ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಹಿರೇಗದ್ದೆ ಗ್ರಾಮದಲ್ಲಿ ರು.25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅಮೃತ ಗ್ರಾಮ ಪಂಚಾಯಿತಿ ಕಾರ್ಯಾಲಯ, ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಳೆಹೊನ್ನೂರು (ಜೂ.16): ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಹಿರೇಗದ್ದೆ ಗ್ರಾಮದಲ್ಲಿ ರು.25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅಮೃತ ಗ್ರಾಮ ಪಂಚಾಯಿತಿ ಕಾರ್ಯಾಲಯ, ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರವನ್ನು ಶಕ್ತಿ ಮೀರಿ ಅಭಿವೃದ್ಧಿ ಮಾಡುವ ಉದ್ದೇಶವಿದೆ. ಹಿರೇಗದ್ದೆ ಗ್ರಾಮದ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದ್ದು ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. 

ಹಿರೇಗದ್ದೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್‌ಗೆ ಹಣದ ಅವಶ್ಯಕತೆಯಿದ್ದು ಇದಕ್ಕೆ ರು.10 ಲಕ್ಷ ಅನುದಾನ ನೀಡಲಾಗುವುದು ಎಂದರು. ಹಿರೇಗದ್ದೆ ಗ್ರಾಪಂ ಅಧ್ಯಕ್ಷ ಬಿ.ಎಂ.ಸುದೇವ್‌ ಮಾತನಾಡಿ, ಕಳೆದ 15 ವರ್ಷಗಳಿಂದ ಗ್ರಾಮ ಪಂಚಾಯಿತಿ ಕಾರ್ಯಾಲಯ, ರಾಜೀವಗಾಂಧಿ ಸೇವಾ ಕೇಂದ್ರದ ಕಟ್ಟಡದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಇದೀಗ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ ಎಂದರು. ಗ್ರಾಪಂ ಉಪಾಧ್ಯಕ್ಷೆ ಜಯ, ಸದಸ್ಯರಾದ ಎ.ಸಿ.ಸುರೇಶ್‌, ಸಾಗರ್‌ದೀಪ್‌, ಜ್ಯೋತಿ, ಸುಮಾ, ಅಪ್ಪು, ಜೆ.ಸುಪ್ರೀತ್‌, ಪಿಡಿಓ ಸುಜಾತ, ಪ್ರಮುಖರಾದ ಎಂ.ಎಸ್‌.ಪ್ರವೀಣ್‌, ಕುಕ್ಕುಡಿಗೆ ರವೀಂದ್ರ, ಎಚ್‌.ಎಂ.ಸತೀಶ್‌, ಸುಭಾಷ್‌, ರಾಜೇಂದ್ರ, ಚೇತನ್‌ ಮತ್ತಿತರರು ಹಾಜರಿದ್ದರು.

ಪ್ರತಾಪ್‌ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್‌ ರಾಜಕಾರಣಿಗಳು: ಎನ್‌.ಚಲುವರಾಯಸ್ವಾಮಿ

ರಸ್ತೆ ಕಾಮಗಾರಿಗೆ ಹಣದ ಕೊರತೆ ಬಂದರೆ ಮತ್ತೆ ಅನುದಾನ: ಹಲವಾರು ವರ್ಷಗಳಿಂದ ಬೇಡಿಕೆ ಇದ್ದ ಹಾಳು ಕರುಗುಂದ-ಸೂಸಲವಾನಿ ಸಂಪರ್ಕ ರಸ್ತೆಗೆ ಈಗ 1 ಕೋಟಿ ರು. ಮಂಜೂರಾಗಿದ್ದು ರಸ್ತೆ ಕಾಮಗಾರಿಗೆ ಹಣದ ಕೊರತೆ ಬಂದರೆ ಮತ್ತೆ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು. 1 ಕೋಟಿ ರು. ವೆಚ್ಚದ ಕಡಹಿಬೈಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿವಮೊಗ್ಗ-ನರಸಿಂಹರಾಜಪುರ ಮುಖ್ಯ ರಸ್ತೆಯಿಂದ ಹಾಳು ಕರುಗುಂದ - ಸೂಸಲವಾನಿ ಸಂಪರ್ಕ ರಸ್ತೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ, ಕಳೆದ ಒಂದು ಅವಧಿಗೆ ಶಾಸಕನಾಗಿ ಕೆಲಸ ಮಾಡಿದ ಅನುಭವವಿದೆ. ಕಳೆದ ಅವಧಿಯಲ್ಲಿ ಕೊರೋನ, ಅತಿವೃಷ್ಠಿ ಹಾಗೂ ಬಿಜೆಪಿ ಸರ್ಕಾರ ಬಂದಿದ್ದರಿಂದ ಅನುದಾನದ ಕೊರತೆ ಉಂಟಾಗಿ ರಸ್ತೆ ಕಾಮಗಾರಿ ವಿಳಂಬವಾಗಿದೆ. ಇದಕ್ಕಾಗಿ ಗ್ರಾಮಸ್ಥರ ಕ್ಷಮೆ ಕೇಳುತ್ತೇನೆ. ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ಭಾಗದ ಗುತ್ತಿಗೆದಾರರಿಗೆ ಉತ್ತೇಜನ ನೀಡಬೇಕು ಎಂದು ಕ್ಷೇತ್ರ ವ್ಯಾಪ್ತಿಯ ಗುತ್ತಿಗೆದಾರರಿಗೆ ಕಾಮಗಾರಿ ನೀಡಿದ್ದೇನೆ. ಆದರೂ ಕೆಲವು ಗುತ್ತಿಗೆ ದಾರರು ಜವಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಗುಣಮಟ್ಟದ ಕಾಮಗಾರಿ ಮಾಡಬೇಕು. ಗ್ರಾಮಸ್ಥರು ಆಗಾಗ್ಗೆ ಬಂದು ರಸ್ತೆ ಕಾಮಗಾರಿಯನ್ನು ವೀಕ್ಷಿಸಬೇಕು. ನಾನು ಶಾಸಕನಾದ ಅವಧಿಯಲ್ಲಿ ದೇವರು ಮೆಚ್ಚುವಂತೆ ಕೆಲಸ ಮಾಡಿದ್ದೇನೆ. ಈ ಬಾರಿಯೂ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.

ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್‌.ಡಿ.ಕುಮಾರಸ್ವಾಮಿ ಸಲಹೆ

ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್‌, ಉಪಾಧ್ಯಕ್ಷೆ ಲಿಲ್ಲಿ, ಸದಸ್ಯರಾದ ಸುನೀಲ್‌, ಎ.ಬಿ.ಮಂಜುನಾಥ್‌, ವಾಣಿ ನರೇಂದ್ರ, ಪೂರ್ಣಿಮ, ರವೀಂದ್ರ, ಶೈಲಾ, ಅಶ್ವಿನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್‌.ಸದಾಶಿವ, ಮುಖಂಡರಾದ ಸಂತೋಷ್‌, ಎ.ಬಿ.ಪ್ರಶಾಂತ್‌, ಸಿನೋಯಿ, ಚೇತನ್‌, ಅಬ್ದುಲ್‌, ಮೋನು,ಪರಮೇಶ್‌, ಗಾಂಧಿ ಗ್ರಾಮ ನಾಗರಾಜು, ಎಸ್‌.ಡಿ.ರಾಜೇಂದ್ರ, ಕೆ.ಎಂ.ಸುಂದರೇಶ್‌, ಎಲ್ದೋಸ್‌ ಮುಂತಾದವರಿದ್ದರು.