* 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ * ಬಿಜೆಪಿ ವಿರುದ್ಧ ಆಪರೇಷನ್ ಹಸ್ತಕ್ಕೆ ಕೈ ಹಾಕಿದೆಯಾ ಕಾಂಗ್ರೆಸ್..?* ಆಪರೇಷನ್ ಕಮಲದಿಂದ 14 ಕ್ಷೇತ್ರದಲ್ಲಿ ಕಾಂಗ್ರೆಸ್ ಆಗಿರುವ ನಷ್ಟ ತುಂಬುಕೊಳ್ಳಲು ಕೈ ಪ್ಲಾನ್..* ಕಾಂಗ್ರೆಸ್ ಗಾಳ ಹಾಕ್ತಿರುವ ಮಾಹಿತಿ ತಿಳಿದು ಗುಡುಗಿದ್ರಾ ಬಿಎಸ್ ವೈ..? 

ಬೆಂಗಳೂರು, (ಸೆ.19): 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಕ್ಷೇತ್ರಗಳಿಗೆ ಫಿಟ್ ಕ್ಯಾಂಡಿಡೇಟ್‌ಗಳನ್ನ ಹುಡುಕುತ್ತಿದೆ. 

ಕಳೆದ ಬಾರಿ ಹಿನ್ನಡೆ ಅನುಭವಿಸಿದ್ದ ಕ್ಷೇತ್ರಗಳ ಜತೆಗೆ ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿ ಹೋಗಿರುವ ಶಾಸಕರ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ಮೆಗಾ ಪ್ಲಾನ್ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಿಗೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರೂ ಸಹ ಕಾಂಗ್ರೆಸ್ ಗಾಳ ಹಾಕುತ್ತಿದೆ. ಈಗಾಗಲೇ ಜೆಡಿಎಸ್‌ ಆಪರೇಷನ್ ಮಾಡಿರುವ ಕಾಂಗ್ರೆಸ್ ಇದೀಗ ಬಿಜೆಪಿಯತ್ತ ಚಿತ್ತ ನೆಟ್ಟಿದೆ.

"

ಬಿಜೆಪಿ ನಾಯಕರನ್ನ ಕಾಂಗ್ರೆಸ್ ಸಂಪರ್ಕಿಸಿದೆ: ಬಿಎಸ್​ವೈ ಸ್ಫೋಟಕ ಹೇಳಿಕೆ

ಜೌದು...ಆಪರೇಷನ್ ಕಮಲದಿಂದ 14 ಕ್ಷೇತ್ರದಲ್ಲಿ ಕಾಂಗ್ರೆಸ್ ಆಗಿರುವ ನಷ್ಟ ತುಂಬುಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಹಳೆ ಮೈಸೂರು, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ, ಜೆಡಿಎಸ್ ಶಾಸಕರನ್ನ ಕಾಂಗ್ರೆಸ್‌ಗೆ ಸೆಳಯಲು ಕೈ ನಾಯಕರು ಸದ್ದಿಲ್ಲದೇ ಕಸರತ್ತು ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಇದಕ್ಕೆ ಪೂರಕವೆಂಬಂತೆ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿದೆ. ವಿರೋಧ ಪಕ್ಷಗಳನ್ನ ಹಗುರವಾಗಿ ಕಾಣಬೇಡಿ ಎಂದು ಸ್ವತಃ ಬಿಎಸ್‌ವೈ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಹೇಳಿದ್ದಾರೆ. ತಮ್ಮ ತವರು ಜಿಲ್ಲೆಯಲ್ಲೇ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕ್ತಿರುವ ಮಾಹಿತಿ ತಿಳಿದೇ ಬಿಎಸ್‌ವೈ, ಸಭೆಯಲ್ಲಿ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್, ಯಾವೆಲ್ಲಾ ಶಾಸಕರಿಗೆ ಗಾಳ ಹಾಕುತ್ತಿದೆ ಎನ್ನುವ ಪಟ್ಟಿ ಈ ಕೆಳಿಗಿನಂತಿದೆ.

ದೊಡ್ಡ ಮಟ್ಟದಲ್ಲಿ ಆಪರೇಷನ್ ಹಸ್ತ: ಡಜನ್‌ ನಾಯಕರಿಗೆ ಕಾಂಗ್ರೆಸ್‌ ಗಾಳ...!

ಸೊರಬದ ಮೇಲೆ ಡಿಕೆಶಿ ಕಣ್ಣು

ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗರಾಪ್ಪ ಅವರನ್ನ ಕರೆತರಲು ಡಿಕೆ ಶಿವಕುಮಾರ್ ತೆರೆಮರೆಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದು, ಇದೀಗ ಕಾಗೋಡು ತಿಮ್ಮಪ್ಪ ಅವರ ಮೂಲಕ ಶಾಸಕ ಕುಮಾರ ಬಂಗಾರಪ್ಪ ಅವರನ್ನೂ ಸೆಳೆಯಲು ಡಿಕೆಶಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ: ಕಾಂಗ್ರೆಸ್‌ ಸೇರುವುದಾಗಿ ಬಹಿರಂಗವಾಗಿ ಘೋಷಿಸಿದ ಶಾಸಕ

ಗೂಳಿಹಟ್ಟಿ ಶೇಖರ್ ಸೆಳೆಯಲು ಡಿಕೆಶಿ ಪ್ಲಾನ್
ಹೌದು...ಹೊಸದುರ್ಗಾ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನ ಕಾಂಗ್ರೆಸ್‌ಗೆ ಕರೆತರಲು ಡಿಕೆ ಶಿವಕುಮಾರ್ ತಂತ್ರ ರೂಪಿಸಿದ್ದಾರೆ. ಪಕ್ಷದ ನಡೆಗೆ ಅಸಮಾಧಾನಗೊಂಡಿರುವ ಗೂಳಿಹಟ್ಟಿ ಶೇಖರ್, ಬಹಿರಂಗವಾಗಿಯೇ ಬಿಎಸ್‌ವೈ ಪುತ್ರನ ಹಸ್ತಕ್ಷೇಪದ ಬಗ್ಗೆ ಹೇಳಿಕೆ ನೀಡಿದ್ದರು. ಇದೆಲ್ಲಾ ಅಂಶಗಳನ್ನ ತಿಳಿದು ಡಿಕೆಶಿ ಗೂಳಿಹಟ್ಟಿಗೆ ಗಾಳ ಹಾಕಿದ್ದಾರೆ.

ಪೂರ್ಣಿಮಾ ಶ್ರೀನಿವಾಸ್ ಕರೆತರಲು ಕಸರತ್ತು

ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ದಿವಂಗತ ಕೃಷ್ಣಪ್ಪ ಅವರ ಪುತ್ರಿ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಕರೆತರಲು ಕೈ ನಾಯಕರ ಪ್ಲಾನ್ ಮಾಡಿದ್ದಾರೆ. ಕೊನೆ ಸಮಯದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಅಮಸಾಧಾನಗೊಂಡಿದ್ದು, ಇದನ್ನೇ ಬಳಸಿಕೊಂಡು ಕಾಂಗ್ರೆಸ್‌ಗೆ ಸೆಳೆಯುವ ತಂತ್ರ ನಡೆದಿದೆ.

ಹಿರಿಯೂರು ಶಾಸಕಿ ಪೂರ್ಣಿಮಾ ಬಿಜೆಪಿ ಬಿಡ್ತಾರಾ..?

ಮೈಸೂರು, ಹಾಸನದಲ್ಲೂ ಆಪರೇಷನ್ ಹಸ್ತ

ಮೈಸೂರು ಹಾಗೂ ಹಾಸನದಲ್ಲೂ ಸಹ ಅಪರೇಷನ್ ಮಾಡಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಅವರು ಕಾಂಗ್ರೆಸ್ ಸೇರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದರ ಮಧ್ಯೆ ನಂಜನಗೂಡು ಶಾಸಕ ಹರ್ಷವರ್ಧನ್ ಕತೆತರುವ ಪ್ಲಾನ್ ಹಾಕಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಬಿಜೆಪಿಯ ಕೆಲ ತತ್ವ ಸಿದ್ಧಾಂತಗಳು ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗಾಗಲೇ ಬಹಿರಂಗವಾಗಿಯೇ ಬಿಜೆಪಿ ನಾಯಕರನ್ನು ಟೀಕಿಸಿದ್ದು ಉಂಟು. ಈ ಒಂದು ಆಧಾರದ ಮೇಲೆ ಅವರ ಅಳಿಯ ಆಗಿರುವ ಹರ್ಷವರ್ಧನ್ ಅವರಿಗೆ ಕೈ ನಾಯಕರು ಗಾಳ ಹಾಕಿದ್ದಾರೆ ಎನ್ನುವ ಮಾಹಿತಿ ಇದೆ.

ಕಾಂಗ್ರೆಸ್ ಸೇರ್ತಾರಾ ಶಿವನಗೌಡ ನಾಯಕ್?

ಬಿಎಸ್‌ವೈ ಹಾಗೂ ಈಗ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಸಮಾಧಾನಗೊಂಡಿರುವ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಕ್ಷದ ಮೇಲೆ ಮುನಿಸಿಕೊಂಡಿದ್ದು, ಕೆಲ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಅಲ್ಲದೇ ಕಾಂಗ್ರೆಸ್ ನಾಯಕರು ಸಹ ಶಿವನಗೌಡ ಅವರನ್ನ ಕಾಂಗ್ರೆಸ್‌ಗೆ ಕರೆತಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ,

ನನಗೆ ಹಿರಿಯ ನಾಯಕರು ಅನ್ಯಾಯ ಮಾಡಿದ್ದಾರೆ : ಬಿಜೆಪಿ ಶಾಸಕ

ತಮಕೂರು ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರಿಗೆ ಗಾಳ
ಯೆಸ್... ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ವಾಸು, ತುಮಕೂರು ಗ್ರಾಮಾಂತರ ಗೌರಿಶಂಕರ್ ಅವರ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಈ ಇಬ್ಬರು ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆದಿದೆ.

ಕೋಲಾರ ಜೆಡಿಎಸ್‌ ಶಾಸಕ ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್

ಈಗಾಗಲೇ ಜೆಡಿಎಸ್ ನಾಯಕರ ವಿರುದ್ಧವೇ ಬಹಿರಂಗ ಯುದ್ಧಕ್ಕಿಳಿದಿರುವ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಈ ಬಗ್ಗೆ ಅವರೇ ಬಹಿರಂಗವಾಗಿ ಹೇಳಿದ್ದಾರೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಸೇರಲು ಇಚ್ಛಿಸಿದ್ದೇನೆ ಎಂದು ಶ್ರೀನಿವಾಸ್ ಗೌಡ ಅಂತರಾಳದ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಮುಂದಿನ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಣತೊಟ್ಟಿದ್ದು ಈಗಿನಿಂದಲೇ ಯಾರು-ಯಾರು ಬೇಕೋ ಅವರನ್ನ ಸಂಪರ್ಕಿಸುತ್ತಿದೆ.