Asianet Suvarna News Asianet Suvarna News
breaking news image

ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌ 15-17 ಸ್ಥಾನದಲ್ಲಿ ಗೆಲುವು ನಿಶ್ಚಿತ, ಸಚಿವ ರಾಜಣ್ಣ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಡವರ ,ದೀನ ದಲಿತರ, ಎಲ್ಲ ವರ್ಗದ ಹಾಗೂ ಕೂಲಿಕಾರ್ಮಿಕರ ಮನೆ ಬಾಗಿಲಿಗೆ ತಲುಪಿವೆ. ಈ ಯೋಜನೆಗಳು ಬಡವರ ಬದುಕಿಗೆ ವರದಾನವಾಗಿವೆ: ಸಹಕಾರ ಸಚಿವ ಕೆ.ಎನ್‌.ರಾಜಣ್ಣ 

Congress is Certain to win in 15-17 seats in Lok Sabha Election 2024 Says Minister KN Rajanna grg
Author
First Published May 31, 2024, 11:59 AM IST

ಮಧುಗಿರಿ(ಮೇ.31): ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 15 ರಿಂದ 17 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಡವರ ,ದೀನ ದಲಿತರ, ಎಲ್ಲ ವರ್ಗದ ಹಾಗೂ ಕೂಲಿಕಾರ್ಮಿಕರ ಮನೆ ಬಾಗಿಲಿಗೆ ತಲುಪಿವೆ. ಈ ಯೋಜನೆಗಳು ಬಡವರ ಬದುಕಿಗೆ ವರದಾನವಾಗಿವೆ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಮಹಿಳೆಯರು ಅತ್ಯಧಿಕ ಮತ ಹಾಕಿರುವುದರಿಂದ ಈ ಸಲ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ಈ ಸಲ ಲೋಕಸಭಾ ಎಲೆಕ್ಷನ್‌ಗೆ 751 ರಾಜಕೀಯ ಪಕ್ಷಗಳ ಸ್ಪರ್ಧೆ: ಇದು ದಾಖಲೆ

ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 8 ಸ್ಥಾನ ಹಾಗೂ ಎರಡನೇ ಹಂತದಲ್ಲಿ 9 ಸ್ಥಾನಗಳನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸ ನನಗಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಎನ್‌.ಗಂಗಣ್ಣ, ಸದಸ್ಯರಾದ ಎಂ.ವಿ.ಮಂಜುನಾಥ್ ಆಚಾರ್‌, ಶ್ರೀಧರ್‌, ಆಲೀಮ್‌, ಮಾಜಿ ಸದಸ್ಯರಾದ ಉಮೇಶ್‌, ಸಾಧಿಕ್‌, ನಿವೃತ್ತ ಪ್ರಾಂಶುಪಾಲ ಡಿ.ಎಸ್‌.ಮುನೀಂದ್ರಕುಮಾರ್‌, ಮುಖಂಡರಾದ ತಿಮ್ಣ್ಣಿ, ಆನಂದಕೃಷ್ಣ, ಬಾಬಪಕೃದ್ಧೀನ್, ನಬೀಲ್‌ಕೆ.ಪಾಳ್ಯ ಇದ್ದರು.

Latest Videos
Follow Us:
Download App:
  • android
  • ios