ಕಾಂಗ್ರೆಸ್ ಗ್ಯಾರಂಟಿ ಈಗ ವಾರಂಟಿ ಕಳೆದುಕೊಂಡಿದೆ: ಬಿ.ವೈ.ರಾಘವೇಂದ್ರ ಲೇವಡಿ
ಕಳೆದ ಹತ್ತು ವರ್ಷದಲ್ಲಿ ಹಿಂದುತ್ವವನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಇಡೀ ವಿಶ್ವವೇ ಭಾರತದ ಅಭಿವೃದ್ಧಿಯ ವೇಗವನ್ನು ಗಮನಿಸುವಂತಾಗಿದೆ. ನಾನು ಸಂಸದನಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಹೆಚ್ಚಿನ ಅಭಿವೃದ್ಧಿ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ: ಬಿ.ವೈ.ರಾಘವೇಂದ್ರ
ಶಿವಮೊಗ್ಗ(ಏ.28): ರಾಜ್ಯ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಈಗ ವಾರಂಟಿ ಕಳೆದುಕೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. . ಅವರು ಇಲ್ಲಿಗೆ ಸಮೀಪದ ಗೌತಮಪುರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿಗೆ ಮೋಸ ಹೋಗಬೇಡಿ, ಅದು ತನ್ನ ವಾರಂಟಿಯನ್ನು ಕಳೆದುಕೊಂಡಿದೆ. ಈಗ ನಡೆಯುತ್ತಿರುವ ಚುನಾವಣೆ ತಾಯಂದಿರ, ಮಕ್ಕಳ, ಯುವಕರ ಭವಿಷ್ಯವನ್ನು ನಿರ್ಮಾಣ ಮಾಡುವಂತ ಚುನಾವಣೆ. ಭಾರತ ದೇಶ, ದೇಶದಲ್ಲಿನ ಜನತೆ ಸುರಕ್ಷಿತವಾಗಿ ಬದುಕಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕೆ ಬಿಜೆಪಿಗೆ ಮತ ಕೊಡಬೇಕು ಎಂದು ಮನವಿ ಮಾಡಿದರು.
ಕೋವಿಡ್ ನಂತಹ ಕಾಲದಲ್ಲಿ ವ್ಯಾಕ್ಸಿಂಗ್ ನೀಡುವುದರ ಮೂಲಕ ದೇಶದ ಜನರ ಜೀವ ಉಳಿಸಿದಂತಹ ಮಹಾನ್ ವ್ಯಕ್ತಿ ಮೋದಿ. ದೇಶದ ಉದ್ದಗಲಕ್ಕೂ ರಸ್ತೆ , ರೈಲ್ವೆ ಕುಡಿಯುವ ನೀರಿನ ಯೋಜನೆ, ರೈತರಿಗೆ ಸಹಾಯಧನ, ಆಯುಷ್ಮಾನ್ ಭಾರತ್ ಯೋಜನೆ ಅಡಿ ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಪಿಎಲ್ ಬಿಪಿಎಲ್ ಕಾರ್ಡ್‌ದಾರರಿಗೂ ವರ್ಷಕ್ಕೆ 5 ಲಕ್ಷಗಳ ರು.ಗಳ ಉಚಿತ ಚಿಕಿತ್ಸೆಯನ್ನು ಪಡೆಯುವಂತಹ ಒಂದು ಮಹತ್ತರವಾದ ಯೋಜನೆ ಲಕ್ಷಾಂತರ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ 67 ವರ್ಷಗಳ ಕಾಲ ಆಡಳಿತ ಮಾಡಿದ್ದರೂ ದೇಶವಾಸಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವಲ್ಲಿ ಯಶಸ್ವಿ ಕಂಡಿರಲಿಲ್ಲ. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾಗಿ 10 ವರ್ಷದಲ್ಲೇ ಭಾರತದ ಪ್ರಜೆಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವುದರ ಜೊತೆಗೆ ವಿಶ್ವಗುರುವಾಗಿ ಭಾರತ ಹೊರಹೊಮ್ಮುತ್ತಿರುವುದನ್ನು ವೀಕ್ಷಿಸುತ್ತಿದ್ದಾರೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ನೂರು ವರ್ಷಗಳು ತುಂಬುವಂತಹ ಸಂದರ್ಭದಲ್ಲಿ ಮೋದಿಯವರ ಮುಂದಾಲೋಚನೆಗೆ ಈಗಿನಿಂದಲೇ ಚಾಲನೆ ದೊರೆತಿದೆ ಎಂದರು.
ಜನರ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್: ಸಂಸದ ರಾಘವೇಂದ್ರ
ಕಳೆದ ಹತ್ತು ವರ್ಷದಲ್ಲಿ ಹಿಂದುತ್ವವನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಇಡೀ ವಿಶ್ವವೇ ಭಾರತದ ಅಭಿವೃದ್ಧಿಯ ವೇಗವನ್ನು ಗಮನಿಸುವಂತಾಗಿದೆ. ನಾನು ಸಂಸದನಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಹೆಚ್ಚಿನ ಅಭಿವೃದ್ಧಿ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರತ್ನಾಕರ ಹನಗೋಡು, ಭರ್ಮಪ್ಪ, ಡಾ.ರಾಜ ನಂದಿನಿ, ಮಲ್ಲಿಕಾರ್ಜುನ್ ಹಕ್ರೆ, ಪ್ರಶಾಂತ್ ಸಾಗರ್, ಶಾಂತಕುಮಾರ್, ಪ್ರಸನ್ನ ಕೈ ಕೆರೆ, ಹಾಗೂ ಗೌತಮ್ ಪುರದ ಬಿಜೆಪಿ ಪಕ್ಷದ ಯುವ ಮುಖಂಡರುಗಳು ಇದ್ದರು.
ಸಚಿವ ಮಧು ಅವರಿಂದ ಜಿಲ್ಲೆಗೆ ಕೊಡುಗೆ ಏನು?: ಬಿ.ವೈ.ರಾಘವೇಂದ್ರ
ಹೊಳೆಹೊನ್ನೂರು: ಮೊದಲನೇ ಬಾರಿಗೆ ಬಿಜೆಪಿಯಿಂದ ನಿಂತು, ಎರಡನೇ ಬಾರಿಗೆ ಜೆಡಿಎಸ್ ಗೆದ್ದು, ಮೂರನೇ ಬಾರಿಗೆ ಕಾಂಗ್ರೆಸ್ ನಿಂದ ಸಚಿವರಾಗಿರುವವರು ಕಳೆದ ಒಂದು ವರ್ಷದಿಂದ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಸ್ಪಷ್ಟಪಡಿಸಬೇಕು ಎಂದು ಮದು ಬಂಗಾರಪ್ಪನವರ ಹೆಸರು ಹೇಳದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದರು. ಅವರು ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ, ಶೋಭಾಯಾತ್ರೆ ಮೆರವಣಿಯನ್ನು ಉದ್ದೇಶಿಸಿ ಮಾತನಾಡಿದರು.
ಅವರು ಪಕ್ಷಾಂತರ ಮಾಡುತ್ತಿರುವುದರಿಂದ ಕಾರ್ಯಕರ್ತರ ಶ್ರಮ ಏನು ಎಂಬುದು ತಿಳಿದಿಲ್ಲ. ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಶಕ್ತಿ ಏನೆಂಬುದು ತೋರಿಸಿ ಕಾಂಗ್ರೆಸ್ ತಕ್ಕ ಪಾಠ ಕಲಿಸಬೇಕಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದಾಗಿದ್ದು, ಕಾರ್ಯಕರ್ತರು ಒಗ್ಗೂಡಿಸುವ ಕೆಲಸ ಯಶಸ್ವಿಯಾಗಿದೆ. ಏ.26 ರಂದು ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಭೂತ ಪೂರ್ವ ಗೆಲುವು ಸಾಧಿಸಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ. ಬಿಜೆಪಿ-ಜೆಡಿಎಸ್ ಸರ್ಕಾರ ಇದ್ದಾಗ ಕನಕ, ವಾಲ್ಮಿಕಿ ಜಯಂತಿಯನ್ನು ಆಚರಣೆಗೆ ತರಲಾಯಿತು. ಕನಕ ಪೀಠ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಮರಾಠ ಗೋಸಾಯಿ ಮಠಕ್ಕೆ 3 ಕೋಟಿ ಅನುದಾನ ನೀಡ ಲಾಗಿದೆ. ಉಪ್ಪಾರ ಸಮಾಜದ ಭಗೀರಥ ಮಠವನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಕಾಂಗ್ರೆಸ್‌ನಿಂದ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾಗ್ತಿದೆ: ಬಿವೈಆರ್
ಶಿವಮೊಗ್ಗ: ಜನರ ಮೂಗಿಗೆ ತುಪ್ಪ ಸವರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಈ ಚುನಾವಣೆಯಲ್ಲಿ ನಡೆಯಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳ ಮುಖಾಂತರ ತಲುಪಲು ಯತ್ನಿಸುತ್ತಿದೆ. ಆದರೆ, ಅದು ಸಫಲವಾಗಲ್ಲ. ಮಹಿಳೆಯರಿಗೆ 1 ಲಕ್ಷ ರು. ನೀಡುವ ಭರವಸೆ ನೀಡಿದ್ದಾರೆ. ಆದರೆ ನಮ್ಮ ದೇಶದಲ್ಲಿ 68 ಕೋಟಿ ಮಹಿಳೆಯರಿದ್ದು, 68 ಲಕ್ಷ ಕೋಟಿ ಹಣ ಬೇಕಾ ಗುತ್ತದೆ. ದೇಶದ ಬಜೆಟ್ ಇರುವುದೇ 48 ಲಕ್ಷ ಕೋಟಿ ರು. ಉಳಿದ ಹಣ ಎಲ್ಲಿಂದ ತರುತ್ತಾರೆ? ಇದು ಬೋಗಸ್ ಗ್ಯಾರಂಟಿ. ಮೋದಿ ಗ್ಯಾರಂಟಿಯೇ ಶಾಶ್ವತ ಗ್ಯಾರಂಟಿಯಾಗಿದ್ದು, ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಮೋದಿ ಗ್ಯಾರಂಟಿಯೇ ಬೇಕು ಎಂದರು.
ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ, ಚುನಾವಣಾ ಗಿಮಿಕ್ಸ್: ಬಿ.ವೈ.ವಿಜಯೇಂದ್ರ
ಶಿವಮೊಗ್ಗಕ್ಕೆ ನಾಳೆ ಕೆ.ಪಿ.ನಡ್ಡಾ: ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶಿವಮೊಗ್ಗ ಆಗಮಿಸಲಿದ್ದು, ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದ್ದಾರೆ. ವಾತಾವರಣ ದಿನದಿಂದ ದಿನಕ್ಕೆ ಬಿಜೆಪಿ ಪರ ವೃದ್ಧಿಯಾಗುತ್ತಿದ್ದು, ಅತಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಚುನಾವಣಾ ಪ್ರಚಾರ ಚೆನ್ನಾಗಿ ಆಗುತ್ತಿದೆ. ಹೋದಲೆಲ್ಲಾ ಜನರು ಮೋದಿಜಿಯವರ ಪರವಾಗಿ ಮಾತನಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ ಬಗ್ಗೆ ಮಾತನಾಡು ತ್ತಾರೆ. ನಾವು ಅತಿ ಹೆಚ್ಚು ಲೀಡ್‌ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.