ಮೇಲ್ಮನೆ ಎಲೆಕ್ಷನ್‌ಗೂ ಕಾಂಗ್ರೆಸ್‌ ನಿಧಿ ಸಂಗ್ರಹ

ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದ್ದು 5 ಸಾವಿರ ರು. ಅರ್ಜಿ ಶುಲ್ಕ, 2 ಲಕ್ಷ ರು. ಪಕ್ಷದ ನಿಧಿಯ ಡಿಡಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Congress Fund Collection for Vidhan Parishat Elections in Karnataka grg

ಬೆಂಗಳೂರು(ಜೂ.28): ಆಡಳಿತ ಪಕ್ಷ ಕಾಂಗ್ರೆಸ್‌ ಕಳೆದ ವಿಧಾನಸಭಾ ಚುನಾವಣೆ ಮಾದರಿಯಲ್ಲೇ 2024ರ ಜೂನ್‌ನಲ್ಲಿ ಎದುರಾಗುವ ವಿಧಾನ ಪರಿಷತ್‌ನ 6 ಸದಸ್ಯ ಸ್ಥಾನಗಳ ಚುನಾವಣೆಗೂ ಆಕಾಂಕ್ಷಿಗಳಿಂದ ಈಗಲೇ ಅರ್ಜಿ ಆಹ್ವಾನಿಸಿದೆ. ಆದರೆ ಇದಕ್ಕಾಗಿ 2.05 ಲಕ್ಷ ರು. ಕಟ್ಟಬೇಕು. ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದ್ದು 5 ಸಾವಿರ ರು. ಅರ್ಜಿ ಶುಲ್ಕ, 2 ಲಕ್ಷ ರು. ಪಕ್ಷದ ನಿಧಿಯ ಡಿಡಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಅರ್ಜಿ ನಮೂನೆ ಸಹಿತ ಪಕ್ಷದ ಪ್ರಕಟಣೆ ಹೊರಡಿಸಿದ್ದು, ಮೂರು ಪದವೀಧರ ಕ್ಷೇತ್ರಗಳು ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ ಚುನಾವಣೆಗೆ 2024ರ ಜೂನ್‌ನಲ್ಲಿ ಚುನಾವಣೆ ಎದುರಾಗಲಿದೆ. ಈ ಆರೂ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಪಕ್ಷವು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಸದಸ್ಯತ್ವ ನೋಂದಣಿ ಪ್ರಕ್ರಿಯೆ, ಸಂಘಟನೆ ಹಾಗೂ ಇನ್ನಿತರ ಅಗತ್ಯ ಚುನಾವಣಾ ಪೂರ್ವ ತಯಾರಿ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲಿಚ್ಚಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರಸ್‌ ಸರ್ಕಾರದಿಂದ ಪಿಕ್‌ ಪಾಕೆಟ್‌ : ಸಿ.ಟಿ. ರವಿ ವ್ಯಂಗ್ಯ

ಆಸಕ್ತರು ಕೆಪಿಸಿಸಿಯಿಂದ ಅರ್ಜಿಗಳನ್ನ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಐದು ಸಾವಿರ ರು. ಅರ್ಜಿ ಶುಲ್ಕ ಮತ್ತು 2 ಲಕ್ಷ ರು. ಪಕ್ಷದ ನಿಧಿ ಸೇರಿ ಒಟ್ಟು 2.05 ಲಕ್ಷ ರು.ಗಳ ಡಿಡಿಯನ್ನು ‘ಅಧ್ಯಕ್ಷರು, ಕೆಪಿಸಿಸಿ ಕಟ್ಟಡ ನಿಧಿ’ ಹೆಸರಲ್ಲಿ ಪಡೆದು ಜು.10ರೊಳಗೆ ಕೆಪಿಸಿಸಿಗೆ ಸಲ್ಲಿಸಿ ರಸೀದಿ ಪಡೆಯಬೇಕು ಎಂದು ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios