ಬೆಂಗಳೂರು, (ಮಾ.19): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣವನ್ನು ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ಮತ್ತೊಂದೆಡೆ ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ಇನ್ನು ಮಾಜಿ ಸಚಿವರ ರಾಸಲೀಲೆ ಸಿ.ಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ಆಗಿದೆ ಎಂದಿದ್ದ​ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ ಎಸಿಬಿಗೆ ದೂರು ದಾಖಲಿಸಲಾಗಿದೆ.

'ಜಾರಕಿಹೊಳಿ ರಾಸಲೀಲೆಯಲ್ಲಿ ದೊಡ್ಡ ದೊಡ್ಡವರ ಕೈವಾಡ, 5 ಕೋಟಿ ಡೀಲ್ '

ಹೌದು... ಮಾಜಿ ಸಚಿವ ಹಾಗೂ ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ವಕೀಲ ಮಂಜುನಾಥ್ ಹಾಗೂ ಸಿದ್ದೇಶ್ ಎಂಬುವವರು ದೂರು ನೀಡಿದ್ದಾರೆ. 5 ಕೋಟಿ ಹಣದ ವ್ಯವಹಾರ ಗೊತ್ತಿದ್ರೂ ಸದನದಲ್ಲಿ ಪ್ರಸ್ತಾಪಿಸಿಲ್ಲ. ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ನೀಡಿಲ್ಲ. ಕೇವಲ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

ಮಾಜಿ ಸಚಿವರ ಇಷ್ಟೊಂದು ದೊಡ್ಡ ಹಣದ ಮೂಲವೇನು.? ಈ ಹಣವನ್ನ ಯಾರು ಯಾರಿಗೆ ಹೇಗೆ ನೀಡಿದ್ದಾರೆ..? ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ದೂರಿನಲ್ಲಿ ಮನವಿ ಮಾಡಿದ್ದಾರೆ.