ಕಲಬುರಗಿ, (ನ.29):  ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್‌ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ. ಇದರೊಂದಿಗೆ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

ಮಂಡ್ಯ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ತಂತ್ರಗಾರಿಕೆಯಿಂದ ಡಿಸಿಸಿ ಚುನಾವಣೆಯಲ್ಲಿ ಗೆದ್ದು ಬೀಗಿದೆ. ಆದ್ರೆ, ಬಿಜೆಪಿಯ ಚದುರಂಗದ ಆಟ ಕಲಬುರಗಿಯಲ್ಲಿ ನಡೆಯಲಿಲ್ಲ.

ಜೆಡಿಎಸ್-ಬಿಜೆಪಿ ಮೈತ್ರಿ ಸಕ್ಸಸ್: ಫಲ ನೀಡಿದ ಕುಮಾರಸ್ವಾಮಿ, ಬಿಎಸ್‌ವೈ ಭೇಟಿ..!

ಹೌದು.. ಇಂದು (ಭಾನುವಾರ) ನಡೆದ ಚುನಾವಣೆಯಲ್ಲಿ ಒಟ್ಟಾರೆ 13 ನಿರ್ದೆಶಕ ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದರೆ ಬಿಜೆಪಿ ಕೇವಲ 4 ಸ್ಥಾನ ಪಡೆಯುವ ಮೂಲಕ ಮುಖಭಂಗ ಅನುಭವಿಸಿತು.

13 ಸ್ಥಾನಗಳು ಹಾಗೂ ಇಬ್ಬರು ಸಹಕಾರಿ ಅಧಿಕಾರಿಗಳು ಜತೆಗೆ ಓರ್ವ ನಾಮನಿರ್ದೇಶಿತ ಸದಸ್ಯ ಸೇರಿ ಒಟ್ಟಾರೆ 16 ಸ್ಥಾನಗಳಾಗಲಿದ್ದು, ಬಹುಮತಕ್ಕೆ 09 ಸದಸ್ಯರು ಬೇಕು. ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ.

ಈಗಾಗಲೇ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದ್ದವು. ಆಯ್ಕೆಯಾದ ಈ ಏಳು ಸದಸ್ಯರಲ್ಲಿ ಐವರು ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿಯವರಾಗಿದ್ದಾರೆ. 

ಭಾನುವಾರ 6 ಸ್ಥಾನಗಳಿಗಷ್ಟೇ ಚುನಾವಣೆ ನಡೆದಿದ್ದು,  ಇದರಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವಲ್ಲಿ ಮಾತ್ರ ಯಶಸ್ವಿಯಾಯ್ತು.