ರಾಹುಲ್ ಜತೆ ಸಭೆ ಅಂತ್ಯ: ಕಾಂಗ್ರೆಸ್‌ನ 8 ಶಾಸಕರಿಗೆ ಸಚಿವಗಿರಿ
ಸಂಪುಟ ವಿಸ್ತರಣೆ ಸರ್ಕಸ್ ಸಂಬಂಧ ಇಂದು [ಶುಕ್ರವಾರ] ದೆಹಲಿಯ ರಾಹುಲ್ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಅಂತ್ಯವಾಗಿದ್ದು, ಕಾಂಗ್ರೆಸ್ ನ 8 ಶಾಸಕರಿಗೆ ಸಚಿವಗಿರಿ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾದ್ರೆ ಯಾರಿಗೆ ಶನಿವಾರದ ಶಾಕ್? ಯಾರಿಗೆ ಮಂತ್ರಿ ಚಾನ್ಸ್..? ಇಲ್ಲಿದೆ ಪಟ್ಟಿ?
ಬೆಂಗಳೂರು, [ಡಿ.21]: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕೊನೆಗೂ ಅಂತ್ಯವಾಗಿದ್ದು, ಕಾಂಗ್ರೆಸ್ ನ 8 ಶಾಸಕರಿಗೆ ಸಚಿವಗಿರಿ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಇಂದು (ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ನಡೆಸಿದ್ದ ಸಭೆ ಅಂತ್ಯವಾಗಿದ್ದು, ನೂತನ ಸಚಿವರ ಹೆಸರುಗಳ ಪಟ್ಟಿ ಫೈನಲ್ ಮಾಡಿದ್ದಾರೆ.
ರಾಹುಲ್ ಜತೆ ಸಭೆ ಅಂತ್ಯ: ಕಾಂಗ್ರೆಸ್‌ನ 8 ಶಾಸಕರಿಗೆ ಸಚಿವಗಿರಿ
ಇಬ್ಬರು ಹಾಲಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಶಂಕರ್ ಗೆ ಕೊಕ್ ಕೊಟ್ಟು ಒಟ್ಟು 8 ಶಾಸಕರಿಗೆ ಮಂತ್ರಿ ಭಾಗ್ಯ ನೀಡುವುದು ಖಚಿತವಾಗಿದ್ದು, ನಾಳೆ [ಶನಿವಾರ] ಸಂಜೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಯಾರಿಗೆ ಶನಿವಾರದ ಶಾಕ್? ಯಾರಿಗೆ ಮಂತ್ರಿ ಚಾನ್ಸ್..?
ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸಿ.ಎಸ್.ಶಿವಳ್ಳಿ, ಇ.ತುಕಾರಾಂ, ಎಂ.ಟಿ.ಬಿ.ನಾಗರಾಜ್, ರಹೀಂಖಾನ್, ಪಿ.ಟಿ.ಪರಮೇಶ್ವರ್ ನಾಯ್ಕ್ ಮತ್ತು ಎಂ.ಬಿ.ಪಾಟೀಲ್ ಗೆ ಮಂತ್ರಿ ಸೀಟು ಪಕ್ಕಾ ಆಗಿದೆ. ಇನ್ನು ಮಂತ್ರಿ ಸ್ಥಾನ ಪ್ರಬಲ ಆಕಾಂಕ್ಷಿಯಾಗಿದ್ದ ಬಿ.ಸಿ.ಪಾಟೀಲ್ ನಿರಾಸೆಯಾಗಿದೆ.