ಪರಮೇಶ್ವರ್ ಭೇಟಿ ಕೇವಲ ಸೌಹಾರ್ದಯುತವಾದದ್ದು. ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆಯಷ್ಟೇ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟು ಸ್ಥಾನಗೆಲ್ಲಬಹುದು ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದ ಸತೀಶ್ ಜಾರಕಿಹೊಳಿ 

ಬೆಂಗಳೂರು(ಮೇ.15): ಮಂಗಳವಾರ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಗೌಪ್ಯ ಚರ್ಚೆ ನಡೆಸಿದರು. ರಾಜ್ಯದಲ್ಲಿ ಆಪರೇಷನ್ ಕಮಲದ ಕುರಿತಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇಬ್ಬರು ನಾಯಕರ ಭೇಟಿ ಕುತೂಹಲ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ ಅವರು, ಪರಮೇಶ್ವರ್ ಭೇಟಿ ಕೇವಲ ಸೌಹಾರ್ದಯುತವಾ ದದ್ದು. ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆಯಷ್ಟೇ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ ಎಷ್ಟು ಸ್ಥಾನಗೆಲ್ಲಬಹುದು ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.

ಸ್ಮಶಾನದಲ್ಲಿ ಅಡ್ಡಾಡಿದ ಸತೀಶ, ಚುನಾವಣೆಯಲ್ಲಿ ದೇವಸ್ಥಾನಕ್ಕೆ ಬಂದಿದ್ಯಾಕೆ? ಯತ್ನಾಳ್ ಕಿಡಿ

ಲೋಕಸಭಾ ಚುನಾವಣೆಗೆ ಮುನ್ನ ಕೆಲವರು ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಗುಲ್ಲೆಬ್ಬಿಸಿದ್ದರು. ಅದರಿಂದ ಲಾಭ ಪಡೆ ಯಲು ನೋಡಿದ್ದರು. ಈಗ ಚುನಾವಣೆಯೇ ಮುಗಿದಿದ್ದು, ಅದೆಲ್ಲ ಚರ್ಚೆಯಾಗುವುದಿಲ್ಲ. ಇನ್ನು, ಸರ್ಕಾರದ ಪತನವಾಗುತ್ತದೆ ಎಂದು ನಾಯಕರು ಹೇಳುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಎಲ್ಲ ಪಕ್ಷದಲ್ಲೂ ಶಾಸಕರ ಅಸಮಾಧಾನ ಇದ್ದೇ ಇರುತ್ತದೆ. ಹಾಗೆಂದು ಸರ್ಕಾರವೇ ಪತನವಾಗುತ್ತೆ ಎಂಬುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

ಯಾರೂ ಆಸಕ್ತಿ ತೋರದಕ್ಕೆ ನನ್ನ ಪುತ್ರಿಗೆ ಟಿಕೆಟ್‌: ಸಚಿವ ಸತೀಶ್‌ ಜಾರಕಿಹೊಳಿ

ಎಚ್‌ಡಿಕೆ ಬಳಿ ಭ್ರಷ್ಟಾಚಾರದ ದಾಖಲೆ ಇದ್ದರೆ ಸಿಎಂಗೆ ಕೊಡಲಿ: ಜಾರಕಿಹೊಳಿ

ಬೆಂಗಳೂರು: ಸರ್ಕಾರದ ಭ್ರಷ್ಟಾಚಾರದ ಕುರಿತ ದಾಖಲೆಗಳಿವೆ ಎಂದು ಹೇಳುತ್ತಿರುವ ಮಾಜಿ ಸಿಎಂಎಚ್.ಡಿ.ಕುಮಾರಸ್ವಾಮಿ, ದಾಖಲೆಗಳಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕೊಡಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ. 

ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಭ್ರಷ್ಟಾಚಾರದ ದಾಖಲೆಗಳಿರುವ ಪೆನ್‌ಡ್ರೈವ್ ನನ್ನ ಬಳಿಯಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಸರ್ಕಾರ ತನಿಖೆ ನಡೆಸುವ ಭರವಸೆ ನೀಡಿದರೆ ಅದನ್ನು ನೀಡುತ್ತೇನೆ ಎಂದೂ ಹೇಳುತ್ತಾರೆ. ಹಾಗೇನಾದರೂ ಭ್ರಷ್ಟಾಚಾರದ ದಾಖಲೆಗಳಿದ್ದರೆ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕೊಡಲಿ. ಮುಖ್ಯಮಂತ್ರಿಗಳಿಗೆ ಎಚ್.ಡಿ.ಕುಮಾರಸ್ವಾಮಿ ಬಹಳ ಚೆನ್ನಾಗಿಯೇ ಪರಿಚಯವಿದೆ. ಅವರೇ ಹೋಗಿ ಸಿಎಂ ಬಳಿಯಲ್ಲಿ ಎಲ್ಲ ವಿವರವನ್ನು ಹೇಳಿ ದಾಖಲೆಗಳನ್ನು ನೀಡಲಿ. ಯಾವುದೇ ದಾಖಲೆ ನೀಡದೆ ಕೇವಲ ಸವಾಲು ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.