Asianet Suvarna News Asianet Suvarna News

ಬಿಜೆಪಿ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್‌..!

*  ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಬೊಮ್ಮಸಂದ್ರ ಪುರಸಭೆ ಕೈ ಪಾಲು
*  ಹೊರಟು ಆಡಳಿತ ಮುಂದುವರಿಸುವ ಆಲೋಚನೆ ಹೊಂದಿದ್ದ ಬಿಜೆಪಿ
*  12 ಮತ ಪಡೆದು ಬೊಮ್ಮಸಂದ್ರ ಪುರಸಭೆಯ ಮೇಲೆ ಹಾರಿದ ಕಾಂಗ್ರೆಸ್‌ ಬಾವುಟ

Congress Get Power in Bommasandra Town Municipal Council With BJP Support grg
Author
First Published Mar 16, 2022, 9:45 AM IST

ಆನೇಕಲ್‌(ಮಾ.16):  ಪುರಸಭೆಯಾದಾಗಿನಿಂದಲೂ ಬಿಜೆಪಿ(BJP) ವಶದಲ್ಲಿದ್ದ ಬೊಮ್ಮಸಂದ್ರ ಪುರಸಭೆಯ ಆಡಳಿತ ಮಹತ್ತರ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌(Congress) ಪಾಲಾಗಿದೆ. ಬೊಮ್ಮಸಂದ್ರ ಪುರಸಭೆಯ 23 ಸ್ಥಾನಗಳ ಪೈಕಿ 14 ಸದಸ್ಯರು ಬಿಜೆಪಿ ಚಿಹ್ನೆಯಡಿ ಗೆದ್ದು ಮೊದಲ ಅವಧಿಯಲ್ಲಿ ಆಡಳಿತ ನಡೆಸಿದರು. ಕಾಂಗ್ರೆಸ್‌ನಿಂದ 6, ಜೆಡಿಎಸ್‌(JDS), ಸಿಪಿಎಂ(CPM) ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 9 ಸದಸ್ಯರಿದ್ದಾರೆ. ಈಗ ಎರಡನೆಯ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಅಭ್ಯರ್ಥಿ ಸ್ಪರ್ಧಿಸಲು ಅವಕಾಶವಿತ್ತು. ಅಂತೆಯೇ ಬಿಜೆಪಿಯ ಎಲ್ಲ ಸದಸ್ಯರು ತೀರ್ಥಯಾತ್ರೆ ಹೊರಟು ಆಡಳಿತ ಮುಂದುವರಿಸುವ ಆಲೋಚನೆಯನ್ನು ಹೊಂದಿದ್ದರು.

ಮಹತ್ತರ ಬದಲಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಮೂವರು ಸದಸ್ಯರು ಸೇರಿದಂತೆ ಇತರರನ್ನು ವಿಶ್ವಾಸಕ್ಕೆ ಪಡೆದು ಸಂಸದ ಮತ್ತು ಶಾಸಕರ ಮತ ಸೇರಿ ಒಟ್ಟು 12 ಮತಗಳನ್ನು ಪಡೆದು ಬೊಮ್ಮಸಂದ್ರ ಪುರಸಭೆಯ ಮೇಲೆ ಕಾಂಗ್ರೆಸ್‌ ಬಾವುಟ ಹಾರುವಂತಾಗಿದೆ.

Five State Election Result: ಹುಮ್ಮಸ್ಸಿನಲ್ಲಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಪಂಚರಾಜ್ಯ ಶಾಕ್‌..!

ಬಿಜೆಪಿ ಎಂದೂ ಗೆಲ್ಲದ ಕ್ಷೇತ್ರ ಗೆಲ್ಲೋಣ: ಸಿಎಂ ಬೊಮ್ಮಾಯಿ

ಬೆಂಗಳೂರು: ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಕಾರ್ಯದಲ್ಲಿ ಭಾಗಿಯಾದ ರಾಜ್ಯದ ಕೇಂದ್ರದ ಸಚಿವರು ಹಾಗೂ ಕಾರ್ಯಕರ್ತರ ಅನುಭವ ಬಳಸಿಕೊಂಡು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈವರೆಗೆ ಗೆಲುವು ಸಾಧಿಸಲು ಆಗದ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿ ಬಿಜೆಪಿಯನ್ನು (BJP) ಮತ್ತೆ ಅಧಿಕಾರಕ್ಕೆ ತರೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕರೆ ನೀಡಿದ್ದರು.

ಪಂಚರಾಜ್ಯಗಳ ಚುನಾವಣೆಯ ಉಸ್ತುವಾರಿ ವಹಿಸುವ ಮೂಲಕ ಗೆಲುವಿಗೆ ಪ್ರಮುಖ ಪಾತ್ರ ನಿರ್ವಹಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ (Pralhad Joshi), ಶೋಭಾ ಕರಂದ್ಲಾಜೆ (Shobha Karandlaje), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಅವರನ್ನು ಮಾ.13 ರಂದು ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಅಭಿನಂದಿಸಿ ಮಾತನಾಡಿದರು.

ಪಂಚರಾಜ್ಯಗಳ ಚುನಾವಣೆಗೆ ಶ್ರಮಿಸಿದ ರಾಜ್ಯದ ಸಚಿವರು ಮತ್ತು ಕಾರ್ಯಕರ್ತರು ಪಡೆದ ಅನುಭವ, ಚುನಾವಣಾ ಕಾರ್ಯತಂತ್ರಗಳನ್ನು ಬಳಸಿಕೊಂಡು ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಈವರೆಗೂ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅರಳಿಸಬೇಕಾಗಿದೆ. ಜೊತೆಗೆ ಪಕ್ಷದ ಸಿದ್ಧಾಂತ, ಮೋದಿ ನಾಯಕತ್ವ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಮುಂದಿಟ್ಟುಕೊಂಡು ಮತ್ತೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸೋಣ ಎಂದು ಸಂಕಲ್ಪ ಮಾಡಿದ್ದರು. 

ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಗೆಲುವು ಸಾಧಿಸಿರುವುದರಿಂದ ದೇಶದ ಜನರು ಪ್ರಧಾನಿ ಮೋದಿ ಅವರ ಆಶೋತ್ತರಗಳನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ. ಚುನಾವಣೆಗಳಲ್ಲಿ ಇದ್ದ ಜಾತಿವಾದವನ್ನು ನೀತಿವಾದದಿಂದ ತೊಲಗಿಸಲಾಗಿದೆ. ಜನರು ರಾಷ್ಟ್ರವಾದಿಗಳು, ಹಿಂದುತ್ವವನ್ನು ಒಪ್ಪಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದ್ದರು. 

Election Result 2022 ಪ್ರಿಯಾಂಕಾಗೆ ಪ್ರಥಮ ಚುಂಬನಂ ದಂತ ಭಗ್ನಂ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ರಾಷ್ಟ್ರೀಯ ನಾಯಕತ್ವವು ಕರ್ನಾಟಕ ಕಾರ್ಯಕರ್ತರ ಮೇಲೆ ವಿಶ್ವಾಸ ಹೊಂದಿದೆ. ಅದಕ್ಕೆ ತಕ್ಕಂತೆ ರಾಜ್ಯದ ಕೇಂದ್ರ ಸಚಿವರು, ಕಾರ್ಯಕರ್ತರು ನಾಲ್ಕು ರಾಜ್ಯಗಳಲ್ಲಿ ದಿಗ್ವಿಜಯ ಯಾತ್ರೆ ಮುಗಿಸಿಕೊಂಡು ಬಂದಿದ್ದಾರೆ. ಮುಂದಿನ ಗುರಿ ಕರ್ನಾಟಕವಾಗಿದ್ದು, ಸಂಘಟನಾತ್ಮಕ ಹೋರಾಟದ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. 

ಚುನಾವಣಾ ಸಮಯದ ಹಿಂದುಗಳಲ್ಲ: 

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ಮಾಲೀಕ ಎಂಬುದನ್ನು ಅರ್ಥ ಮಾಡಿಸಿದೆವು. ಒಂದು ವೇಳೆ ಪಕ್ಷ ಸೋತರೆ ತುಕಡೆ ಗ್ಯಾಂಗ್‌ಗಳು ಎದ್ದು ಕುಳಿತುಕೊಳ್ಳುತ್ತವೆ ಎಂಬುದನ್ನು ಮನವರಿಕೆ ಮಾಡಿವೆವು. ಉತ್ತರಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರುವ ಮೂಲಕ ನಾವು ಚುನಾವಣೆ ಸಮಯದ ಹಿಂದುಗಳಲ್ಲ, ಹಿಂದುತ್ವ ವಿಚಾರದ ಮೇಲೆ ನಂಬಿಕೆ ಹೊಂದಿರುವ ಹಿಂದುಗಳು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದರು. 
 

Follow Us:
Download App:
  • android
  • ios