ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಕೋಟ ಶ್ರೀನಿವಾಸ ಪೂಜಾರಿ

ಕಾಂಗ್ರೆಸ್ ನ ಒಟ್ಟು ನೀತಿ ಯಾವತ್ತೂ ದೇಶವನ್ನು ಜೋಡಿಸುವುದಾಗಿರಲಿಲ್ಲ. ತುಂಡು ಮಾಡುವುದೇ ಅವರ ನೀತಿ ಆಗಿತ್ತು. ಅವರ ನಡವಳಿಕೆ, ಭಾವನೆ ಮತ್ತು ಅವರ ಹೃದಯದ ಭಾಷೆಯನ್ನು ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ. ಹಾಗಾಗಿ ಇದು ಅತ್ಯಂತ ಖಂಡನಾರ್ಹ: ಕೋಟ ಶ್ರೀನಿವಾಸ ಪೂಜಾರಿ 

Congress Culture is to Divide the Country says BJP MLC Kota Shrinivas Poojari grg

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು

ಕೊಡಗು(ಫೆ.02):  ಒಂದೆಡೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಎನ್ನುತ್ತಾರೆ, ಮತ್ತೊಂದೆಡೆ ಡಿ.ಕೆ. ಸುರೇಶ್ ಅವರು ಭಾರತವನ್ನು ತುಂಡು ಮಾಡಬೇಕು ಎನ್ನುತ್ತಾರೆ. ಕಾಂಗ್ರೆಸ್‌ನ ಒಟ್ಟು ಸಂಸ್ಕೃತಿಯೇ ಅಂತಹದ್ದು ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. 

ಇಂದು(ಶುಕ್ರವಾರ) ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಉದ್ಘಾಟನೆ ಮಾಡಿದ ಸಂದರ್ಭ ಅವರು ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆಯ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಕಾಂಗ್ರೆಸ್ ನ ಒಟ್ಟು ನೀತಿ ಯಾವತ್ತೂ ದೇಶವನ್ನು ಜೋಡಿಸುವುದಾಗಿರಲಿಲ್ಲ. ತುಂಡು ಮಾಡುವುದೇ ಅವರ ನೀತಿ ಆಗಿತ್ತು. ಅವರ ನಡವಳಿಕೆ, ಭಾವನೆ ಮತ್ತು ಅವರ ಹೃದಯದ ಭಾಷೆಯನ್ನು ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ. ಹಾಗಾಗಿ ಇದು ಅತ್ಯಂತ ಖಂಡನಾರ್ಹವಾದಂತ ಹೇಳಿಕೆ ಎಂದಿದ್ದಾರೆ. 

ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನೂ ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

ನರೇಂದ್ರ ಮೋದಿ ಅವರು ಪ್ರಧಾನಿ ಆಗುವಾಗ ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೆಲವು ಶಕ್ತಿಗಳು ಹೇಳುತ್ತಿದ್ದವು. ಆ ಮಾದರಿ ಮಾತುಗಳನ್ನು ಡಿ.ಕೆ. ಸುರೇಶ್ ಅವರು ಮಾತನಾಡಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಭಾರತ ಎಂದೂ ಒಂದಾಗಿರಬೇಕು ಎನ್ನುವುದು ಬಿಜೆಪಿಯ ನಿಲುವು ಎಂದು ತಿಳಿಸಿದ್ದಾರೆ. 

ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಇವರೆಲ್ಲರೂ ಸುರೇಶ್ ಅವರ ಹೇಳಿಕೆಯನ್ನು ತೀವ್ರ ಪದಗಳಲ್ಲಿ ಖಂಡಿಸುತ್ತಾರೆ ಎಂದುಕೊಂಡಿದ್ದೆವು. ಮತ್ತು ಅವರಿಗೆ ಎಚ್ಚರಿಕೆ ಕೊಡುತ್ತಾರೆ, ಕ್ರಮ ಕೈಗೊಳ್ಳುತ್ತಾರೆ ಎಂದುಕೊಂಡಿದ್ದೆವು. ಆದರೆ ಡಿ.ಕೆ.ಸುರೇಶ್ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ಕೂಡ ಖಂಡನಾರ್ಹ ವಿಷಯ ಅಸಮಾಧಾನ ವ್ಯಕ್ತಪಡಿಸಿದರು. 

ಜಗದೀಶ್‌ ಶೆಟ್ಟರ್‌ಗೆ ಕಾಂಗ್ರೆಸ್‌ನಿಂದ ಯಾವುದೇ ಅನ್ಯಾಯ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಇನ್ನು ಕೇಂದ್ರ ಬಜೆಟ್ ಅನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭವಿಷ್ಯವಿಲ್ಲದ ಬಜೆಟ್ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಕೋಟಾ ಪೂಜಾರಿ ಅವರು, ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವುದು ಮಧ್ಯಂತರ ಬಜೆಟ್. ಯಾವುದೇ ಸರ್ಕಾರಗಳು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಗಿಮಿಕ್ ಬಜೆಟ್ ಮಂಡಿಸುತ್ತವೆ. ಆದರೆ ನರೇಂದ್ರ ಮೋದಿಯವರ ಸರ್ಕಾರ ಮುಂದಿನ ತಲೆಮಾರಿಗೆ ಬೇಕಾದ ಬಜೆಟ್ ಮಂಡಿಸಿದೆ. ಯಾವುದೇ ಚುನಾವಣಾ ಗಿಮಿಕ್ ಮಾಡಿಲ್ಲ. ಮೀನುಗಾರರಿಗೆ, ಪ್ರವಾಸೋದ್ಯಮಕ್ಕೆ ನೀಡಿರುವ ಯೋಜನೆಗಳು ದೇಶವನ್ನು ಪ್ರಗತಿಯೆಡೆಗೆ ಕೊಡೊಯ್ಯಬಲ್ಲವು. ಹೀಗಾಗಿ ಇದೊಂದು ಅಭೂತಪೂರ್ವ ಬಜೆಟ್ ಎಂದು ಹೇಳಿದರು. 

ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎನ್ನುವ ಸಂಸದ ಡಿ.ಕೆ.ಸುರೇಶ್ ಅವರು ದೇಶ ದ್ರೋಹಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ದೇಶ ದ್ರೋಹಿ ಎಂದು ದೇಶದಿಂದ ಹೊರಗಟ್ಟಿ, ಯಾರು ಇದುವರೆಗೆ ಪ್ರತ್ಯೇಕ ದೇಶ ಕೊಡಿ ಎಂದು ಕೇಳಲಿಲ್ಲ. ಆದರೆ ಡಿ.ಕೆ. ಸುರೇಶ್ ಅವರು ಪ್ರಚಾರಕ್ಕಾಗಿ ಅವರ ಮಾತಿನ ಚಪಲಕ್ಕಾಗಿ ಈ ರೀತಿ ಹೇಳಿರಬಹುದು. ಅವರನ್ನು ದೇಶದಿಂದ ಅರಬ್ ದೇಶಗಳಿಗೆ ಕಳುಹಿಸಲಿ ಎಂದು ಅಪ್ಪಚ್ಚು ರಂಜನ್  ಒತ್ತಾಯಿಸಿದರು.

Latest Videos
Follow Us:
Download App:
  • android
  • ios