ರಾಜ್ಯದಲ್ಲಿ ಅಮುಲ್‌ಗೆ ಅವಕಾಶ ನೀಡಿದ್ದೇ ಕಾಂಗ್ರೆಸ್‌: ನಿರ್ಮಲಾ ಸೀತಾರಾಮನ್‌

ಜಯನಗರದಲ್ಲಿ ಭಾನುವಾರ ‘ಥಿಂಕ​ರ್‍ಸ್ ಫೋರಂ‘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಮುಲ್‌-ನಂದಿನಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದೆ. 

Congress Allowed Amul in Karnataka Says Union Minister Nirmala Sitharaman gvd

ಬೆಂಗಳೂರು (ಏ.24): ಕಾಂಗ್ರೆಸ್‌ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ಗುಜರಾತ್‌ನ ‘ಅಮುಲ್‌’ ರಾಜ್ಯ ಪ್ರವೇಶಿಸಿತ್ತು. ಆದರೆ ಈಗ ಅಂದು ಮುಖ್ಯಮಂತ್ರಿಯಾಗಿದ್ದವರೇ ಈಗ ‘ನಂದಿನಿ’ ನಾಶಕ್ಕೆ ಅಮುಲ್‌ಗೆ ಬಿಜೆಪಿ ಅವಕಾಶ ನೀಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಜಯನಗರದಲ್ಲಿ ಭಾನುವಾರ ‘ಥಿಂಕ​ರ್‍ಸ್ ಫೋರಂ‘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಮುಲ್‌-ನಂದಿನಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದೆ. ಸತ್ಯವನ್ನು ತಿರುಚಿ ಭಾವನಾತ್ಮಕ ವಿಷಯ ಎಂಬಂತೆ ಬಿಂಬಿಸುತ್ತಿದೆ. ಅಮುಲ್‌ ಕಾಂಗ್ರೆಸ್‌ ಅಧಿಕಾರಾವಧಿಯಲ್ಲೇ ಉತ್ತರ ಕರ್ನಾಟಕ ಭಾಗದಲ್ಲಿ ರಾಜ್ಯ ಪ್ರವೇಶಿಸಿತ್ತು ಎಂದರು.

ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಆರೋಗ್ಯಕರ ಸ್ಪರ್ಧೆ ಮತ್ತು ಸಕಾರಾತ್ಮಕ ಚರ್ಚೆಗೆ ಬದಲಾಗಿ ವಿಷಯವನ್ನು ತಿರುಚಲಾಗುತ್ತಿದೆ ಎಂಬ ವಾಸ್ತವ ನಮ್ಮ ರೈತರು ಮತ್ತು ಮಹಿಳೆಯರಿಗೆ ತಿಳಿದಿದೆ. ದೇಶದಲ್ಲಿ ಪ್ರತಿಯೊಂದು ರಾಜ್ಯವೂ ಹಾಲಿನ ಒಕ್ಕೂಟವನ್ನು ಹೊಂದಿವೆ. ಕರ್ನಾಟಕದ ನಂದಿನಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ನಾನೂ ಇಲ್ಲಿಗೆ ಬಂದಾಗ ನಂದಿನಿ ಹಾಲು, ಮೊಸರು, ಪೇಡಾ ಬಳಸುತ್ತೇನೆ. ನಾನು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ ದೆಹಲಿಯಲ್ಲಿ ನಂದಿನಿ ಸಿಗದಿದ್ದಕ್ಕೆ ಅಮುಲ್‌ ಬಳಸುತ್ತಿದ್ದೇನೆ. ನಂದಿನಿ ಸಿಗದಿದ್ದರೆ ನಾನು ಹಾಲನ್ನೇ ಕುಡಿಯುವುದಿಲ್ಲ ಎಂದು ಹೇಳಲು ನಾನು ಸನ್ಯಾಸಿಯಲ್ಲ. ಅಮುಲ್‌ ಖರೀದಿಸುತ್ತೇನೆ. ಇದು ಕರ್ನಾಟಕಕ್ಕೆ ವಿರುದ್ಧವಾದ ಕೆಲಸವಲ್ಲ ಎಂದು ವಿವರಿಸಿದರು.

ಆರೋಗ್ಯಕರ ಸ್ಪರ್ಧೆ: ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಅದೇ ರೀತಿ ಬೇರೆ ರಾಜ್ಯಗಳ ಡೈರಿ ಉತ್ಪನ್ನಗಳೂ ಕರ್ನಾಟಕದಲ್ಲಿ ಲಭ್ಯವಿವೆ. ಇಂತಹ ಆರೋಗ್ಯಕರ ಸ್ಪರ್ಧೆಯಿಂದ ಭಾರತ ಪ್ರಪಂಚದಲ್ಲೇ ಅತ್ಯಧಿಕ ಹಾಲು ಉತ್ಪನ್ನಗಳನ್ನು ಉತ್ಪಾದಿಸುವ ದೇಶವಾಗಿದೆ ಎಂದು ಬಣ್ಣಿಸಿದರು.

ಸಿದ್ದರಾಮಯ್ಯ ಲಿಂಗಾಯತರಿಗೆ ಅವಮಾನ ಮಾಡಿಲ್ಲ: ರಣದೀಪ್‌ಸಿಂಗ್‌ ಸುರ್ಜೇವಾಲಾ

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರರಿಗೆ ಮೊದಲ ಬಾರಿಗೆ ಪ್ರತಿ ಲೀಟರ್‌ಗೆ 2 ರು. ಪ್ರೋತ್ಸಾಹ ಧನ ನೀಡಲಾಯಿತು. ಪ್ರಸ್ತುತ ಬಿಜೆಪಿ ಸರ್ಕಾರ ಇದನ್ನು 5 ರುಪಾಯಿಗೆ ಹೆಚ್ಚಳ ಮಾಡಿದೆ. ರೈತರು ಮತ್ತು ಪಶುಸಂಗೋಪನೆ ಮಾಡುವವರಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios