ದೇಶದಲ್ಲಿ ಬಿಜೆಪಿಯಿಂದ ಬದಲಾವಣೆ ಆಗಿದೆ ಎಂದು ಜನ ನಂಬಿಕೆ ವಿಶ್ವಾಸ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿರುವ ಹಿನ್ನೆಲೆ ನನ್ನ ಅಭಿವೃದ್ಧಿ ನೋಡಿ ಜನ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ: ಎಂಟಿಬಿ ನಾಗರಾಜ್‌

ಹೊಸಕೋಟೆ(ನ.19): ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೇಲೆ ಜನರಿಗೆ ವಿಶ್ವಾಸ ಹೆಚ್ಚಾಗಿದ್ದು, ಆದ್ದರಿಂದಲೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ನಡುವಿನಪುರದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಆದ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದ ಮೆಡಿಕಲ್‌ ಚೆನ್ನಕೇಶವ, ಆಲಪ್ಪನಹಳ್ಳಿ ರಮೇಶ್‌, ಎಂ.ಮುನಿರಾಜು, ಎನ್‌.ಕೆ.ನಾಗರಾಜ್‌ ಕುಟುಂಬದವರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ದೇಶದಲ್ಲಿ ಬಿಜೆಪಿಯಿಂದ ಬದಲಾವಣೆ ಆಗಿದೆ ಎಂದು ಜನ ನಂಬಿಕೆ ವಿಶ್ವಾಸ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿರುವ ಹಿನ್ನೆಲೆ ನನ್ನ ಅಭಿವೃದ್ಧಿ ನೋಡಿ ಜನ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ ಎಂದರು.

2025ರ ಜೂನ್‌ಗೆ 175 ಕಿ.ಮೀ. ನಮ್ಮ ಮೆಟ್ರೋ ಮಾರ್ಗ: ಬಿಎಂಆರ್‌ಸಿಎಲ್‌ ನಿರ್ದೇಶಕ ಅಂಜುಂ ಪರ್ವೇಜ್‌

ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಸತೀಶ್‌ ಮಾತನಾಡಿ, ಬಿಜೆಪಿ ಸರ್ಕಾರದಿಂದ ದೇಶದ ಅಭಿವೃದ್ಧಿ ಜೊತೆಗೆ ದೇಶದ ಭದ್ರತೆ ಸಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ನರೇಂದ್ರ ಮೋದಿ ಆಡಳಿತಕ್ಕೆ ಜನ ಬೆಂಬಲ ಸೂಚಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯಾದರೆ, ನಾವು ಕೂಡ ಅಭಿವೃದ್ಧಿ ಆಗುತ್ತೇವೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಮನೆ ಮಾಡಿದೆ. ಆದ್ದರಿಂದ ದೇಶ ಹಾಗೂ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿ​ಕಾರ ನಿಶ್ಚಿತ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಎನ್‌.ಚಂದ್ರಪ್ಪ, ಬಿಜೆಪಿ ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಸುಜಾತ ನಾಗರಾಜ್‌, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಕೆ.ಸತೀಶ್‌, ಸದಸ್ಯ ಹಿಂಡಿಗನಾಳ ವಿ.ಲೋಕೇಶ್‌, ಟಿಎಪಿಸಿಎಂಎಸ್‌ ನಿರ್ದೇಶಕರಾದ ಮುನಿಶಾಮಗೌಡ, ಅರೆಹಳ್ಳಿ ನಾಗೇಶ್‌, ನೆಲವಾಗಿಲು ಎಸ್‌ಎಫ್‌ಸಿಎಸ್‌ ಮಾಜಿ ಅಧ್ಯಕ್ಷ ವೈ.ಮುನಿರಾಜೇಗೌಡ, ಎಸ್‌ಸಿ ಮೋರ್ಚಾ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಎಸ್‌ಎಫ್‌ಸಿಎಸ್‌ ಮಾಜಿ ಅಧ್ಯಕ್ಷ ಮುನಿಚನ್ನಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ರವೀಂದ್ರ, ನಂದಗುಡಿ ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಮುಖಂಡರಾದ ಅಂಜಿನಪ್ಪ, ಸುಬ್ರಮಣಿ, ರಮೇಶ್‌, ದೀಪು ಹಾಗೂ ಕಾರ್ಯಕರ್ತರು ಹಾಜರಿದ್ದರು.