ಸೋನಿಯಾ ಗಾಂಧಿಯನ್ನು ಬಚಾವ್ ಮಾಡಲು ಹೋಗಿ ತಗ್ಲಾಕೊಂಡ ಡಿಕೆಶಿ?

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಬಚಾವ್ ಮಾಡಲು ಹೋಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಗ್ಲಾಕೊಂಡಿದ್ದಾರೆ.

complaint Files against kpcc president dk shivakumar

ಬೆಂಗಳೂರು, (ಜೂನ್.02): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲಾಗಿದೆ.

ತಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಮೂಗು ತೂರಿಸಿದ್ದಾರೆಂದು ಅವರ ದೂರು ದಾಖಲಾಗಿದೆ.

ಸೋನಿಯಾ ಗಾಂಧಿ ರಕ್ಷಣೆಗೆ ಪೊಲೀಸರ ಮೇಲೆ ಒತ್ತಡ ಹಾಕಿದ್ರಾ ಡಿಕೆಶಿ? 

ವಕೀಲರಾದ ಯೋಗೇಂದ್ರ ಹೊಡಘಟ್ಟ ಹಾಗೂ ನರೇಂದ್ರ ಪಿ.ಆರ್. ಎನ್ನುವರು, ಸಿಎಂ ಬಿಸ್‌ವೈ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಡಿಕೆಶಿ ವಿರುದ್ಧ ಕೇಸ್ ಏಕೆ?
complaint Files against kpcc president dk shivakumar

ಪ್ರಧಾನಿ ನರೇಂದ್ರ PM ಕೇರ್ ಫಂದ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಪಿಎಂ ಕೇಸ್ ಫಂಡ್ ಫ್ರಾಡ್ ಎಂದು ಇತ್ತೀಚೆಗೆ ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಆರೋಪಿಸಿತ್ತು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಶಿವಮೊಗ್ಗದ ಸಾಗರ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರವೀಣ್ ಎನ್ನುವರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.

ಇದರ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಡಿಕೆ ಶಿವಕುಮಾರ್, ಬಿ-ರಿಪೋರ್ಟ್ ಸಲ್ಲಿಸುವಂತೆ ತಮ್ಮ ಪ್ರಭಾವ ಬಳಸಿ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಅವರ ಅವರ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ವೇಳೆ ಡಿಕೆಶಿ ಮೂಗು ತೂರಿಸುತ್ತಿದ್ದು, ಅವರ ಪ್ರಭಾವಕ್ಕೆ ಮಣಿದು ಪೊಲೀಸರು ಬಿ-ರಿಪೋರ್ಟ್ ಹಾಕಿದ್ರೆ ಕಾನೂನಿನ ಮೇಲಿನ ಗೌರವ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಭೇಟಿಯಾಗಿದ್ದ ಡಿಕೆಶಿ
complaint Files against kpcc president dk shivakumar

ಹೌದು...ಸೋನಿಯಾ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ತಂಡ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿತ್ತು. ಅಲ್ಲದೇ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿ ಎಂದು ಮನವಿ ಸಲ್ಲಿಸಿತ್ತು.

ಬಿಎಸ್‌ವೈ ಮೃದು ಧೋರಣೆಗೆ ಅಸಮಧಾನ
complaint Files against kpcc president dk shivakumar

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಹಿಂಪಡೆಯುವ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.  ಬಿಎಸ್‌ವೈ ಅವರ ಈ ಮೃದು ಧೋರಣೆಗೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios