ಪರಮೇಶ್ವರ್‌ ಅವರ ಮೇಲೆ ಷಡ್ಯಂತ್ರ ರೂಪಿಸಿ ಕಲ್ಲು ತೂರಲಾಗಿದೆ. ಈ ಘಟನೆ ಕರ್ನಾಟಕವೇ ತಲೆ ತಗ್ಗಿಸುವಂತಹದು: ಕರ್ನಾಟಕ ಕಾಂಗ್ರೆಸ್‌ 

ಬೆಂಗಳೂರು(ಏ.29):  ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಮೇಲೆ ಷಡ್ಯಂತ್ರ ರೂಪಿಸಿ ಕಲ್ಲು ತೂರಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಕಾಂಗ್ರೆಸ್‌, ಇದು ಕರ್ನಾಟಕವೇ ತಲೆ ತಗ್ಗಿಸುವಂತಹ ಘಟನೆ ಎಂದು ಟೀಕಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಟ್ವೀಟ್‌ ಮಾಡಿರುವ ‘ಕರ್ನಾಟಕ ಕಾಂಗ್ರೆಸ್‌’, ಪರಮೇಶ್ವರ್‌ ಅವರ ಮೇಲೆ ಷಡ್ಯಂತ್ರ ರೂಪಿಸಿ ಕಲ್ಲು ತೂರಲಾಗಿದೆ. ಈ ಘಟನೆ ಕರ್ನಾಟಕವೇ ತಲೆ ತಗ್ಗಿಸುವಂತಹದು. ವಿರೋಧ ಪಕ್ಷಗಳ ನಾಯಕರ ಮೇಲೆ ಮೊದಲಿಂದಲೂ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ಗಲಭೆ ನಡೆಯುತ್ತದೆ’ ಎಂಬ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ.

ಕೊರಟಗೆರೆ: ಪ್ರಚಾರ ವೇಳೆ ಪರಂ ತಲೆಗೆ ಗಾಯ

ದಲಿತ ನಾಯಕರ ಮೇಲೆ ಬಿಜೆಪಿಗೆ ಏಕಿಷ್ಟುದ್ವೇಷ ಎಂದೂ ಪ್ರಶ್ನೆ ಮಾಡಲಾಗಿದೆ. ಕೊರಟಗೆರೆ ತಾಲೂಕಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪರಮೇಶ್ವರ್‌ ಅವರ ಮೇಲೆ ಕಲ್ಲೂ ತೂರಾಟ ನಡೆಸಿದ್ದು ಬಳಿಕ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಹರಿಹಾಯ್ದಿದೆ.