ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೇಶ ಒತ್ತೆಯಿಡಲೂ ಸಿದ್ಧರಾಗಿದ್ದಾರೆ: ಬಿ.ಸಿ ಪಾಟೀಲ್
ಬಿಜೆಪಿ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದೊಡ್ಡದಾಗಿ ಮಾಡಿದ್ರು ಎಂಬ ಡಿಕೆಶಿ ಹೇಳಿಕೆಗೆ ಕೃಷಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ಕೊಟ್ಟರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.6): ಬಿಜೆಪಿ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದೊಡ್ಡದಾಗಿ ಮಾಡಿದ್ರು ಎಂಬ ಡಿಕೆಶಿ ಹೇಳಿಕೆಗೆ ಕೃಷಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ಕೊಟ್ಟರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಮೂಲ ಕರ್ತೃಗಳು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತವರು ಮನೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನಿಂದ ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ. ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೇಶ ಒತ್ತೆಯಿಡಲೂ ಸಿದ್ಧರಾಗಿದ್ದಾರೆ. ಮಂಗಳೂರಲ್ಲಿ ಕುಕ್ಕರ್ ಸ್ಪೋಟ ಪ್ರಕರಣ, ಡಿಕೆಶಿಗೆ ಟಾಂಗ್ ನೀಡಿದರು. ದೇಗುಲದಲ್ಲಿ ಪೂಜಿಸಲು ಕುಕ್ಕರ್ ತೆಗೆದುಕೊಂಡು ಹೋಗುತ್ತಿದ್ದನೆ? ಬ್ಲಾಸ್ಟಿಂಗ್ ವಸ್ತುಗಳು ಪೂಜಿಸಲು ಒಯ್ಯುತ್ತಿದ್ದರಾ? ಎಂದು ಪ್ರಶ್ನಿಸಿದರು. ಆಕಸ್ಮಿಕವಾಗಿ ಆಟೋದಲ್ಲಿ ಸ್ಪೋಟವಾಗಿ ದುರಂತ ತಪ್ಪಿದೆ. ಜನನಿಬಿಡ ಪ್ರದೇಶದಲ್ಲಿ ಸ್ಪೋಟ ಆಗಿದ್ದರೆ ಅದೆಷ್ಟು ಜನರ ಸಾವಾಗುತ್ತಿತ್ತು. ಅಂಥವರ ರಕ್ಷಣೆ ಮಾಡುವ ಮಾತು ನಾಚಿಕೆಗೇಡು ಎಂದು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದರು.
ಹೆಚ್.ಡಿ.ಕೆ ಅಭಿಮಾನಿಗಳಿಗೆ ಡಬಲ್ ಸಂಭ್ರಮ: ಪಂಚರತ್ನ ಯಾತ್ರೆ ಜತೆಗೆ ಹುಟ್ಟುಹಬ್ಬದ ಖುಷಿ
ಕಳ್ಳನ ಮನಸು ಹುಳ್ಳಹುಳ್ಳಗೆ ಎಂಬಂತೆ ಕಾಂಗ್ರೆಸ್ ನಾಯಕರ ವರ್ತನೆ ಆಗಿದೆ. ಪೊಲೀಸ್ ಇಲಾಖೆಯ ತನಿಖೆಯಲ್ಲಿ ಸಾಕಷ್ಟು ಸಾಕ್ಷ ಪತ್ತೆ ಆಗಿದೆ. ಯಾವ ಸಂಘಟನೆಗಳ ಜತೆ ಆರೋಪಿಯ ನಂಟಿದೆ ತಿಳಿದಿದೆ. ದೇಶದ್ರೋಹಿ, ಭಯೋತ್ಪಾದಕರ ರಕ್ಷಣೆಗೆ ಇಳಿದಿದ್ದು ನೋವಿನ ಸಂಗತಿ ಎಂದರು. MLC ಹೆಚ್.ವಿಶ್ವನಾಥ್ ಯಾವಾಗ ಏನು ಹೇಳುತ್ತಾರೋ ಅವರಿಗೆ ಗೊತ್ತಿರಲ್ಲ. ಆಗ ಕೆಟ್ಟ ಸಮ್ಮಿಶ್ರ ಸರ್ಕಾರ ತೆಗೆಯಲು ಬಂದಿದ್ದೇವೆ ಎಂದಿದ್ದರು. ಈಗ ದುಡ್ಡಿನ ಆಮಿಷ ಒಡ್ಡಿದ್ದರು ಎಂಬ ಆರೋಪ ಸರಿಯಲ್ಲ. ಬಹಳಷ್ಟು ಜನರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಸದ್ಯದಲ್ಲೇ ಪಟ್ಟಿ ಹೊರಬೀಳಲಿದೆ ಕಾದು ನೋಡಿ ಎಂದು ಬಿ.ಸಿ.ಪಾಟೀಲ್ ಬಾಂಬ್ ಸಿಡಿಸಿದರು. ಹೆಸರು ಹೇಳಲು ಆಗಲ್ಲ, ಬರುವವರಿಗೆ ಆಮಿಷವೊಡ್ಡುತ್ತಾರೆ.
GROUND REPORT : ವಿಜಯನಗರ ಜಿಲ್ಲೆಯಲ್ಲಿ ಕೈ-ಕಮಲ ಮಧ್ಯೆ ಪೈಪೊಟಿ: ಆನಂದ್ ಸಿಂಗ್ ವಿರುದ್ಧ ನಿಲ್ಲೋರು ಯಾರು?
ಇನ್ನೂ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ಪಾಟೀಲ್, ಎತ್ತು ಏರಿಗೆ, ಕೋಣ ನೀರಿಗೆಳಿತು ಎಂಬಂತೆ ಕಾಂಗ್ರೆಸ್ ನಾಯಕರ ಕಥೆ. ಈಗಾಗಲೇ ಎತ್ತಿನಗಾಡಿ ಯಾತ್ರೆ, ಸೈಕಲ್ ಯಾತ್ರೆ ವಿಫಲ ಆಗಿವೆ. ಈಗ ಬಸ್ ಯಾತ್ರೆ, ಹೆಲಿಕಾಪ್ಟರ್ ಯಾತ್ರೆ, ಜೋಡೋ ಯಾತ್ರೆ, ತೋಡೋ ಯಾತ್ರೆ ಎಂದು ವ್ಯಂಗ್ಯ ವಾಡಿದರು. ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ, ಹಾಗಾಗಿ ಯಾತ್ರೆ ಮಾಡುತ್ತಿದ್ದಾರೆ ಎಂದರು.