ಮಸ್ಕಿಯಲ್ಲಿ ವಿಜಯ ಸಂಕಲ್ಪಯಾತ್ರೆ ನಾಳೆ: ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದ ಕೆಆರ್‌ಎಸ್

2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಆದ್ದರಿಂದ ಚುನಾವಣೆಯಲ್ಲಿ ಶತಾಗತಾಯವಾಗಿ ಗೆಲ್ಲಲು ಬಿಜೆಪಿ ಪಕ್ಷದಿಂದ ಮಸ್ಕಿ ಪಟ್ಟಣಕ್ಕೆ ಮಾ. 11ರಂದು ವಿಜಯ ಸಂಕಲ್ಪಯಾತ್ರೆ ಆಗಮಿಸಲಿದ್ದು, ಕೇಸರಿ ಪಡೆ ಬೃಹತ್‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

karnataka election bjp vijayasankalpa yatre at maski tomarrow jkl rav

ಮಸ್ಕಿ (ಮಾ.11) : 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಆದ್ದರಿಂದ ಚುನಾವಣೆಯಲ್ಲಿ ಶತಾಗತಾಯವಾಗಿ ಗೆಲ್ಲಲು ಬಿಜೆಪಿ ಪಕ್ಷದಿಂದ ಮಸ್ಕಿ ಪಟ್ಟಣಕ್ಕೆ ಮಾ. 11ರಂದು ವಿಜಯ ಸಂಕಲ್ಪಯಾತ್ರೆ(Vijayasankalpa yatre) ಆಗಮಿಸಲಿದ್ದು, ಕೇಸರಿ ಪಡೆ ಬೃಹತ್‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ರಾಜ್ಯದಲ್ಲಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗಿ ಆಸ್ತಿತ್ವಕ್ಕೆ ಬಂದ ಮಸ್ಕಿ ವಿಧಾನಸಭಾ ಕ್ಷೇತ್ರ(Maski assembly constituency) ಎಸ್ಟಿಮೀಸಲಾತಿಯಿಂದ ಈವರಗೆ ನಾಲ್ಕು ಬಾರಿ ವಿಧಾನಸಭೆ ಚುನಾವಣೆ ನಡೆದಿವೆ. ಈಗಾಗಲೇ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌(BJP-Congress) ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ಬಿಡುವಿಲ್ಲದಂತೆ ಹಳ್ಳಿ-ಹಳ್ಳಿಗಳಿಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಲೇಬೇಕು ಎಂದು ಮಸ್ಕಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಬೃಹತ್‌ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದೆ.

ರಾಯಚೂರು ವಿಧಾನಸಭಾ ಚುನಾವಣೆ : ಎಸ್‌ ಎಸ್ ರಾಜಮೌಳಿ ಚುನಾವಣಾ ಐಕಾನ್!

ಬಿಜೆಪಿ ಪಕ್ಷದದಿಂದ ಸಿದ್ಧತೆ:

ಮಸ್ಕಿ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್‌ ಅವರ ನೇತೃತ್ವದಲ್ಲಿ ಇಂದು ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದೆ. ತಂಡದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿರಾದ ಬಿ. ಶ್ರೀರಾಮುಲು, ಆನಂದ ಸಿಂಗ್‌, ಹಾಲಪ್ಪ ಆಚಾರ್‌ ಸೇರಿದಂತೆ ಬಿಜೆಪಿಯ ಅನೇಕ ಶಾಸಕರು ಈ ತಂಡದಲ್ಲಿ ಇರಲಿದ್ದಾರೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ನೇತೃತ್ವದಲ್ಲಿ ಇಲ್ಲಿನ ಬಿಜೆಪಿ ನಾಯಕರು ಬೃಹತ್‌ ವೇದಿಕೆ ಸಿದ್ದಪಡಿಸಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಜನ ಸೇರಿಸಲು ಕಸರತ್ತು:

ಇಂದು ನಡೆಯಲಿರುವ ವಿಜಯ ಸಂಕಲ್ಪಯಾತ್ರೆಗೆ ಇಲ್ಲಿನ ಬಿಜೆಪಿ ನಾಯಕರುಗಳು ಕಳೆದ ಒಂದು ವಾರದಿಂದ ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ತಮ್ಮ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಿದ್ದು, ಆದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪ್ರಾಬಲ್ಯವನ್ನು ಇನ್ನಷ್ಟುಹೆಚ್ಚಿಸಬೇಕಾಗಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಸಭೆಗೆ ಬರುವಂತೆ ಮನವಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು ಮೂವತ್ತು ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ನೀರಿಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಮಸ್ಕಿಗೆ ಬರು​ವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಪ್ಪು ಬಾವುಟ ಪ್ರದರ್ಶನ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಸ್ಕಿ ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದೆ. ಆದ್ದರಿಂದ ಮಸ್ಕಿಯಲ್ಲಿ ಮಾ.11ರಂದು ನಡೆಯುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬರುವ ಸರ್ಕಾರದ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಕೆಆರ್‌ಎಸ್‌ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ(Santosh Hiredinni) ಎಚ್ಚ​ರಿ​ಸಿ​ದ​ರು.

ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಸ್ಕಿ ತಾಲೂಕು ಕೇಂದ್ರವಾಗಿ ಇಷ್ಟುದಿನಗಳಾದರೂ ಇಲ್ಲಿನ ಜನರೂ ಸರ್ಕಾರಿ ದಾಖಲೆಗಳನ್ನು ಪಡೆದುಕೊಳ್ಳಲು ಮೂರು ತಾಲೂಕುಗಳಿಗೆ ಅಲೆದಾಡುವಂತಾಗಿದೆ. ಈವರೆಗೆ ಫಾಮ್‌ರ್‍ ನಂಬರ್‌ 57ಅರ್ಜಿಗಳನ್ನು ವಿಲೇವಾರಿ ಮಾಡಲು ಆಗಿಲ್ಲ ಎಂದು ಆರೋಪಿಸಿದರು.

ಇಷ್ಟೇ ಅಲ್ಲದೇ ಅಶೋಕ ಶಿಲಾಶಾಸನ(Ashoka inscription) ಸಾಕು ಇವರ ಮಾಡಿದ ಅಭಿವೃದ್ಧಿ ಗೊತ್ತಾಗುತ್ತದೆ. ಬಿಜೆಪಿ ಸರ್ಕಾರ(BJP government) ಸುಳ್ಳು ಭರವಸೆ ನೀಡುತ್ತದೆ. ಲಂಚ ತಿಂದ ಬಿಜೆಪಿ ಶಾಸಕ ಕೋರ್ಟ್ ಜಾಮೀನು ಪಡೆದುಕೊಂಡು ಅದ್ಧೂರಿ ಮೆರವಣಿಗೆ ಮಾಡಿರುವುದು ನಾಚೀಕೆಗೇಡಿನ ಸಂಗತಿ ಎಂದರು.

ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ

ಮಾ.11ರಂದು ನಡೆಯುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಬರುವ ಸಚಿವರಿಗೆ ಗೋ ಬ್ಯಾಕ್‌ ಹೋರಾಟ ಮಾಡಿ ಕಪ್ಪು ಬಾವುಟ ಪ್ರದರ್ಶನದ ಮಾಡಲಾಗುವುದು ಎಂದರು. ತಾಲೂಕು ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪೂರ, ಸಿಪಿಐ(ಎಂಎಲ್‌) ರೆಡ್‌ಸ್ಟಾರ್‌ ತಾಲೂಕು ಕಾರ್ಯದರ್ಶಿ ವೆಂಕಟೇಶ ನಾಯಕ, ತಿರುಪತಿ ಇತರರು ಇದ್ದರು.

Latest Videos
Follow Us:
Download App:
  • android
  • ios