ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಲು ವಿದೇಶದಲ್ಲಿ ಕುಳಿತು ಷಡ್ಯಂತ್ರ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ಆಗುವಂತೆ ವಿಪಕ್ಷ ನಾಯಕರಾದ ಬಿಎಸ್‌ವೈ ಮತ್ತು ಕುಮಾರಸ್ವಾಮಿ ಯುರೋಪ್‌ ಪ್ರವಾಸಲ್ಲಿದ್ದಾರೆ.

ಬೆಂಗಳೂರು (ಜು.27): ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಸರ್ಕಾರವನ್ನು ಬೀಳಿಸಲು ವಿದೇಶದಲ್ಲಿ ಕುಳಿತು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಹೆಚ್.ಡಿ. ಕುಮಾರಸ್ವಾಮಿ ಯುರೋಪ್‌ ಪ್ರವಾಸದಲ್ಲಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದೊಂದಿಗೆ ಯುರೋಪಿನ ಫಿನ್ಲ್ಯಾಂಡ್‌ಗೆ ಪ್ರವಾಸ ಕೈಗೊಂಡು ವಾರ ಕಳೆಯುತ್ತಾ ಬಂದಿದೆ. ಒಟ್ಟು 10 ದಿನಗಳ ಕಾಲ ಒಂದು ವಾರಗಳ ಕಾಲ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದಾರೆ. ಇನ್ನು ಕುಮಾರಸ್ವಾಮಿ ಅವರು ವಿದೇಶಕ್ಕೆ ತೆರಳಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಮ್ಮ ಸರ್ಕಾರ ಬೀಳಿಸಲು ವಿದೇಶದಲ್ಲಿ ಕುಳಿತು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಈ ವೇಳೆ ಸಿಂಗಾಪುರದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದರಿಂದ ಕುಮಾರಸ್ವಾಮಿ ಮೇಲೆ ಆರೋಪ ಕೇಳಿಬಂದಿರಲಿಲ್ಲ.

Breaking: ಕಾಂಗ್ರೆಸ್‌ ಸರ್ಕಾರ ಬೀಳಿಸಲು ವಿದೇಶದಲ್ಲಿ ಷಡ್ಯಂತ್ರ; ಡಿಸಿಎಂ ಡಿ.ಕೆ. ಶಿವಕುಮಾರ್

ಬುಧವಾರದಿಂದ ಒಂದು ವಾರ ಯೂರೋಪ್‌ ಪ್ರವಾಸ: ಆದರೆ, ಇದಾದ ಬೆನ್ನಲ್ಲೇ ನಿನ್ನೆ ರಾತ್ರಿ (ಬುಧವಾರ) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರ ಶಾಸಕ ವಿಜಯೇಂದ್ರ ಅವರೊಂದಿಗೆ ಒಂದು ವಾರಗಳ ಕಾಲ ಯೂರೋಪ್‌ ಪ್ರವಾಸವನ್ನು ಕೈಗೊಂಡಿದ್ದಾರೆ. ಅದರಲ್ಲಿಯೂ ಇಬ್ಬರೂ ಯುರೋಪ್‌ ದೇಶಗಳಿಗೇ ಪ್ರವಾಸ ಬೆಳೆಸಲಾಗಿದ್ದು, ಅಧಿಕಾರಕ್ಕೆ ಮತ್ತು ಲೋಕಸಭಾ ಚುನಾವಣೆ ಕುರಿತ ಮೈತ್ರಿಗಾಗಿ ಮಾತುಕತೆ ಮಾಡಲಿದ್ದಾರೆಯೇ ಎಂಬ ಅನುಮಾನಗಳೂ ಕೂಡ ವ್ಯಕ್ತವಾಗುತ್ತಿವೆ. ಈ ಬಗ್ಗೆ ಇಬ್ಬರು ನಾಯಕರು ಮಾತ್ರ ಸ್ಪಷ್ಟೀಕರಣ ನೀಡಲು ಸಾಧ್ಯವಾಗಲಿದೆ.

ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?: ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್‌ ಅವರು, "ವಿದೇಶದಲ್ಲಿ ಕುಳಿತು ನಮ್ಮ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ. ಇದೆಲ್ಲಾ ಒಂದು ತಂತ್ರವಾಗಿದೆ. ಇದರ ಬಗ್ಗೆ ನಮಗೂ ಮಾಹಿತಿ ಬಂದಿದೆ‌. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತ, ವಿದೇಶಕ್ಕೆ ಹೋಗಿ ಅಲ್ಲಿ ಕುಳಿತುಕೊಂಡೇ ಆಪರೇಷನ್ ಮಾಡ್ತಿದ್ದಾರೆ" ಎಂದು ತಿಳಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಹೇಳಿಕೆಯಾಗಿತ್ತು. ಈಗ ವಿಪಕ್ಷಗಳ ಇಬ್ಬರು ನಾಯಕರು ವಿದೇಶ ಪ್ರವಾಸದಲ್ಲಿರುವುದು ಕಾಂಗ್ರೆಸ್‌ ಪಾಳಯದಲ್ಲಿ ಮತ್ತಷ್ಟು ಅಭದ್ರತೆ ಎದುರಾಗಿದಂತಾಗಿದೆ.

Karnataka Govt Topple: ಡಿ.ಕೆ. ಶಿವಕುಮಾರ್ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ: ಬಿಜೆಪಿ ಟೀಕೆ

135 ಸ್ಥಾನಗಳಿದ್ದರೂ ಅತಂತ್ರ ಸ್ಥಿತಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ 135 ಸ್ಥಾನಗಳನ್ನು ಪಡೆದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಕಾಂಗ್ರೆಸ್‌ ಸರ್ಕಾರದ ಆಡಳಿತ ಆರಂಭವಾಗಿ ಎರಡು ತಿಂಗಳು ಪೂರ್ಣಗೊಳಿಸಿದ ತಕ್ಷಣವೇ ಈಗ ಸರ್ಕಾರವನ್ನು ಬೀಳಿಸಲು ಷಡ್ಯಂತ ನಡೆಯುತ್ತಿದೆ ಎನ್ನುವುದು ರಾಜ್ಯದ ಮಟ್ಟಕ್ಕೆ ಸ್ಪೋಟಕ ಹೇಳಿಕೆಯಾಗಿದೆ. ಬಿಜೆಪಿ ಮಾದರಿಯಲ್ಲಿಯೇ ಶಾಸಕರನ್ನು ಆಪರೇಷನ್‌ ಮಾಡಿ ಸೆಳೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.