Asianet Suvarna News Asianet Suvarna News

Karnataka Politics: ಕಾಂಗ್ರೆಸ್‌-ಬಿಜೆಪಿ ಬ್ರೇಕ್‌ಅಪ್‌ ಸನ್ನಿಹಿತ?

*  ಕೋನರಡ್ಡಿ ಕಾಂಗ್ರೆಸ್‌ ಸೇರ್ಪಡೆಯೊಂದಿಗೆ ಶೂನ್ಯವಾದ ಜೆಡಿಎಸ್‌ ಸದಸ್ಯ ಬಲ
*  ಈಗ ಕಾಂಗ್ರೆಸ್‌ 17, ಬಿಜೆಪಿ 6, ಜೆಡಿಎಸ್‌ 0
*  ಕಾಂಗ್ರೆಸ್‌ ಪರ ಜೆಡಿಎಸ್‌ ನಾಯಕನ ಪ್ರಚಾರ
 

Congress BJP Breakup Imminent in Navalgund Municipality grg
Author
Bengaluru, First Published Dec 17, 2021, 10:43 AM IST
  • Facebook
  • Twitter
  • Whatsapp

ಈಶ್ವರ ಜಿ ಲಕ್ಕುಂಡಿ

ನವಲಗುಂದ(ಡಿ.17): ಪುರಸಭೆ ಬಿಜೆಪಿ- ಕಾಂಗ್ರೆಸ್‌(BJP-Congress) ದೋಸ್ತಿಯ ಅಧಿಕಾರ ಮೊದಲ ಅವಧಿ ಮುಗಿವ ಮನ್ನವೇ ಬ್ರೇಕ್‌ಅಪ್‌ ಆಗಲಿದೆಯೇ? ಕಾಂಗ್ರೆಸ್‌ ಸ್ವತಂತ್ರವಾಗಿ ಆಡಳಿತ ನಡೆಸುತ್ತಾ? ಆಡಳಿತದ ಭಾಗವಾದ ಬಿಜೆಪಿ ವಿರೋಧ ಪಕ್ಷವಾಗುತ್ತಾ ಎಂಬ ಪ್ರಶ್ನೆಯೀಗ ಮೂಡಿದೆ. ಹೌದು! ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ(NH Konareddy) ಕಾಂಗ್ರೆಸ್‌ ಸೇರ್ಪಡೆ ತಮ್ಮ ಜತೆಯಿದ್ದ ಪುರಸಭೆ ಜೆಡಿಎಸ್‌(JDS), ಪಕ್ಷೇತರ ಸದಸ್ಯರನ್ನು ಕರೆದುಕೊಂಡೆ ಜೆಡಿಎಸ್‌ಗೆ ಬೈಬೈ ಹೇಳಿದ್ದಾರೆ.

ಕೋನರಡ್ಡಿ ಅವರು ಮೊದಲು ಜೆಡಿಎಸ್‌ನಲ್ಲಿದ್ದಾಗ ಜೆಡಿಎಸ್‌ನ 9 ಹಾಗೂ ಕಾಂಗ್ರೆಸ್‌ನ 7 ಸದಸ್ಯರನ್ನು ಒಗ್ಗೂಡಿಸಿ ಪಟ್ಟಣದ ಗದ್ದುಗೆ ಏರಬೇಕೆಂದು ಕನಸು ಕಂಡಿದ್ದರು. ಆದರೆ, ಬಿಜೆಪಿಯ 6 ಮತ್ತು ಕಾಂಗ್ರೆಸ್‌ನ 7 ಸದಸ್ಯರು ಸೇರಿ ಅಧಿಕಾರದ ಚುಕ್ಕಾಣಿ ಹಿಡಿದರು. ಬಳಿಕ ಕಾಂಗ್ರೆಸ್‌ನ ಮಂಜುನಾಥ ಜಾಧವರ ಅಧ್ಯಕ್ಷರಾಗಿ 30 ತಿಂಗಳವರೆಗೂ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಶೀಘ್ರವೇ ತೆರೆ ಬೀಳುತ್ತಾ ಎಂಬ ಸುದ್ದಿ ದಟ್ಟವಾಗಿದೆ.
ಪುರಸಭೆ ಗದ್ದಿಗೆ ಹಿಡಿಯಲೇಬೇಕೆಂದು ಪಣ ತೊಟ್ಟಿದ್ದ ಕೋನರಡ್ಡಿ ಅವರಿಗೆ ಅಂದು ಸೋಲಾಗಿತ್ತು. ಆದರೆ, ಪ್ರಸ್ತುತ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರಿಂದ ಬಿಜೆಪಿ ದೋಸ್ತಿಯನ್ನು ಕಟ್‌ ಮಾಡಬಹುದು ಎಂದು ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

Council Election Result : ನನ್ನ ಮಗನ ಸೋಲಿಗೆ ಬಿಜೆಪಿ ಶಾಸಕ ಕಾರಣ : ಎ.ಮಂಜು ಆರೋಪ

ಕಾಂಗ್ರೆಸ್‌ 17, ಜೆಡಿಎಸ್‌ 0 ಬಿಜೆಪಿ 6:

ಹಿಂದೆಯೇ ಜೆಡಿಎಸ್‌ 9, ಪಕ್ಷೇತರ-1 ಸದಸ್ಯರನ್ನು ಕೋನರಡ್ಡಿ ತಮ್ಮ ಪಾಳಯದಲ್ಲಿ ಹೊಂದಿದ್ದರು. ಬೆಳಗಾವಿಯಲ್ಲಿ ಮಂಗಳವಾರ ಪುರಸಭೆಯ ಎಲ್ಲ ಜೆಡಿಎಸ್‌ ಸದಸ್ಯರು ಹಾಗೂ ಪಕ್ಷೇತರ ಅಭ್ಯರ್ಥಿ ಕೋನರಡ್ಡಿ ಜತೆಗೆ ಕಾಂಗ್ರೆಸ್‌ ಶಾಲು ಹಾಕಿಸಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್‌ ಈಗ ಶೂನ್ಯವಾಗಿದೆ. ಈಗ ಕಾಂಗ್ರೆಸ್ಸಿಗೆ 17 ಸದಸ್ಯ ಬಲ ಬಂದಂತಾಗಿದ್ದು, 6 ಸದಸ್ಯರಿರುವ ಬಿಜೆಪಿ ದೋಸ್ತಿಯ ಅನಿವಾರ್ಯತೆ ಇಲ್ಲ ಎಂಬ ಪರಿಸ್ಥಿತಿ ಇದೆ.

ಬಿಜೆಪಿಯ ಪುರಸಭೆ ಸದಸ್ಯ ಮಾಂತೇಶ ಕಲಾಲ ಮಾತನಾಡಿ, ಕಾಂಗ್ರೆಸ್‌ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದೇವೆ. ಈ ಬಗ್ಗೆ ಪಕ್ಷದ ಮುಖಂಡರು ಚರ್ಚೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಯಾವುದೇ ಬದಲಾವಣೆ ಆಗಬೇಕಾದರೆ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಈಗಾಗಲೇ ಜೆಡಿಎಸ್‌ನ ಎಲ್ಲ ಸದಸ್ಯರು ಮಂಗಳವಾರ ಕಾಂಗ್ರೆಸ್ಸಿಗೆ ಸೇರ್ಪಡೆ ಆಗಿದ್ದೇವೆ. ಇದರಿಂದ ಕಾಂಗ್ರೆಸ್‌ ಸದಸ್ಯರ ಬಲ ಈಗ 17ಕ್ಕೇರಿದೆ. ಎನ್‌.ಎಚ್‌. ಕೋನರಡ್ಡಿ ಅವರ ಜೊತೆ ನಾವಿದ್ದೇವೆ. ಕಾಂಗ್ರೆಸ್‌ ಹೈಕಮಾಂಡ್‌ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದು ಪುರಸಭೆ ಮಾಜಿ ಸದಸ್ಯ ಜೀವನ್‌ ಪವಾರ್‌ ಹೇಳಿದರು.

Belagavi Assembly Session : 'ರೇಪ್‌ ತಪ್ಪಿಸಿಕೊಳ್ಳಲು ಅಸಾಧ್ಯ ಎಂದಾಗ ಎಂಜಾಯ್ ಮಾಡ್ಬೇಕು'!

ಪಟ್ಟಣದ ಪುರಸಭೆಯ ಕಮಿಟಿ ಬದಲಾವಣೆ ಸಂಬಂಧ ಈವರೆಗೆ ಚರ್ಚೆ ಆಗಿಲ್ಲ. ಕಾಂಗ್ರೆಸ್ಸಿನ ಹೈಕಮಾಂಡ್‌ ಮತ್ತು ಸ್ಥಳೀಯ ಮುಖಂಡರ ನಿರ್ಧಾರವೇ ನಮ್ಮ ನಿರ್ಧಾರ ಅಂತ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವರ ತಿಳಿಸಿದ್ದಾರೆ.  
ಬಿಜೆಪಿ ಜತೆ ಮೈತ್ರಿ ಚರ್ಚೆ ಮಧ್ಯೆ ಕಾಂಗ್ರೆಸ್‌ ಪರ ಜೆಡಿಎಸ್‌ ನಾಯಕನ ಪ್ರಚಾರ

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ಕಾಂಗ್ರೆಸ್‌ ಪರ ಪ್ರಚಾರಕ್ಕಿಳಿದಿದ್ದರು. 

ಅತ್ತ ಮೈತ್ರಿ(Alliance) ವಿಷಯವಾಗಿ ಇತ್ತೀಚೆಗೆ ಪ್ರಧಾನಿ ಮೋದಿ(Narendra Modi) ಹಾಗೂ ಮಾಜಿ ಪ್ರಧಾನಿ ದೇವೇಗೌಡರು(HD Devegowda) ಪರಸ್ಪರ ಚರ್ಚೆ ನಡೆಸಿದ್ದರು. ಇತ್ತ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹಾಗೂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ನಡುವೆಯೂ ಮಾತುಕತೆಯ ಪ್ರಸ್ತಾವನೆ ಇತ್ತು. ಬಹುತೇಕ ಮೈತ್ರಿ ವಿಷಯ ಅಂತಿಮ ರೂಪ ಪಡೆದಿತ್ತು. ಅವಿಭಜಿತ ಧಾರವಾಡ(Dharwad) ಜಿಲ್ಲೆಯಲ್ಲಿ ಪರಿಷತ್‌ ಚುನಾವಣೆಯಲ್ಲಿ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಕಾಂಗ್ರೆಸ್‌(Congress) ಅಭ್ಯರ್ಥಿ ಸಲೀಂ ಅಹ್ಮದ(Saleem Ahmed) ಪರವಾಗಿ ಪ್ರಚಾರವನ್ನೂ ಶುರು ಮಾಡಿದ್ದರು. 
 

Follow Us:
Download App:
  • android
  • ios