ಕಾಂಗ್ರೆಸ್‌ ರಾಜ್ಯದಲ್ಲಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಟ್ಟಿದೆ: ಎಂಪಿ ರೇಣುಕಾಚಾರ್ಯ

ಮನೆಗೆ 2 ಸಾವಿರ ನೀಡಿ ಅತ್ತೆ-ಸೊಸೆಯಂದಿರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ಚುನಾವಣೆ ಪೂರ್ವದಲ್ಲಿ ಕೊಟ್ಟಭರವಸೆಗಳನ್ನು ಕಾರ್ಯರೂಪಕ್ಕೆ ತಂದು, ಮಾತು ಉಳಿಸಿಕೊಳ್ಳಲಿ ಎಂದು ಮಾಜಿ ಶಾಸ​ಕ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ.

Congress government has caused quarrels in the family due to free schemes says renukacharya at davanagere rav

ದಾವಣಗೆರೆ (ಜೂ.10) ಮನೆಗೆ 2 ಸಾವಿರ ನೀಡಿ ಅತ್ತೆ-ಸೊಸೆಯಂದಿರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ಚುನಾವಣೆ ಪೂರ್ವದಲ್ಲಿ ಕೊಟ್ಟಭರವಸೆಗಳನ್ನು ಕಾರ್ಯರೂಪಕ್ಕೆ ತಂದು, ಮಾತು ಉಳಿಸಿಕೊಳ್ಳಲಿ ಎಂದು ಮಾಜಿ ಶಾಸ​ಕ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ.

ಹೊನ್ನಾಳಿ ಕ್ಷೇತ್ರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಭರವಸೆಗಳ ಪೈಕಿ ಒಂದಾಗಿರುವ ಮನೆಯ ಮಹಿಳೆಗೆ ನೀಡುವ 2 ಸಾವಿರ ರು. ಯೋಜನೆಯಿಂದಾಗಿ ಮನೆ ಮನೆಗಳಲ್ಲಿ ಅತ್ತೆ, ಸೊಸೆಯಂದಿರ ಮಧ್ಯೆ ಜಗಳ ಶುರುವಾಗಿದೆ. 2 ಸಾವಿರ ರು. ಅತ್ತೆ ಪಡೆಯಬೇಕಾ ಅಥವಾ ಸೊಸೆ ಪಡೆಯಬೇಕಾ ಎಂಬ ವಿಚಾರಕ್ಕೆ ಜಗಳ ಶುರುವಾಗಿವೆ. ಯಾರಿಗೆ ಹಣ ನೀಡ​ಬೇಕು ಎಂಬ ಬಗ್ಗೆ ಜಿಜ್ಞಾಸೆಯಲ್ಲಿ ಸರ್ಕಾರವೇ ಇದೆ ಎಂದು ಟೀಕಿಸಿದರು.

Davanagere: ಚಿರತೆ ದಾಳಿಯಿಂದ ಮಾಲೀಕ ಮತ್ತು ಮನೆ ನಾಯಿಯನ್ನು ಕಾಪಾಡಿದ ಹಸು!

ಟ್ಯಾಕ್ಸ್‌ ಕಟ್ಟುವ ವ್ಯಕ್ತಿಗಳ ಪತ್ನಿಯರಿಗೆ ಗೃಹಲಕ್ಷ್ಮಿ ಭಾಗ್ಯ ಇಲ್ಲ. ಸರ್ಕಾರಿ ಅಧಿಕಾರಿಗಳು, ಖಾಸಗಿ ಉದ್ಯೋಗಿಗಳ ಪತ್ನಿಯರಿಗೂ ಗೃಹಲಕ್ಷ್ಮಿ ಭಾಗ್ಯದ 2 ಸಾವಿರ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಅತ್ತೆ, ಸೊಸೆಗೆ ಹೊಡೆದಾಟ ಹಚ್ಚದಂತೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಗೃಹಲಕ್ಷ್ಮಿ ಭಾಗ್ಯದ 2 ಸಾವಿರ ರು. ಸರ್ಕಾರ ಕೊಡಲಿ ಎಂದು ಆಗ್ರಹಿಸಿದರು.

ತಮ್ಮ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಅಭಿಯಾನ ಕೈಗೊಂಡಿದ್ದೇವೆ. ಮನೆಗಳಲ್ಲಿ ವಿದ್ಯುತ್‌ ಬಿಲ್‌ ಈಗ ದುಪ್ಪಟ್ಟಾಗಿದೆ. ಜನತೆಗೆ ಸುಳ್ಳು ಭರವಸೆ ನೀಡಿದ ಸರ್ಕಾರ ದಿಢೀರನೇ ವಿದ್ಯುತ್‌ ಬಿಲ್‌ ಹೆಚ್ಚಿಸಿದೆ. ವಾಣಿಜ್ಯ ಬಳಕೆ, ಗೃಹ ಬಳಕೆ ವಿದ್ಯುತ್‌ ಬಿಲ್‌ ಹೆಚ್ಚಾಗಿದೆ ಎಂದು ದೂರಿದರು.

ಕಾಂಗ್ರೆಸ್‌ ಕೊಟ್ಟಮಾತು ಉಳಿಸಿಕೊಳ್ಳುತ್ತದೆ, ಮಾಧ್ಯಮದವರು ಕೆಲಸ ಮಾಡಲು ಬಿಡಿ: ಸಚಿವ ಮಲ್ಲಿಕಾರ್ಜುನ್

ಅನ್ನ ಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ನೀಡುವ ಅಕ್ಕಿ ಬಿಟ್ಟು, ರಾಜ್ಯ ಸರ್ಕಾರವೂ ಪ್ರತ್ಯೇಕವಾಗಿ ಅಕ್ಕಿ ಕೊಡಲಿ. ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನೇ ತಾನು ನೀಡಿದ್ದೆಂಬುದಾಗಿ ಹೇಳಬೇಕಿಲ್ಲ. ರಾಜ್ಯ ಸರ್ಕಾರವು ಕೇಂದ್ರದ ಅಕ್ಕಿ ಹೊರತುಪಡಿಸಿ, ಪ್ರತ್ಯೇಕವಾಗಿ ಅಕ್ಕಿ ಜನರಿಗೆ ನೀಡಲಿ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸ​ಕ

Latest Videos
Follow Us:
Download App:
  • android
  • ios