ಕಾಂಗ್ರೆಸ್ ಸರ್ಕಾರದ್ದು ಸೇಡಿನ ರಾಜಕಾರಣ: ಮುನಿರಾಜು

ಸಿದ್ದರಾಮಯ್ಯ ಅವರು ಸಮಾಜದಲ್ಲಿ ಒಂದು ವರ್ಗವನ್ನು ಒದಗಿಸುವುದಕ್ಕಾಗಿ ಹಿಂದೂ ವಿರೋಧಿ ಆಡಳಿತವನ್ನು ನಡೆಸುತ್ತಿದ್ದು ಇದೇ ವೈಖರಿಯನ್ನು ಮುಂದುವರಿಸದಲ್ಲೇ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಅಗ್ರಹಿಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು

Congress Government is Politics of Revenge Says BJP State Secretary C Muniraju grg

ಚಿಕ್ಕಬಳ್ಳಾಪುರ(ಜ.04):  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಈ ಸರ್ಕಾರಕ್ಕೆ ಇದು ಗೌರವ ತರುವ ವಿಷಯವಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು. ಬುಧವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಸಿದ್ದರಾಮಯ್ಯ ಅವರು ಸಮಾಜದಲ್ಲಿ ಒಂದು ವರ್ಗವನ್ನು ಒದಗಿಸುವುದಕ್ಕಾಗಿ ಹಿಂದೂ ವಿರೋಧಿ ಆಡಳಿತವನ್ನು ನಡೆಸುತ್ತಿದ್ದು ಇದೇ ವೈಖರಿಯನ್ನು ಮುಂದುವರಿಸದಲ್ಲೇ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಅಗ್ರಹಿಸಿದರು.

31 ವರ್ಷಗಳ ಹಿಂದೆ 1992ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಆಂದೋಲನದ ವೇಳೆ ಉಂಟಾದ ಗಲಭೆಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತನ ಬಂಧನವನ್ನು ಖಂಡಿಸಿ ಕರ್ನಾಟಕ ಬಿಜೆಪಿ ಬುಧವಾರ ರಾಜ್ಯದ ಹಲವು ಭಾಗಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಕರಸೇವಾ ಸಮಯದಲ್ಲಿ ನಡೆದಿದ್ದ ಒಂದು ಘಟನೆಯನ್ನು ಮತ್ತೆ ಕೆದಕಿ ಹುಬ್ಬಳ್ಳಿ-ಧಾರವಾಡ ಪೊಲೀಸರಿಂದ ಅಂದಿನ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶ್ರೀಕಾಂತ್ ಪೂಜಾರಿ (51)ಎಂಬ ಕಾರ್ಯಕರ್ತನನ್ನು 31 ವರ್ಷಗಳ ನಂತರ ಬಂಧಿಸಿರುವುದು ನಾಚಿಕೆ ಗೇಡಿನ ಸಂಗತಿ. ಹಳೆಯ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಕರಸೇವಕರೊಬ್ಬರನ್ನು ಬಂಧಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸಿದೆ.

ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಸಂತೋಷಪಡಿಸಲು ಕಾಂಗ್ರೆಸ್ ಸರ್ಕಾರ ರಾಮಮಂದಿರ ಉದ್ಘಾಟನೆಯಾಗುವ ಹೊತ್ತಲ್ಲಿ ರಾಮಭಕ್ತರನ್ನು ಬಂಧಿಸಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರ ಮಾಡಿದ ಅನ್ಯಾಯ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮಾತನಾಡಿ, ಸಿದ್ದರಾಮಯ್ಯರವರು ಈ ರಾಜ್ಯದ ಮುಖ್ಯಮಂತ್ರಿಗಳು ಇದು ಇವರು ಅರಿತುಕೊಳ್ಳಬೇಕು. ಆದರೆ ಸಿದ್ದರಾಮಯ್ಯ ಅವರು ಕೇವಲ ಒಂದು ಸಮಾಜದ ಹಿತ ಸಂರಕ್ಷಕರಂತೆ ಆಡಳಿತ ನಡೆಸುತ್ತಿರುವುದು ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ನೋವನ್ನು ಮತ್ತು ಆಕ್ರೋಶವನ್ನು ಉಂಟುಮಾಡಿದೆ ಎಂದರು.

ಭಾಜಪ ಮುಖಂಡ ಸೀಕಲ್ ರಾಮಚಂದ್ರ ಗೌಡ ಮಾತನಾಡಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಾಧು ಸಂತರು, ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿತ್ತು. ರಾಮಮಂದಿರಕ್ಕೆ ಹೋರಾಟ ನಡೆಸಿದವರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿತ್ತು. ಕೋಟ್ಯಂತರ ಹಿಂದೂಗಳ ಹೋರಾಟದ ಫಲವಾಗಿ ತಲೆ ಎತ್ತಿರುವ ರಾಮಮಂದಿರ ಸಹಿಸಲಾಗದೆ ಸನಾತನ ವಿರೋಧಿ ಕಾಂಗ್ರೆಸ್ ಕರಸೇವಕರೊಬ್ಬರನ್ನು ಬಂಧಿಸಿದೆ ಎಂದರು.

ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ನಾಯಕತ್ವದಲ್ಲಿ ಎನ್ ಡಿಎ ಹೆಚ್ಚು ಸಂಸದರನ್ನು ಗೆಲುವು ಸಾದಿಸಲಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳಲಾಗದೆ ಸಿದ್ದರಾಮಯ್ಯ ಸರ್ಕಾರ ಈರೀತಿಯಾಗಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ಬಿಜೆಪಿಯು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಡಳಿತ ಭವನದ ಬಳಿಯೂ ಪ್ರತಿಭಟನೆ ನಡೆಸಿದರು.

ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್

ಪ್ರತಿಭಟನೆಯಲ್ಲಿ ಬಾಜಪ ಮುಖಂಡರುಗಳಾದ ವೇಣುಗೋಪಾಲ್‌,ಶಿಡ್ಲಘಟ್ಟ ಮಾಜಿ ಶಾಸಕ ಎಂ.ರಾಜಣ್ಣ, ಸುರೇಂದ್ರಗೌಡ,ಅಗಲಗುರ್ಕಿ ಚಂದ್ರಶೇಖರ್ , ನಗರ ಅಧ್ಯಕ್ಷ ಆನಂದ ಅನು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳೀಧರ್, ಕಾರ್ಯದರ್ಶಿ ಅಶೋಕ್ ಕುಮಾರ್‌, ಕೊಂಡಪ್ಪ, ನಾರಾಯಣಗೌಡ, ವೆಂಕಟೇಶ್‌, ರಾಮಿರೆಡ್ಡಿ,ಲಕ್ಷ್ಮೀಪತಿ,ವಿಜಯ್‌ ಕುಮಾರ್‌, ಯುವ ಮುಖಂಡರಾದ ಬಾಲು, ಚೇತನ್‌,ನಾಗರಾಜ ಆಚಾರಿ . ಸತೀಶ್,ಲಕ್ಷ್ಮೀನಾರಾಯಣ ಗುಪ್ತ, ಒಂದೇ ಮಾತರಂ ಮುನಿರಾಜು , ಮಾಧ್ಯಮ ಸಂಚಾಲಕ ಮಧುಚಂದ್ರ, ಮಹಿಳಾ ಘಟಕದ ಕಲಾ ನಾಗರಾಜ್, ಸುಮಿತ್ರ, ಭಾರತಿ, ಮಲ್ಲಿಕಾ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಕಾರ್ಯದರ್ಶಿ ರಾಧಾ, ನಳಿನಿ, ನಾಗಮ್ಮ, ಕೃಷ್ಣಾರೆಡ್ಡಿ,ಎಸ್ ಆರ್‌ ಎಸ್ ದೇವರಾಜ್‌, ಕೃಷ್ಣಪ್ಪ,ಅಂಕಣಗೊಂದಿ ರಂಗಪ್ಪ, ಮತ್ತಿತರರು ಇದ್ದರು. 

ಸಿದ್ದರಾಮಯ್ಯ ಎಂಬ ಹೆಸರಿನಲ್ಲಿಯೇ ರಾಮ ಇದ್ದಾನೆ ಇವರ ಮನೆಯಲ್ಲಿ ಇವರ ಪತ್ನಿ ತಂದೆ ತಾಯಿಯರು ದೇವರ ಪೂಜೆ ಮಾಡುತ್ತಾರೆ ಆದರೆ ಈ ಸಿದ್ದರಾಮಯ್ಯ ಮಾತ್ರ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿರುವುದು ಹಾಗೂ ಅಧಿಕಾರಕ್ಕಾಗಿ ಸಮಾಜದ ಒಂದು ವರ್ಗವನ್ನು ಒದಗಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios