ತಿ ಅವ​ರಿದ್ದ ಕಾರು​ಗ​ಳತ್ತ ಕಲ್ಲು ತೂರಿ​ದರು. ಕಲ್ಲು ತೂರಾ​ಟ​ದಲ್ಲಿ ಯಾವುದೇ ಹಾನಿ ಸಂಭ​ವಿ​ಸಿಲ್ಲ.

ಮತ್ತೊಮ್ಮೆ ಉದ್ಘಾಟನೆ: ಇದಾದ ಬಳಿಕ ಆಗಮಿಸಿದ ಶಾಸಕ ಎ.ಮಂಜುನಾಥ್‌ ಮತ್ತೊಮ್ಮೆ ಡೇರಿಯ ಟೇಪ್‌ ಕತ್ತರಿಸಿ ಉದ್ಘಾಟನೆ ಮಾಡಿ ಪಕ್ಕದಲ್ಲೇ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದರು.

ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ

Follow Us:
Download App:
  • android
  • ios