ಮುಂಬರುವ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಕಾಂಗ್ರೆಸ್‌ ಪಕ್ಷ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ. ಅದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌ awaazbharatki.in ಆರಂಭಿಸಿದೆ. awaazbharatki@inc.in ಗೆ ಇ-ಮೇಲ್‌ ಕಳುಹಿಸುವ ಮೂಲಕವೂ ಜನರು ಸಲಹೆ ನೀಡಬಹುದಾಗಿದೆ.

ಪಿಟಿಐ ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಕಾಂಗ್ರೆಸ್‌ ಪಕ್ಷ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ. ಅದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌ awaazbharatki.in ಆರಂಭಿಸಿದೆ. awaazbharatki@inc.in ಗೆ ಇ-ಮೇಲ್‌ ಕಳುಹಿಸುವ ಮೂಲಕವೂ ಜನರು ಸಲಹೆ ನೀಡಬಹುದಾಗಿದೆ.

ಬುಧವಾರ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ‘ವೆಬ್‌ಸೈಟ್‌ ಹಾಗೂ ಇ-ಮೇಲ್‌ ಮೂಲಕ ಸಲಹೆಗಳನ್ನು ಆಹ್ವಾನಿಸುವುದರ ಜೊತೆಗೆ ಪಕ್ಷವು ನೇರವಾಗಿ ಜನರ ಬಳಿಗೆ ಹೋಗಿ ಸಮಾವೇಶಗಳನ್ನು ನಡೆಸಿ ಸಲಹೆ ಪಡೆಯಲಿದೆ. ಲೋಕಸಭೆ ಚುನಾವಣೆಗೆ ಮುನ್ನ ನಾವು ಪ್ರಕಟಿಸುವುದು ‘ಜನರ ಪ್ರಣಾಳಿಕೆ’ ಆಗಿರಲಿದೆ ಎಂದು ಹೇಳಿದರು.

ಮೋದಿ ಹೆಸರು ತುಂಬಾ ಪವರ್‌ಫಲ್‌; ಪ್ರಚಾರದಲ್ಲಿ ಖರ್ಗೆ, ರಾಹುಲ್‌ ಸಹ ಸಾಟಿಯಲ್ಲ: ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

ವೆಬ್‌ಸೈಟ್‌ ಹಾಗೂ ಇ-ಮೇಲ್‌ ಮೂಲಕ ಯಾರು ಬೇಕಾದರೂ ಸಲಹೆಗಳನ್ನು ನೀಡಬಹುದು. ಉತ್ತಮ ಸಲಹೆಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಅಧಿಕಾರಕ್ಕೆ ಬಂದರೆ ಅವುಗಳನ್ನು ಜಾರಿಗೊಳಿಸಲಾಗುವುದು. ಸಲಹೆ ಸ್ವೀಕರಿಸುವುದಕ್ಕೆ ಪ್ರತಿ ರಾಜ್ಯದಲ್ಲೂ ಕನಿಷ್ಠ ಒಂದು ಸಮಾವೇಶ ಏರ್ಪಡಿಸಲಾಗುವುದು. ಕೆಲ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಸಮಾವೇಶ ಏರ್ಪಡಿಸಲಾಗುವುದು. ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳಿಗೆ ಆಸಕ್ತಿಯಿದ್ದರೆ ಅವೂ ಕೂಡ ಸಮಾವೇಶಕ್ಕೆ ಕೈಜೋಡಿಸಬಹುದು ಎಂದು ಚಿದಂಬರಂ ತಿಳಿಸಿದರು.

ಧೈರ್ಯ ಇದ್ರೆ ಜ.26ರಂದು ಭದ್ರತೆ ಇಲ್ಲದೇ ಬನ್ನಿ: ಮೋದಿಗೆ ಪನ್ನು ಬೆದರಿಕೆ

ನವದೆಹಲಿ: ಮೋದಿ., ನಿಮಗೆ ಧೈರ್ಯ ಇದ್ದರೆ ಜ.26ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಭದ್ರತೆ ಇಲ್ಲದೇ ಬನ್ನಿ. ನಿಮ್ಮ ಮೇಲೆ ಎಸ್‌ಎಫ್‌ಜೆ ಸೇಡು ತೀರಿಸಿಕೊಳ್ಳುತ್ತದ ಎಂದು ನಿಷೇಧಿತ ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಸಂಸ್ಥಾಪಕ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದಾನೆ. ಜ.26ರ ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಮತ್ತು ಪೊಲೀಸ್‌ ಮಹಾನಿರ್ದೇಶಕರನ್ನು ತಾನು ಕೊಲ್ಲುವ ಬೆದರಿಕೆ ಒಡ್ಡಿರುವ ಬೆನ್ನಲ್ಲೇ ಪನ್ನು ಇದೀಗ ಮೋದಿ ಅವರಿಗೂ ಇದೇ ರೀತಿ ಬೆದರಿಕೆ ಹಾಕಿದ್ದಾನೆ.

ರಾಮ ಮಂದಿರ, ಹೊಸ ಸಂಸತ್, ಜಿ20; ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ಬಿಚ್ಚಿಟ್ಟ ಬಿಜೆಪಿ!

ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪನ್ನು ಮೋದಿ ನೀವು ಜನಪ್ರಿಯ ನಾಯಕರಾಗಿದ್ದರೆ, ನಿಮಗೆ ಧೈರ್ಯವಿದ್ದರೆ ಜ.26ಕ್ಕೆ ಯಾವುದೇ ಭದ್ರತೆಯಿಲ್ಲದೇ ದೆಹಲಿಗೆ ಬನ್ನಿ. ಆಗ ಖಲಿಸ್ತಾನಿ ಧ್ವಜ ಹಾರಿಸುವ ಮೂಲಕ ಎಸ್‌ಎಫ್‌ಜೆ, ಕೆನಡಾದಲ್ಲಿ ಸಾವನ್ನಪ್ಪಿದ ಖಲಿಸ್ತಾನಿ ಹೋರಾಟಗಾರ ನಿಜ್ಜರ್‌ ಹತ್ಯೆಗೆ ಸೇಡು ತೀರಿಸಿಕೊಳ್ಳಲಿದೆ ಎಂದಿದ್ದಾನೆ.

ವಿಮಾನ ವಿಳಂಬ ಮೋದಿ ನಿರ್ಮಿತ ವಿಪತ್ತು: ತರೂರ್‌

ನವದೆಹಲಿ: ಪ್ರತಿಕೂಲ ಹವಾಮಾನದ ಪರಿಣಾಮ ಕಳೆದ ಭಾನುವಾರದಂದು ದೆಹಲಿ, ಮುಂಬೈ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ಉಂಟಾದ ಅವ್ಯವಸ್ಥೆಯನ್ನು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮೋದಿ ಸರ್ಕಾರ ನಿರ್ಮಿತ ವಿಪತ್ತು ಎಂದು ಬಣ್ಣಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ದಟ್ಟ ಮಂಜು ಆವರಿಸುತ್ತದೆ ಎಂದು ಗೊತ್ತಿದ್ದೂ ಸಹ ದೆಹಲಿ ವಿಮಾನ ನಿಲ್ದಾಣದಲ್ಲಿ ರನ್‌ವೇಯನ್ನು ಕೆಟಗರಿ-3ಕ್ಕೆ ಅಣಿಗೊಳಿಸದೆ ಜನರ ಹಬ್ಬದ ಸಂಭ್ರಮವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಸಿದಿದೆ. ಹಾಗಾಗಿ ವಿಮಾನ ಪ್ರಯಾಣಿಕರ ಅವ್ಯವಸ್ಥೆಯೂ ಮೋದಿಯೇ ನಿರ್ಮಿಸಿದ ವಿಪತ್ತು ಎಂದು ಕಿಡಿಕಾರಿದ್ದಾರೆ.

ಇದಕ್ಕೆ ತಿರುಗೇಟು ಕೊಟ್ಟ ವಿಮಾನಯಾನ ಸಚಿವ ಸಿಂಧಿಯಾ, ತರೂರ್‌ ಒಬ್ಬ ಆರಾಮ ಕುರ್ಚಿ ಟೀಕಾಕಾರ, ಅಂತರ್ಜಾಲದಲ್ಲಿ ಲಭ್ಯವಾಗುವ ಸುದ್ದಿಯನ್ನೇ ಸತ್ಯವೆಂದು ನಂಬಿ ಸಂಶೋಧನೆ ಎಂದು ಬಣ್ಣಿಸುವ ಕಾಂಗ್ರೆಸ್‌ ಸಂಸದರಿಗೆ ವಿಮಾನಯಾನದ ತಾಂತ್ರಿಕ ಸಮಸ್ಯೆಗಳು ಅರ್ಥವಾಗದು ಎಂದು ತಿರುಗೇಟು ನೀಡಿದ್ದಾರೆ.