ಮಂಗಳೂರು: ಬಿಜೆಪಿ ಭದ್ರಕೋಟೆ ಕರಾವಳಿ ನೆಲದಲ್ಲಿ ಕಾಂಗ್ರೆಸ್‌ ಬೃಹತ್‌ ಶಕ್ತಿ ಪ್ರದರ್ಶನ

ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಗಳಿಂದ ಕಂಗೆಟ್ಟಿದ್ದ ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಸಮಾವೇಶ ಹೊಸ ಹುಮ್ಮಸ್ಸು ನೀಡಿದೆ. ಪರಿಣಾಮವಾಗಿ ಸಹಸ್ರಾರು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಕಿಕ್ಕಿರಿದು ಸೇರಿದ್ದರು. ಈ ಮೂಲಕ ಕೇಸರಿ ನೆಲದಲ್ಲಿ ಕೈ ಪಕ್ಷ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದೆ. 

Congress Held Convention in Mangaluru grg

ಮಂಗಳೂರು(ಫೆ.18): ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ನೆಲದಿಂದಲೇ ಕಾಂಗ್ರೆಸ್‌ ಈ ಬಾರಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ್ದು, ಬೃಹತ್ ಶಕ್ತಿ ಪ್ರದರ್ಶನವನ್ನೂ ಮಾಡಿದೆ. ಅಲ್ಲದೆ, ರಾಜ್ಯ, ದೇಶಕ್ಕೆ '20 ಸೀಟ್' ಸಂದೇಶವನ್ನು ಒಕ್ಕೊರಲಿನಿಂದ ರವಾನಿಸಿದೆ.

ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಗಳಿಂದ ಕಂಗೆಟ್ಟಿದ್ದ ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಸಮಾವೇಶ ಹೊಸ ಹುಮ್ಮಸ್ಸು ನೀಡಿದೆ. ಪರಿಣಾಮವಾಗಿ ಸಹಸ್ರಾರು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಕಿಕ್ಕಿರಿದು ಸೇರಿದ್ದರು. ಈ ಮೂಲಕ ಕೇಸರಿ ನೆಲದಲ್ಲಿ ಕೈ ಪಕ್ಷ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ. ಕೆ.ಶಿವಕುಮಾರ್ ಮೂವರೂ ಕರಾವಳಿ ಸೇರಿ 20 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂಬ ಖಚಿತ ಭರವಸೆ ವ್ಯಕ್ತಪಡಿಸಿ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದ್ದಾರೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ₹5000 ಸಿಗ್ತಿದೆ: ಡಿ.ಕೆ.ಶಿವಕುಮಾರ್‌

ಕರಾವಳಿ ಟಾರ್ಗೆಟ್?: 

ಸಮಾವೇಶದಲ್ಲಿ ತಮ್ಮ ಭಾಷಣದ ಮೊದಲಾರ್ಧದುದ್ದಕ್ಕೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರಾವಳಿಗೆ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕರಾವಳಿಯ ಲಕ್ಷಾಂತರ ಮಂದಿ ಕಡುಬಡವರು ಭೂಮಾಲೀಕರಾಗಿ ಶ್ರೀಮಂತರಾದ ಕಥೆಯನ್ನು ಸವಿಸ್ತಾರವಾಗಿ ವಿವರಿಸಿದರು. ಈ ಹಿಂದೆ ಇಷ್ಟು ಸುದೀರ್ಘವಾಗಿ ರಾಷ್ಟ್ರೀಯ ನಾಯಕರೊಬ್ಬರು ಕರಾವಳಿಯನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದು ತೀರ ವಿರಳ. ಈ ಮೂಲಕ ಬಿಜೆಪಿ ಕೋಟೆಯ ಮತದಾರರಿಗೆ ಕಾಂಗ್ರೆಸ್‌ನ ಉಪಕಾರ ಸ್ಮರಣೆಯ ನೆನಪು ಮಾಡಿ ಸೆಳೆಯುವ ತಂತ್ರವೂ ಈ ಸಮಾವೇಶದ ಮೂಲಕ ನಡೆಯಿತು. 

ಮತ್ತೆ ಸದ್ದು ಮಾಡಿದ 'ಹುಲಿಯಾ': 

ಸಿದ್ದರಾಮಯ್ಯ ಮಾತನಾಡಲು ಮುಂದಾಗುತ್ತಿದ್ದಂತೆ ಜೈಕಾರ, ಘೋಷಣೆ ಸಭಿಕರಿಂದ ಕೇಳಿಬಂತು. ನಡುವೆ 'ಹೌದು ಹುಲಿಯಾ', 'ಟಗರು' ಎಂಬ ಧ್ವನಿಯೂ ಕೇಳಿಬಂತು. ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಅಕ್ಕಿ ತುಂಬಿದ ಕಳಸೆಯಲ್ಲಿ ತೆಂಗಿನ ಹಿಂಗಾರದ ಹೂವನ್ನು ಅರಳಿ ಸುವ ಮೂಲಕ ಖರ್ಗೆ ಸಮಾವೇಶಕ್ಕೆ ಚಾಲನೆ ನೀಡಿದರು.

Latest Videos
Follow Us:
Download App:
  • android
  • ios