Asianet Suvarna News Asianet Suvarna News

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ: ರೇಣುಕೆ

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದ ಭಾರತ್‌ ಕಮ್ಯುನಿಷ್ಟ ಪಕ್ಷದ 14ನೇ ತಾಲೂಕು ಸಮ್ಮೇಳನ

Communist Party of India Leader Arun Kumar Renuke Slams BJP Government grg
Author
First Published Sep 6, 2022, 10:49 PM IST

ಆಳಂದ(ಸೆ.06): ಕರ್ನಾಟಕ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇದ್ದು, ಇದು ಕಾರ್ಮಿಕ ವಿರೋಧಿ ಸರ್ಕಾರವಾಗಿದೆ ಎಂದು ಹೋರಾಟಗಾರ ಅರುಣ್‌ ಕುಮಾರ್‌ ರೇಣುಕೆ ಅವರು ಇಂದಿಲ್ಲಿ ಆರೋಪಿಸಿದರು. ಭಾರತ್‌ ಕಮ್ಯುನಿಷ್ಟ ಪಕ್ಷದ ಆಳಂದ ತಾಲೂಕು ಘಟಕದ ವತಿಯಿಂದ 14ನೇ ತಾಲೂಕು ಸಮ್ಮೇಳನ ಪಟ್ಟಣದ ಶಬಾಬ್‌ ಸಭಾಂಗಣದಲ್ಲಿ ಸೋಮವಾರ ಯುವ ನ್ಯಾಯವಾದಿ ದಿ. ಮುದಸರ್‌ ಮುಲ್ಲಾ ವೇದಿಕೆಯಲ್ಲಿ ನಡೆದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಡಾ. ಮಹೇಶಕುಮಾರ ರಾಠೋಡ, ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಕಾವೇರಿ ಚವ್ಹಾಣ ಮಾತನಾಡಿದರು.

ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ: ಎಂ.ಬಿ. ಪಾಟೀಲ್‌

ಹೋರಾಟಗಾರರಾದ ಬಸಲಿಂಗಪ್ಪ ಗಾಯಕ್ವಾಡ್‌ ದತ್ತಾತ್ರೇಯ ಕಬಾಡೆ, ಲಕ್ಷಿಂಬಾಯಿ ಸರಸಂಬಾ ಸೀರಾಜ್‌ ಖಾಜಿ, ಕಾವೇರಿ ಸರಸಂಭಾ, ಪದ್ಮಾವತಿ ಮಾಲಿಪಾಟೀಲ,ತಡೋಳಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೈಲಾರಿ ಜೋಗೆ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ್‌ ಧರ್ಮರಾಜ, ಅಶ್ಪಾಕ್‌ ಮುಲ್ಲಾ, ಪದ್ಮಾವತಿ ಮಾಲೀ ಪಾಟಿಲ, ಪದ್ಮಾಕರ ಜಾನಿಬ ಲಲಿತಾ, ಚಂದಮ್ಮಾ, ರಾಜಶೇಖರ ಬಸ್ಮೆ, ಭಾಖರ ಅಲಿ ಜಮಾದಾರ ಇದ್ದರು.

ಕಟ್ಟಡ ಕಾರ್ಮಿಕ ಸಂಘದ ಪ್ರಭುದೇವ ಯಳಸಂಗಿ ನಿರೂಪಿಸಿದರು. ಕಲ್ಯಾಣಿ ತುಕ್ಕಾಣಿ ಸ್ವಾಗತಿಸಿದರು. ಕಾರ್ಮಿಕರು ಕ್ರಾಂತಿ ಗೀತೆ ಹಾಡಿದರು. ಇದೇ ವೇಳೆಯಲ್ಲಿ ಯುವ ನ್ಯಾಯವಾದಿ ಆಗಿದ್ದ ಹೋರಾಟಗಾರ ದಿ. ಮುದಸ್ಸರ್‌ ಮುಲ್ಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಕ್ಷದ ತಾಲೂಕು ಮಟ್ಟದ ಹೊಸ ಕಮೀಟಿ ರಚಿಸಲಾಯಿತು. ಮೈಲಾರಿ ಜೋಗೆ (ಕಾರ್ಯದರ್ಶಿ), ರಾಜಶೇಖರ ಬಸ್ಮೆ ಮತ್ತು ಉಮೇಶ ಪಾಟೀಲ ಧರ್ಮರಾಜ ಕೊರಳ್ಳಿ (ಸಹಕಾರ್ಯದರ್ಶಿ), ಲಕ್ಷ್ಮೀಬಾಯಿ ಅಷ್ಟಗಿ (ಖಜಾಂಚಿ) ಸೇರಿದಂತೆ ತುಕಾರಾಮ ನಕಾತೆ, ಆಶ್ಫಾಕ್‌ ಮುಲ್ಲಾ, ಕಮಲೇಶ ಅವುಟೆ, ಸಾಯಬಣ್ಣಾ ಪೂಜಾರಿ, ಪ್ರಭಾಕರ ಸುತಾರ, ಮಲ್ಲಿನಾಥ ವಾಡಿ ಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
 

Follow Us:
Download App:
  • android
  • ios