Asianet Suvarna News Asianet Suvarna News

Congress Chintan Shivir ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದ ಸೋನಿಯಾ ಗಾಂಧಿ!

ಮೂರು ದಿನಗಳ ಕಾಂಗ್ರೆಸ್ ಚಿಂತನ ಶಿಬಿರ ರಾಜಸ್ಥಾನದ ಉದಯ್ ಪುರದಲ್ಲಿ ಆರಂಭವಾಗಿದೆ. ಮೊದಲ ದಿನ ದೇಶವ್ಯಾಪಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ-ಆರ್ ಎಸ್ಎಸ್  ನೀತಿಗಳಿಂದ ದೇಶ ಎದುರಿಸುತ್ತಿರುವ ಸವಾಲುಗಳನ್ನು ಜನರ ಮುಂದೆ ತೋರಿಸಲು ಈ ಶಿಬಿರ ದೊಡ್ಡ ಅವಕಾಶ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Congress Chintan Shivir in Udaipur Sonia Gandhi said Government suppressing minorities by spreading hatred san
Author
Bengaluru, First Published May 13, 2022, 3:49 PM IST | Last Updated May 13, 2022, 4:22 PM IST

ನವದೆಹಲಿ (ಮೇ.13): ಇಂದಿನಿಂದ ರಾಜಸ್ಥಾನದ (Rajasthan ) ಉದಯಪುರದಲ್ಲಿ (Udaipur) ಕಾಂಗ್ರೆಸ್‌ನ ಮೂರು ದಿನಗಳ ಚಿಂತನ ಶಿಬಿರ (Congress Chintan Shivir) ಆರಂಭವಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanaka Gandhi) ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್‌ನ 400 ದೊಡ್ಡ ನಾಯಕರು ಇದರಲ್ಲಿ ಭಾಗವಹಿಸಿದ್ದಾರೆ. ಚಿಂತನ ಶಿಬಿರದ ಮೊದಲ ದಿನದಂದು ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡಿದರು. 

ಈ ವೇಳೆ ಕೇಂದ್ರ ಸರ್ಕಾರದ ( Central Governament ) ವಿರುದ್ಧವೂ ವಾಗ್ದಾಳಿ ನಡೆಸಿದರು. ಸೋನಿಯಾ ಗಾಂಧಿ ಮಾತನಾಡಿ, ಈಗಿನ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಮೇಲೆ ದ್ವೇಷ ಹರಡುವ ಮೂಲಕ ದಮನ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ಎಂಬ ಘೋಷವಾಕ್ಯದ ಮೂಲಕ ಪ್ರಧಾನಿ ಮೋದಿ (Prime Minister Narendra Modi ) ಮತ್ತು ಅವರ ಮಿತ್ರಪಕ್ಷಗಳ  ಅರ್ಥವೇನೆಂಬುದು ಇದೀಗ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ಜನರು ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕಲು ಒತ್ತಾಯಿಸುವುದು, ನಮ್ಮ ಸಮಾಜ ಮತ್ತು ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ಗುರಿಯಾಗಿಸುವುದು ಮತ್ತು ದಬ್ಬಾಳಿಕೆ ಮಾಡುವುದು ಎಂದಿದ್ದಾರೆ.

ದೊಡ್ಡ ಪ್ರಯತ್ನದಿಂದ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಸೋನಿಯಾ ಗಾಂಧಿ ಈ ವೇಳೆ ಹೇಳಿದರು, ಸಂಘಟನೆಯ ಅಗತ್ಯತೆಗಳ ಅಡಿಯಲ್ಲಿ ನಾವು ವೈಯಕ್ತಿಕ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಕು. ಪಕ್ಷ ಸಾಕಷ್ಟು ನೀಡಿದೆ. ಈಗ ನೀವು ಸಾಲವನ್ನು ಪಕ್ಷಕ್ಕೆ ಮರು ಪಾವತಿಸಬೇಕಾಗಿದೆ. ಮತ್ತೊಮ್ಮೆ ಧೈರ್ಯ ತೋರುವ ಅಗತ್ಯವಿದೆ. ಪ್ರತಿಯೊಂದು ಸಂಸ್ಥೆಯು ಬದುಕಲು ಬದಲಾವಣೆಯನ್ನು ತರಬೇಕಾಗಿದೆ. ನಮಗೆ ಸುಧಾರಣೆಗಳ ಅವಶ್ಯಕತೆಯಿದೆ. ಇದು ಅತ್ಯಂತ ಮೂಲಭೂತ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಚಿಂತನ್ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ-ಆರ್‌ಎಸ್‌ಎಸ್ ನೀತಿಗಳಿಂದ ದೇಶ ಎದುರಿಸುತ್ತಿರುವ ಸವಾಲುಗಳನ್ನು ಪ್ರತಿಬಿಂಬಿಸಲು ಈ ಶಿಬಿರವು ಉತ್ತಮ ಅವಕಾಶವಾಗಿದೆ. ಇದು ದೇಶದ ಸಮಸ್ಯೆಗಳ (Country Issues ) ಪ್ರತಿಬಿಂಬ ಮತ್ತು ಪಕ್ಷದ ಮುಂದಿರುವ ಸಮಸ್ಯೆಗಳ ಆತ್ಮಾವಲೋಕನ ಎರಡೂ ಆಗಿದೆ. ಕಾಂಗ್ರೆಸ್‌ನಲ್ಲಿ ರಚನಾತ್ಮಕ ಸುಧಾರಣೆಗಳ ಅಗತ್ಯವಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ

ಕುಟುಂಬದಲ್ಲಿ ಒಬ್ಬರಿಗೆ ಒಂದೇ ಟಿಕೆಟ್:
ಚಿಂತನ್‌ ಶಿವರ್‌ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅಜಯ್‌ ಮಾಕನ್‌ (Congress Leader Ajay Maken ) ಹೇಳಿದ್ದಾರೆ. ಈ ಬಗ್ಗೆ ಎಲ್ಲರೂ ಒಮ್ಮತದಿಂದ ಇದ್ದಾರೆ. ಕುಟುಂಬದ ಬೇರೆ ಯಾರಿಗಾದರೂ ಟಿಕೆಟ್ ಸಿಗಬೇಕಾದರೆ 5 ವರ್ಷ ಪಕ್ಷದಲ್ಲಿ ದುಡಿಯಬೇಕು ಎಂದರು.

'ಸೇಡಿನ ಜ್ವಾಲೆ': ಹಾಡಹಗಲೇ ಟ್ರಕ್‌ಗೆ ಬೆಂಕಿ ಹಚ್ಚಿದ ಕಾರು ಡ್ರೈವರ್!

ಶಿಬಿರಕ್ಕೆ ಬರದ ಹಾರ್ದಿಕ್ ಪಟೇಲ್:
ಗುಜರಾತ್ ಕಾಂಗ್ರೆಸ್ ನ (Gujrat Congress Leader) ಪ್ರಮುಖ ನಾಯಕ ಹಾರ್ದಿಕ್ ಪಟೇಲ್ (Hardik Patel) ಕಾಂಗ್ರೆಸ್ ನ ಚಿಂತನ ಶಿಬಿರಕ್ಕೆ ತಲುಪಿಲ್ಲ. ಹಾಗಿದ್ದರೂ, ಚಿಂತನ ಶಿಬಿರಕ್ಕೆ ಬರಲು ಅವರನ್ನು ಆಹ್ವಾನಿಸಲಾಯಿತು. ಆದರೆ ಅವರು ಬರಲಿಲ್ಲ. ಕಳೆದ ದಿನಗಳಿಂದ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ವಿರುದ್ಧದ ಅಸಮಾಧಾನದ ಬಗ್ಗೆ ನಿರಂತರ ವರದಿಗಳು ಬರುತ್ತಿವೆ. ಅಷ್ಟೇ ಅಲ್ಲ, ಅವರು ಬಿಜೆಪಿ (BJP) ಸೇರಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ

 

 

Latest Videos
Follow Us:
Download App:
  • android
  • ios