Asianet Suvarna News Asianet Suvarna News

ನಿಗಮ-ಮಂಡಳಿ ನೇಮಕಕ್ಕೆ ಹೈಕಮಾಂಡ್ ಸೂತ್ರ ಫೈನಲ್

ನಿಗಮ-ಮಂಡಳಿಗಳಿಗೆ ಒಟ್ಟು 1,144 ಸದಸ್ಯರ ನೇಮಕ ಮಾಡಬೇಕಿದ್ದು, ಸದಸ್ಯರ ನೇಮಕದ ಬಗ್ಗೆ ನಿರ್ಧರಿಸಲುಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಹತ್ತು ಮಂದಿ ಸದಸ್ಯರ ಸಮಿತಿ ರಚಿಸಲಾಗಿತ್ತು. ಆದರೆ ಹೈಕಮಾಂಡ್ ಶಾಸಕರಿಗೆ 3 ಮಂದಿ ಸದಸ್ಯರ ನೇಮಕಕ್ಕೆ ಮಾತ್ರ ಶಿಫಾರಸು ಅಧಿಕಾರ ನೀಡಿದೆ. 

Congress High Command formula is final for appointment of Corporation Board members in Karnataka grg
Author
First Published Oct 1, 2024, 9:33 AM IST | Last Updated Oct 1, 2024, 9:33 AM IST

ಬೆಂಗಳೂರು(ಅ.01):  ನಿಗಮ ಮಂಡಳಿಗಳಿಗೆ ಸದಸ್ಯರ ನೇಮಕಕ್ಕೆ ಹರಸಾಹಸ ನಡೆಯುತ್ತಿದ್ದು, ಹೈಕಮಾಂಡ್ ಸೂಚಿಸಿರುವ ಫಾರ್ಮುಲಾ ಪಾಲನೆ ಮಾಡಿಯೇ ಸದಸ್ಯರ ನೇಮಕ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ. 

ನಿಗಮ-ಮಂಡಳಿಗಳಿಗೆ ಒಟ್ಟು 1,144 ಸದಸ್ಯರ ನೇಮಕ ಮಾಡಬೇಕಿದ್ದು, ಸದಸ್ಯರ ನೇಮಕದ ಬಗ್ಗೆ ನಿರ್ಧರಿಸಲುಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಹತ್ತು ಮಂದಿ ಸದಸ್ಯರ ಸಮಿತಿ ರಚಿಸಲಾಗಿತ್ತು. ಆದರೆ ಹೈಕಮಾಂಡ್ ಶಾಸಕರಿಗೆ 3 ಮಂದಿ ಸದಸ್ಯರ ನೇಮಕಕ್ಕೆ ಮಾತ್ರ ಶಿಫಾರಸು ಅಧಿಕಾರ ನೀಡಿದೆ. ಈ ಬಗ್ಗೆ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಹಲವು ಸದಸ್ಯರು ಶಿಫಾರಸುಗಳನ್ನೇ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಪರಮೇಶ್ವರ್ ಅವರು ಸೋಮವಾರ ಸಿದ್ದರಾಮಯ್ಯ ಹಾಗೂ ಶಿವಕುಮಾ‌ರ್ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

ಯೋಗೇಶ್ವರ್‌ಗೆ ಚನ್ನಪಟ್ಟಣ ಟಿಕೆಟ್‌ ಬದಲು ನಿಗಮಾಧ್ಯಕ್ಷ ಸ್ಥಾನ?

ಹೈಕಮಾಂಡ್ ಫಾರ್ಮುಲಾ ಪ್ರಕಾರ ಶಾಸಕರಿಗೆ ತಲಾ 3. ವಿಧಾನಸಭೆ ಪರಾಜಿತ ಅಭ್ಯರ್ಥಿಗೆ 2, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ 2, ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ 5, ಪರಿಷತ್ ಸದಸ್ಯರಿಗೆ 1, ಸಿಎಂ, ಡಿಸಿಎಂಗೆ ತಲಾ 75 ಸದಸ್ಯರ ನೇಮಕದ ಅಧಿಕಾರ ನೀಡಲಾಗಿದೆ. ಆದರೆ ಬಹುತೇಕ ಶಾಸಕರು ಕೇವಲ 3 ಸದಸ್ಯರ ನೇಮಕಕ್ಕೆ ಅಧಿಕಾರ ನೀಡಿರುವುದರಿಂದ ಮುನಿಸಿಕೊಂಡಿದ್ದಾರೆ. ಶಿಫಾರಸುಗಳನ್ನೇ ನೀಡುತ್ತಿಲ್ಲ. ಹೀಗಾಗಿ ಶಾಸಕರ ಪಾಲಿನ ಸದಸ್ಯರ ನೇಮಕ ಅಧಿಕಾರವನ್ನೂ ಪಕ್ಷಕ್ಕೇ ತೆಗೆದುಕೊಳ್ಳಿ ಎಂದು ಪರಮೇಶ್ವರ್ ಸಲಹೆ ನೀಡಿದರು. ಆದರೆ ಇದಕ್ಕೆ ಶಿವಕುಮಾ‌ರ್ ಆಸಮ್ಮತಿ ವ್ಯಕ್ತಪಡಿಸಿದ್ದು, ಹೈಕಮಾಂಡ್ ಸೂಚಿಸಿದ ಫಾರ್ಮುಲಾ ಪ್ರಕಾರವೇ ನಡೆಯಬೇಕು. ಶಾಸಕರ ಮನವೊಲಿಸಿ ಶಿಫಾರಸು ಪಟ್ಟಿ ಪಡೆಯಿರಿ ಎಂದು ಸೂಚಿಸಿದರು ಎನ್ನಲಾಗಿದೆ. ಮುಖ್ಯಮಂತ್ರಿಗಳು ಪಟ್ಟಿಗೆ ಒಪ್ಪಿಗೆ ಸೂಚಿಸಿದ ಬಳಿಕ ಸದಸ್ಯರ ನೇಮಕ ಅಂತಿಮವಾಗುವ ಸಾಧ್ಯತೆಯಿದೆ.

ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚಿಸಲು ಶಿವಕುಮಾ‌ರ್ ಆಗಮಿಸಿ ದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಾವು ಮಾತಾಡಿಕೊಳ್ಳದಿದ್ದರೆ ಮತ್ಯಾರು ಮಾತಾಡಿಕೊಳ್ಳಬೇಕು? ನಾನು ಮತ್ತು ಶಿವಕುಮಾ‌ರ್ ಅವರು ಹೊಸದಾಗಿ ಭೇಟಿ ಆಗುತ್ತಿದ್ದೇವೆಯೇ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios