ಕಳೆದ ಮೂರ್ನಾಲ್ಕು ದಿನಗಳ ಹಿಂದೇ 3ನೇ ಪಟ್ಟಿಗಾಗಿ ಕಸರತ್ತು ನಡೆಸಿರುವ ಕಾಂಗ್ರೆಸ್‌ ಬಿಜೆಪಿಯ ಪಟ್ಟಿ ಬಿಡುಗಡೆಯಾದ ನಂತರ ಕೆಲವೊಂದು ಬದಲಾವಣೆಗಳನ್ನು ಮಾಡಿ ನಾಳೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಬೆಂಗಳೂರು (ಏ.13): ಕಳೆದ ಮೂರ್ನಾಲ್ಕು ದಿನಗಳ ಹಿಂದೇ 3ನೇ ಪಟ್ಟಿಗಾಗಿ ಕಸರತ್ತು ನಡೆಸಿರುವ ಕಾಂಗ್ರೆಸ್‌ ಬಿಜೆಪಿಯ ಪಟ್ಟಿ ಬಿಡುಗಡೆಯಾದ ನಂತರ ಕೆಲವೊಂದು ಬದಲಾವಣೆಗಳನ್ನು ಮಾಡಿ ನಾಳೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆಯ ಕಸರತ್ತು ಬಹುತೇಕವಾಗಿ ಪೂರ್ಣಗೊಂಡಿದೆ. ಆದರೆ, ಕಾಂಗ್ರೆಸ್ ಈಗಾಗಲೇ ಬಿಡುಗಡೆ ಮಾಡಿರುವ ಎರಡು ಪಟ್ಟಿಗಳಲ್ಲಿ ಯಾವುದೇ ಗೊಂದಲಗಳು ಇಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದ್ದು, 58 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡುವುದು ಬಾಕಿಯಿದೆ. ಆದರೆ, ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹುತೇಕ ಗೊಂದಲದ ವಾತಾವರಣವಿದ್ದು, ಒಬ್ಬರಿಗೆ ಟಿಕೆಟ್‌ ಕೊಟ್ಟರೆ ಮತ್ತೊಬ್ಬರು ಬಂಡಾಯ ಏಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೇ 3ನೇ ಪಟ್ಟಿಗಾಗಿ ಕಸರತ್ತು ನಡೆಸಿರುವ ಕಾಂಗ್ರೆಸ್‌ ಬಿಜೆಪಿಯ ಪಟ್ಟಿ ಬಿಡುಗಡೆಯಾದ ನಂತರ ಕೆಲವೊಂದು ಬದಲಾವಣೆಗಳನ್ನು ಮಾಡಿ ನಾಳೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ಮೂರನೇ ಪಟ್ಟಿ ಬಗ್ಗೆ ಶುರುವಾದ ನಿರೀಕ್ಷೆ: ಕಾಂಗ್ರೆಸ್‌ನಿಂದ ಇಂದು ರಾತ್ರಿ ಅಥವಾ ನಾಳೆಯೊಳಗೆ 58 ಕ್ಷೇತ್ರಗಳ ಟಿಕೆಟ್ ಘೋಷಣೆ ಸಾಧ್ಯತೆಯಿದೆ. ಪ್ರಮುಖ ಕ್ಷೇತ್ರಗಳನ್ನೇ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿಯ ಅಭ್ರ್ಯಿಗಳನ್ನು ನೋಡಿ ಅವರಿಗೆ ಟಾಂಗ್‌ ಕೊಡುವ ವ್ಯಕ್ತಿಗಳಿಗೆ ಟಿಕೆಟ್‌ ನೀಡುವ ಆಲೋಚನೆಯಲ್ಲಿದೆ. ಆದರೆ, ಇದರಿಂದ ಕೆಲವು ಸ್ಥಳೀಯ ನಾಯಕರಿಗೆ ಟಿಕೆಟ್‌ ಮಿಸ್‌ ಆಗಲಿದ್ದು, ಬಂಡಾಯವೇಳುವ ಸಾಧ್ಯತೆಯೂ ಕಂಡುಬರುತ್ತಿದೆ. ಇನ್ನು ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಭಾರಿ ಪೈಪೋಟಿ ನಡೆಯುತ್ತಿದೆ. ಒಬ್ಬರಿಗೆ ಟಿಕೆಟ್‌ ನೀಡಿದರೆ ಮತ್ತೊಬ್ಬರು ಬಂಡಾಯವೇಳುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ.

ಯಾವ್ಯಾವ ಕ್ಷೇತ್ರಗಳ ಟಿಕೆಟ್‌ ಹಂಚಿಕೆಯಾಗಿಲ್ಲ: ಚನ್ನಪಟ್ಟಣ, ಮದ್ದೂರು, ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಇನ್ನೂ ಘೋಷಣೆ ಆಗಿಲ್ಲ. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಕಾದು ಕುಳಿತಿದ್ದ ಕಾಂಗ್ರೆಸ್, ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದೆ. ಈಗಾಗಲೇ ನಟಿ ರಮ್ಯ ಅವರನ್ನು ಕಣಕ್ಕಿಳಿಸುವ ಬಗ್ಗೆಗೂ ಚರ್ಚೆ ಮಾಡಲಾಗಿದೆ. ಮತ್ತೊಂದೆಡೆ ಮದ್ದೂರು ಕ್ಷೇತ್ರದಲ್ಲಿ ಉದಯ್ ಗೌಡ ಹಾಗೂ ಗುರುಚರಣ್ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಯಾರಿಗೆ ಟಿಕೆಟ್‌ ನೀಡಿದರೂ ಒಬ್ಬರು ಬಂಡಾಯ ಏಳುವ ಸಾಧ್ಯತೆಯಿದೆ. ಇನ್ನು ರಾಜಧಾನಿಯಲ್ಲಿಯೇ ಏಳು ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ. ಬೊಮ್ಮನಹಳ್ಳಿ, ಕೆಆರ್ ಪುರಂ, ಬೆಂಗಳೂರು ದಕ್ಷಿಣ, ಚಿಕ್ಕಪೇಟೆ, ಪುಲಿಕೇಶಿ ನಗರ, ಸಿವಿ ರಾಮನ್ ನಗರ, ದಾಸರಹಳ್ಳಿ ಇನ್ನೂ ಘೋಷಣೆ ಬಾಕಿಯಿದೆ.

ತೇರದಾಳ ಟಿಕೆಟ್‌ಗೆ ಉಮಾಶ್ರೀ ಪಟ್ಟು: ತರಿಕೇರೆ, ಚಿಕ್ಕಮಗಳೂರು, ಮೂಡಿಗೆರೆ, ತೇರದಾಳ ಟಿಕೇಟ್ ಘೋಷಣೆ ಪೆಂಡಿಂಗ್ ಉಳಿಸಿಕೊಂಡಿದೆ. ತರಿಕೇರೆ ಶ್ರೀನಿವಾಸ ಹಾಗೂ ಗೋಪಿಕೃಷ್ಣ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ತೇರದಾಳ ಉಮಾಶ್ರೀ ಟಿಕೇಟ್ ಘೋಷಣೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದ್ದು, ಉಮಾಶ್ರೀ ಸಿದ್ದರಾಮಯ್ಯ ಭೇಟಿ ಮಾಡಿ ಟಿಕೆಟ್‌ಗೆ ಲಾಭಿ ನಡೆಸಿದ್ದಾರೆ. ಆದರೆ, ಉಮಾಶ್ರೀಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಕಂಡುಬರುತ್ತಿದೆ. ಇವರಿಗೆ ಪರ್ಯಾಯವಾಗಿ ತೇರದಾಳದಲ್ಲಿ ಸಿದ್ದು ಕೊಣ್ಣೂರು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಮೊದಲ ಪಟ್ಟಿ ರಿಲೀಸ್‌: 124 ವಿಧಾನಸಭಾ ಕ್ಷೇತ್ರಗಳ ಲಿಸ್ಟ್‌ ಹೀಗಿದೆ ನೋಡಿ..

ಸಿದ್ದರಾಮಯ್ಯಗೆ 2 ಕ್ಷೇತ್ರ ಸಿಗುವುದೇ.? : ಮೂಡಿಗೆರೆಯಲ್ಲಿ ನಯನಾ ಮೋಟಮ್ಮ ಸ್ಪರ್ಧೆಗೂ ಸ್ಥಳೀಯರ ಅಸಮಾಧಾನ ವ್ಯಕ್ತವಾಗಿದೆ. ರಾಯಚೂರು, ಸಿಂಧನೂರು, ಮಾನ್ವಿ, ದೇವದುರ್ಗ, ಬಳ್ಳಾರಿ ನಗರ ಘೋಷಣೆ ಬಾಕಿಯಿದ್ದು, ಕಾಂಗ್ರೆಸ್‌ನಿಂದ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಕ್ಷೇತ್ರವನ್ನು ಕಬಳಿಸಿಕೊಳ್ಳಲು ಯೋಜನೆ ಹಾಕಿದೆ ಎಂದು ಕಾದುನೋಡಬೇಕಿದೆ. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರ ಬಾಕಿ ಉಳಿಸಿಕೊಂಡಿರುವ ಹೈಕಮಾಂಡ್ ಸಿದ್ದರಾಮಯ್ಯಗೆ 2 ಕ್ಷೇತ್ರಗಳ ಟಿಕೆಟ್‌ ನೀಡುವುದೇ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ, ಈ ಬಗ್ಗೆ ಎಐಸಿಸಿ ನಾಯಕರು ಅಂತಿಮ ನಿರ್ಧಾರ ಮಾಡಿಲ್ಲ.