ಕೇಂದ್ರ ಕಾಂಗ್ರೆಸ್ ನಾಯಕರಿಂದ ರಾಜ್ಯ ಗೆಲ್ಲಲ್ಲ, ಕರ್ನಾಟಕ ಚುನಾವಣೆಗೂ ಮೊದಲು ಗುಲಾಮ್ ನಬಿ ಬಾಂಬ್!

ಕರ್ನಾಟಕ ಚುನಾವಣೆ ಗೆಲ್ಲಲು ಬಿಜೆಪಿ ಕೇಂದ್ರ ನಾಯಕರ ಮೊರೆ ಹೋಗಿದ್ದರೆ, ಕಾಂಗ್ರೆಸ್ ರಾಜ್ಯ ನಾಯಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಇದರ ನಡುವೆ ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿರುವ ಗುಲಾಮ್ ನಬಿ ಆಜಾದ್ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರ ಕಾಂಗ್ರೆಸ್ ನಾಯಕರ ವರ್ಚಸ್ಸಿನಿಂದ ರಾಜ್ಯ ಚುನಾವಣೆ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ.
 

Congress central leaders no impact on state election says Ghulam Nabi Azad ckm

ನವದೆಹಲಿ(ಏ.04): ಕರ್ನಾಟಕ ಚುನಾವಣೆ ಗೆಲ್ಲಲು ಕಾಂಗ್ರೆಸ್ ಎಲ್ಲಾ ತಯಾರಿ ನಡೆಸಿಕೊಳ್ಳುತ್ತಿದೆ. ಹಿಮಾಚಲ ಪ್ರದೇಶದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಆದರೆ ಕರ್ನಾಟಕದಲ್ಲಿ ಕೇಂದ್ರ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಆಗಮಿಸಿದರೆ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಹೇಳಿದ್ದಾರೆ. ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿರುವ ಗುಲಾಮ್ ನಬಿ ಆಜಾದ್, ಕಾಂಗ್ರೆಸ್ ಕೇಂದ್ರ ನಾಯಕರಿಗೆ ಯಾವುದೇ ವರ್ಚಿಸಿಲ್ಲ. ಈ ನಾಯಕರಿಂದ ಯಾವುದೇ ರಾಜ್ಯಕ್ಕೆ ಉಪಯೋಗವಿಲ್ಲ. ಸ್ಥಳೀಯ ನಾಯಕರೇ ರಾಜ್ಯ ಚುನಾವಣೆ ಗೆಲುವಿಗೆ ಶ್ರಮಿಸಬೇಕು ಎಂದು ಗುಲಾಮ್ ನಬಿ ಅಜಾದ್ ಕಿವಿ ಮಾತು ಹೇಳಿದ್ದಾರೆ.

ಗುಲಾಮ್ ನಬಿ ಆಜಾದ್ ತಮ್ಮ ಆಟೋಬಯೋಗ್ರಫಿ ಬಿಡುಗಡೆಗೂ ಮೊದಲು ತಮ್ಮ ಹೊಸ ಪಕ್ಷ, ಕಾಂಗ್ರೆಸ್ ಪಕ್ಷದ ಧೋರಣೆ ಸೇರಿದಂತೆ ಹಲವು ವಿಚಾರಗಳು ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರು ಯಾವುದೇ ರಾಜ್ಯಕ್ಕೆ ತೆರಳಿ ಪ್ರಚಾರ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಯಾವ ಕ್ಷೇತ್ರದ ಸ್ಥಾನದ ಮೇಲೆ ಪರಿಣಾಮ ಬೀರಲ್ಲ. ಆಯಾ ರಾಜ್ಯದ ನಾಯಕರ ವರ್ಚಸ್ಸಿನಿಂದ ಚುನಾವಣೆ ಗೆಲ್ಲಬಹುದು ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. 

ಕಾಂಗ್ರೆಸ್‌ಗೆ ತಿರುಗುಬಾಣವಾಯ್ತಾ ಪಂಚಮಸಾಲಿ ಅಸ್ತ್ರ.. ಮೀಸಲಾತಿ ಮಹಾಸಮರದಲ್ಲಿ ಸಿಎಂ ಮಾಸ್ಟರ್ ಸ್ಟ್ರೋಕ್..!

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಆಗಬೇಕು. ಯಾವ ರಾಜ್ಯವೂ ಪ್ರಜಾತಂತ್ರ ವ್ಯವಸ್ಥೆಯಿಂದ ಹೊರಗಿರಬಾರದು. ಇದು ಪ್ರತಿಯೊಬ್ಬನ ಹಕ್ಕಾಗಿದೆ. ಚುನಾವಣಾ ಆಯೋಗ ಶೀಘ್ರದಲ್ಲೇ ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದನ್ನು ನಾವು ಎದುರುನೋಡುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದು 9 ವರ್ಷಗಳಾಗಿದೆ. ಇದರ ನಡುವೆ ಸಾಕಷ್ಟು ಬದಲಾವಣೆಗಲಾಗಿದೆ. ಇದಕ್ಕಿಂತ ಹೆಚ್ಚು ಕಾಯುವುದು ಸೂಕ್ತವಲ್ಲ. ಶೀಘ್ರವೇ ಚುನಾವಣೆಗೆ ನಾನು ಆಗ್ರಹಿಸುತ್ತೇನೆ ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಹೊರಬಂದ ಆಜಾದ್‌ ‘ಡೆಮಾಕ್ರೆಟಿಕ್‌ ಆಜಾದ್‌ ಪಾರ್ಟಿ’ ಎಂಬ ಹೊಸ ಪಕ್ಷದ ಸ್ಥಾಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಗುಲಾಮ್ ನಬಿ ಆಜಾದ್ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆಗಳು ಗೋಚರಿಸುತ್ತಿದೆ. ಪಕ್ಷ ಸ್ಥಾಪನೆ ಬಳಿಕ ಅಜಾದ್, ನಾವು ಯಾರೊಂದಿಗೂ ಸ್ಪರ್ಧೆ ಮಾಡುವುದಿಲ್ಲ. ನಮ್ಮ ಗುರಿ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮಾಡುವುದಾಗಿದೆ ಎಂದಿದ್ದಾರೆ. ಸ್ವತಂತ್ರವಾಗಿ ಚುನಾವಣೆ ಎದುರಿಸಿ, ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಗುರಿಯನ್ನು ಇಟ್ಟುಕೊಂಡಿದೆ.

ಜನರ ಅಪೇಕ್ಷೆಯಂತೆ ಸಿದ್ದು ಎರಡು ಕಡೆ ಸ್ಪರ್ಧೆ  

ಡೆಮಾಕ್ರೆಟಿಕ್‌ ಆಜಾದ ಪಕ್ಷ’ ಸೇರಿದ್ದ ಮಾಜಿ ಉಪ ಮುಖ್ಯಮಂತ್ರಿ ತಾರಾಚಂದ್‌ ಮತ್ತು ಪಿಸಿಸಿ ಮಾಜಿ ಮುಖ್ಯಸ್ಥ ಪೀರ್ಜಾದಾ ಮಹಮ್ಮದ್‌ ಸಯೀದ್‌ ಸೇರಿದಂತೆ 17 ಮಾಜಿ ಕಾಂಗ್ರೆಸ್ಸಿಗರು ಈಗ ಕಾಂಗ್ರೆಸ್‌ಗೆ ಮರಳಿದ್ದಾರೆ.

Latest Videos
Follow Us:
Download App:
  • android
  • ios