Asianet Suvarna News Asianet Suvarna News

ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಬೈ ಎಲೆಕ್ಷನ್: ಅಭ್ಯರ್ಥಿಗಳ ಪಟ್ಟಿ ಮಾಡಿದ ಕಾಂಗ್ರೆಸ್

ಬೆಳಗಾವಿ, ಬಸವಕಲ್ಯಾಣ ಹಾಗೂ ಮಸ್ಕಿ  ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಸಿದ್ದತೆ ನಡೆಸಿದ್ದು,  ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯನ್ನೂ ಸಹ ಫೈನಲ್ ಮಾಡಿದೆ.

Congress discussed about Belagavi Maski and basavakalyan By Poll Candidates rbj
Author
Bengaluru, First Published Jan 9, 2021, 5:34 PM IST

ಬೆಂಗಳೂರು, (ಜ.09): ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಈ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನ ಪಟ್ಟಿ ಮಾಡಿದೆ. 

ಬೆಳಗಾವಿ ಲೋಕಸಭಾ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯಲ್ಲಿ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

ಈ ವೇಳೆ ಯಾವ ಕ್ಷೇತ್ರಕ್ಕೆ ಯಾರನ್ನ ಕಣಕ್ಕಿಳಿಸಬೇಕು ಎನ್ಜುವ ಬಗ್ಗೆ ಚರ್ಚೆ ನಡೆಸಿದರು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಶಾಸಕ ದಿವಂಗತ ನಾರಾಯಣ ರಾವ್ ಪತ್ನಿ ಮಲ್ಲಮ್ಮ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಹೆಸರು ಅಂತಿಮಗೊಳಿಸಲಾಗಿದೆ.

ಬೆಳಗಾವಿ ಬೈ ಎಲೆಕ್ಷನ್: ಟಿಕೆಟ್‌ ಕೊಡಿ ಎಂದು ಕೈ ಎತ್ತಿದ ಕಾಂಗ್ರೆಸ್ ನಾಯಕ 

ಮಸ್ಕಿ ಕ್ಷೇತ್ರಕ್ಕೆ ಆರ್. ಬಸನಗೌಡ ತುರ್ವಿಹಾಳ್ ಅವರ ಒಬ್ಬರೇ ಹೆಸರು ಇರುವುದರಿಂದ ಅವರೇ ಅಭ್ಯರ್ಥಿಯಾಗುವುದು ಪಕ್ಕಾ ಆಗಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ  ಮೂರು ಹೆಸರು ಪಟ್ಟಿ ಮಾಡಲಾಗಿದೆ.

ಶಾಸಕ ಸತೀಶ್ ಜಾರಕಿಹೋಳಿ, ಪ್ರಕಾಶ್ ಹುಕ್ಕೇರಿ ಹಾಗೂ ಚನ್ನರಾಜು ಹೆಸರು ಫೈನಲ್ ಮಾಡಲಾಗಿದೆ. ಸತೀಶ್ ಜಾರಕಿಹೋಳಿ ಅವರನ್ನೇ ಅಭ್ಯರ್ಥಿಯನ್ನಾಗಿಸಲು ರಾಜ್ಯದ ಹೆಚ್ಚಿನ ನಾಯಕರು ಒಲವು ತೋರಿದ್ದಾರೆ.

ಈ ಸಂಭಾವ್ಯ ಹೆಸರುಗಳ ಪಟ್ಟಿಯನ್ಜು ಹೈಕಮಾಂಡ್ ಕಳುಹಿಸಲು ಕೆಪಿಸಿಸಿ ತೀರ್ಮಾನಿಸಿದ್ದು, ಇದಕ್ಕೂ ಮೊದಲ ಇನ್ನೊಂದು ಸಭೆ ಮಾಡಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಬಳಿಕ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗುತ್ತದೆ.

Follow Us:
Download App:
  • android
  • ios