Karnataka Politics: ಕಾಂಗ್ರೆಸ್‌ ಸರ್ವರನ್ನೂ ಸಮಾನವಾಗಿ ಕಾಣುವ ಪಕ್ಷ: ಆಂಜನೇಯ

*  ಡಿಜಿಟಲ್‌ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾಜಿ ಸಚಿವ ಎಚ್‌. ಆಂಜನೇಯ
*  ನೋಂದಣಿದಾರರ ಕಾರ್ಯವೇ ಕಾಂಗ್ರೆಸ್‌ ಗೆಲುವಿಗೆ ಶ್ರೀರಕ್ಷೆ 
* ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಪರಿಗಣಿಸುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್‌ 

Congress is an Equal Party for Everyone Says Former Minister H Anjaneya grg

ಕೊಪ್ಪಳ(ಫೆ.10):  ಜನ ಚುನಾವಣೆ ಎದುರು ನೋಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌(Congress) ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಮಾಜಿ ಸಚಿವ ಎಚ್‌. ಆಂಜನೇಯ(H Anjaneya) ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್‌ ಜಿಲ್ಲಾ ತಾತ್ಕಾಲಿಕ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನ ಪ್ರಯುಕ್ತ ಜಿಲ್ಲೆಯ ಕಾಂಗ್ರೆಸ್‌ ಮುಖ್ಯ ನೋಂದಣಿದಾರರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಆರಂಭವಾಗಿರುವ ಕಾಂಗ್ರೆಸ್‌ ಆನ್‌ಲೈನ್‌ ಸದಸ್ಯತ್ವ ಅಭಿಯಾನದಲ್ಲಿ(Online Membership Campaign) ನೋಂದಣಿದಾರರು ಬಹುಮುಖ್ಯ ಪಾತ್ರಧಾರಿಗಳು. ಅವರು ಅಚ್ಚುಕಟ್ಟಾಗಿ ಕಾರ್ಯ ಮಾಡಬೇಕು. ನೋಂದಣಿದಾರರ ಕಾರ್ಯವೇ ಕಾಂಗ್ರೆಸ್‌ ಗೆಲುವಿಗೆ ಶ್ರೀರಕ್ಷೆ ಎಂದರು.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ದೊಡ್ಡ ಬದಲಾವಣೆ, ಡಿಕೆಶಿ ಸಮೀಕ್ಷೆ

ಕೊಪ್ಪಳ(Koppal) ಜಿಲ್ಲೆಗೆ ಸಾಕಷ್ಟು ಸಲ ಬಂದಿದ್ದೇನೆ. ಜಿಲ್ಲೆ ರಾಜ್ಯಕ್ಕೆ(Karnatak) ಕಾಂಗ್ರೆಸ್‌ ನೋಂದಣಿ ಅಭಿಯಾನದಲ್ಲಿ ಪ್ರಥಮ ಇರಬೇಕು. ಮೊದಲು ಬರುವ ರೀತಿಯಲ್ಲಿ ಕೆಲಸ ಮಾಡಿ. ನಾನು ಜಿಲ್ಲೆಯ ಉಸ್ತುವಾರಿಯಾಗಿದ್ದು ಖುಷಿಯಾಗಿದೆ. ಕಾಂಗ್ರೆಸ್‌ ಪಕ್ಷ ಐತಿಹಾಸಿಕ, ಸಾಮಾಜಿಕ ಸೇವೆ(Social service) ಮಾಡುವ ರಾಜಕೀಯ ಸಂಸ್ಥೆ. ಈ ಪಕ್ಷಕ್ಕೆ ಸೇವೆಗಾಗಿ ಬರಬೇಕು. ಪಕ್ಷ ಸಹ ಅಷ್ಟೇ ಪ್ರಮಾಣದಲ್ಲಿ ಸೇವಾಕರ್ತರನ್ನು ಗುರುತಿಸಿ ಸ್ಥಾನಮಾನ ಕೊಡುತ್ತದೆ. ಎಲ್ಲ ಜಾತಿ(Caste), ಧರ್ಮದವರನ್ನು(Religion) ಸಮಾನವಾಗಿ ಪರಿಗಣಿಸುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್‌ ಎಂದರು.

ಹಿಂದೊಮ್ಮೆ ನಾಲ್ಕಾಣೆ ಕೊಟ್ಟು ಸದಸ್ಯರಾಗಿದ್ದೆವು. ಈಗ ಮತ್ತೊಮ್ಮೆ ಐದು ರುಪಾಯಿ ಕೊಟ್ಟು ಹೆಚ್ಚು ಹೆಚ್ಚು ಸದಸ್ಯರಾಗೋಣ. ಎಲ್ಲರೂ ಒಟ್ಟಿಗೆ ಕೆಲಸ ಮಾಡಿ ಎಂದರು.

Rivers Linking ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಸಿದ್ದರಾಮಯ್ಯ ವಿವರಿಸಿದ್ದು ಹೀಗೆ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ(Shivaraj Tangadagi) ಮಾತನಾಡಿ, ನೋಂದಣಿದಾರರು ಸಿದ್ಧತೆ ಮಾಡಿಕೊಂಡು ಹೋದರೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ಒಂದು ತಿಂಗಳು ಅವಿರತವಾಗಿ ಪ್ರಯತ್ನ ಮಾಡಿ. ಪ್ರತಿ ದಿನ ಮೂರು ಗಂಟೆಗಳನ್ನು ಪಕ್ಷಕ್ಕಾಗಿ ಮೀಸಲಿಟ್ಟರೆ ಮುಂದೆ ಪಕ್ಷ ಅಧಿಕಾರಕ್ಕೆ ಬಂದು ಜನ ಸೇವೆ ಮಾಡುವದರ ಜತೆಗೆ ಉತ್ತಮವಾಗಿ ಪಕ್ಷಕ್ಕೆ ದುಡಿದವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದರು.

ಜಿಲ್ಲಾ ಡಿಜಿಟಲ್‌ ಸದಸ್ಯತ್ವ ಅಭಿಯಾನದ ಮಹಿಳಾ ಉಸ್ತುವಾರಿ ಕಮಲಮ್ಮ, ಮಾಜಿ ಮಂತ್ರಿ ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಕಾಂಗ್ರೆಸ್‌ ಎಸ್‌ಸಿ ಘಟಕ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಕಾಂಗ್ರೆಸ್‌ ಎಸ್‌ಟಿ ಘಟಕ ಜಿಲ್ಲಾಧ್ಯಕ್ಷ ಟಿ. ರತ್ನಾಕರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಯಲಬುರ್ಗಾ ಬ್ಲಾಕ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಗಂಗಾವತಿ ಬ್ಲಾಕ್‌ ಅಧ್ಯಕ್ಷ ಶಾಮೀದ್‌ ಮನಿಯಾರ್‌, ಕೊಪ್ಪಳ ನಗರ ಬ್ಲಾಕ್‌ ಅಧ್ಯಕ್ಷ ಕಾಟನ್‌ ಪಾಶಾ, ಜಿಲ್ಲಾ ಯುವ ಅಧ್ಯಕ್ಷ ಗವಿಸಿದ್ದನಗೌಡ ಪಾಟೀಲ್‌, ಜಿಲ್ಲಾ ಕಿಸಾನ್‌ ಘಟಕ ಅಧ್ಯಕ್ಷ ರುದ್ರೇಶ ಡ್ಯಾಗಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಸಲೀಂ ಅಳವಂಡಿ, ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರ, ಜಿಲ್ಲಾ ಮಾಧ್ಯಮ ವಕ್ತಾರರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ರವಿ ಕುರಗೋಡ, ರಾಜ್ಯ ಮಹಿಳಾ ಕಾರ್ಯದರ್ಶಿ ಕಿಶೋರಿ ಬೂದನೂರ, ರಾಜ್ಯ ಮೀಡಿಯಾ ಪ್ಯಾನಲಿಸ್ಟ್‌ ಶೈಲಜಾ ಹಿರೇಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ, ಮುಖಂಡರಾದ ವಿರುಪಾಕ್ಷ ಮೋರನಾಳ, ಪಂಪಣ್ಣ ಪೂಜಾರ, ವಿರುಪಾಕ್ಷಪ್ಪ ಕಟ್ಟಿಮನಿ, ಗುರುಬಸವರಾಜ ಹಳ್ಳಿಕೇರಿ, ಹನುಮೇಶ ಹೊಸಳ್ಳಿ ಇತರರಿದ್ದರು.
 

Latest Videos
Follow Us:
Download App:
  • android
  • ios