Asianet Suvarna News Asianet Suvarna News

ಸರ್ಕಾರದ ವಿರುದ್ಧ ಕಮಿಷನ್ ಆರೋಪ; ಕೆಂಪಣ್ಣ ವಿರೋಧ ಪಕ್ಷದ ಬಳಿ ದೂರು ಕೊಡುವುದು ಎಷ್ಟು ಸರಿ? ಕೋಟ ಪ್ರಶ್ನೆ

ನನ್ನ ಇಲಾಖೆಯಲ್ಲಿ 40%, 50% ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ತೋರಿಸಿ, ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಬದಲಾಗಿ ಗೊಂದಲ ಮೂಡಿಸುತ್ತದೆ. ಕೆಂಪಣ್ಣ ಸೇರಿದಂತೆ ಉಳಿದವರೆಲ್ಲರೂ ಇದರ ಬಗ್ಗೆ ಆಲೋಚಿಸಲಿ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Commission Accusation  against Govt by kempanna kota shrinivas poojari question rv
Author
Bangalore, First Published Aug 25, 2022, 1:53 PM IST

ಉಡುಪಿ (ಆ.25) : ಸರ್ಕಾರದ ಮೇಲೆ ಆರೋಪ ಮಾಡುವಾಗ, ವಿರೋಧ ಪಕ್ಷಕ್ಕೆ ಹೋಗಿ ದೂರು ಕೊಡುವುದು ಎಷ್ಟು ಸರಿ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ಹೇಳಿದ್ದಾರೆ. ಗುತ್ತಿಗೆಯರ ಸಂಘದ ಅಧ್ಯಕ್ಷ(President of Contractors Association) ಕೆಂಪಣ್ಣ(Kempanna) ಮಾಡಿರುವ ಆರೋಪಗಳ ಕುರಿತು ಅವರು ಮಾತನಾಡುತ್ತಿದ್ದರು.

ಅಕ್ರಮಗಳ ಸರದಾರ ಕೆಂಪಣ್ಣ: ಮಂಡ್ಯ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

ಗುತ್ತಿಗೆದಾರರ ಸಂಘದವರು ಸರ್ಕಾರವನ್ನು ಟೀಕೆ ಮಾಡಿದ್ದಾರೆ. ನಮ್ಮ ಇಲಾಖೆಯ ವಸತಿ ಶಿಕ್ಷಣ ಶಾಲಾ ಕಟ್ಟಡದ ಹಣ ಪಾವತಿ ಬಾಕಿ ಇದೆ ಎಂದು ಹೇಳಿದ್ದಾರೆ. ಸುಮಾರು 1100 ಕೋಟಿ ರೂಪಾಯಿ ನೀಡಲು ಬಾಕಿ ಇರುವುದು ನಿಜ. ಆದರೆ ಕೊರೋನಾ(Corona)ದಿಂದ ಉಂಟಾಗಿರುವ ಎರಡು ವರ್ಷಗಳ ಆರ್ಥಿಕ ಕೊರತೆಯಿಂದ ಬಾಕಿ ಇರಿಸಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ 700 ಕೋಟಿ ನೀಡಲಾಗಿದೆ,ಈಗಾಗಲೇ 110 ಕೋಟಿಗಳ ಎರಡು ಕಂತುಗಳ ಹಣ ಬಿಡುಗಡೆಯಾಗಿದೆ ಎಂಸರು.

ಜೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಹಣ ಬಿಡುಗಡೆ ಮಾಡಿರುವ ಕುರಿತು ವೆಬ್ ಸೈಟ್(Website) ನಲ್ಲಿ ಘೋಷಣೆ ಮಾಡಿದ್ದೇವೆ. ಮೊದಲು ಕೊಟ್ಟವರು, ಕೊನೆಗೆ ಕೊಟ್ಟವರು, ಆಮಿಷ ಒಡ್ಡಿದವರು ಯಾವುದನ್ನು ಕೂಡ ಪರಿಗಣಿಸಿಲ್ಲ. ಯಾರಿಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಕೊರೋನಾ ಕಾರಣದಿಂದ ಹಣ ಬಿಡುಗಡೆಯಾಗಿರಲಿಲ್ಲ, ಈಗಾಗಲೇ ಎರಡು ಕಂತು ಬಿಡುಗಡೆಯಾಗಿದೆ ಮತ್ತೆರಡು ಕಂತು ಬಿಡುಗಡೆ ಮಾಡುತ್ತೇವೆ ಎಂದರು.

ಬಾಕಿ ಹಣವನ್ನು ಮರು ಹೊಂದಾಣಿಕೆ ಮಾಡಲು ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದೇವೆ, ಬೇರೆ ಯಾವುದಾದರೂ ಇಲಾಖೆಯಲ್ಲಿ ಹಣ ಉಳಿದಿದ್ದರೆ ಹೊಂದಾಣಿಕೆ ಮಾಡುತ್ತೇವೆ ಎಂದರು

ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಇಲಾಖೆ(Department of Social Welfare, Backward Classes)ಯಲ್ಲಿ ಭ್ರಷ್ಟಾಚಾರ(Curruption) ಆಗಿದ್ದರೆ ಬಹಿರಂಗವಾಗಿ ಹೇಳಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆರೋಪ ಮಾಡುವ ತನಿಖೆಗೆ ಆಗ್ರಹಿಸುವ ಅಧಿಕಾರ ಇದ್ದು, ಒಂದು ಹೈಕೋರ್ಟಿನಲ್ಲೂ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಬಹುದು. ಬೇಕಿದ್ದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆಗೆ ಒತ್ತಾಯಿಸಿ, ನಿರ್ದಿಷ್ಟ ವಿಚಾರಗಳಿದ್ದರೆ ದಾಖಲೆ ಸಹಿತ ಆರೋಪಿಸಿ ಅದನ್ನು ಹೊರತು ಪಡಿಸಿ ಸರಕಾರದ ಮೇಲೆ ಈ ರೀತಿ ಗೂಬೆ ಕೂರಿಸುವುದು ಸರಿಯಲ್ಲ ಎಂದರು

ನನ್ನ ಇಲಾಖೆಯಲ್ಲಿ 40%, 50% ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ತೋರಿಸಿ, ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಬದಲಾಗಿ ಗೊಂದಲ ಮೂಡಿಸುತ್ತದೆ. ಕೆಂಪಣ್ಣ ಸೇರಿದಂತೆ ಉಳಿದವರೆಲ್ಲರೂ ಇದರ ಬಗ್ಗೆ ಆಲೋಚಿಸಲಿ, ಸರಕಾರವನ್ನ ಟೀಕಿಸುವ ವಿರೋಧ ಪಕ್ಷದ ನಾಯಕರಿಗೆ ನೀವು ದೂರು ಕೊಡುತ್ತೀರಿ, ನಿಮಗೆ ನ್ಯಾಯ ಸಿಗೋದು ಎಲ್ಲಿ ವಿರೋಧ ಪಕ್ಷ ನಾಯಕರ ಮನೆಯಂಗಳದಲ್ಲಾ?  ಎಂದು ಪ್ರಶ್ನಿಸಿದ್ದಾರೆ.

ಕೆಂಪಣ್ಣ 40% ಕಮಿಷನ್ ಆರೋಪದಲ್ಲಿ ಹುರುಳಿಲ್ಲ: ಸಿಎಂ ಬೊಮ್ಮಾಯಿ

ವಿನಾಕಾರಣ 100% 50% ಎಂದು ಆರೋಪಿಸಬೇಡಿ. ಯಾರಿಗೆ ಕೊಟ್ಟಿದ್ದೀರಿ ಬಹಿರಂಗಪಡಿಸಿ ಎಂದು ಪ್ರಶ್ನಿಸಿದರು. ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿ ಈಗಾಗಲೇ ಈಶ್ವರಪ್ಪ(K.S.Eshwarappa) ರಾಜೀನಾಮೆ ಕೊಟ್ಟಿದ್ದಾರೆ. ತನಿಖೆಯಲ್ಲಿ ಈಶ್ವರಪ್ಪ ನಿರ್ದೋಷಿ ಎಂದು ಹೇಳಲಾಗಿದೆ, ಈ ಬಗ್ಗೆ ಮೇಲ್ಮನವಿ ಹಾಕಲು ಕುಟುಂಬಿಕರಿಗೆ ಅವಕಾಶ ಇದೆ. ತಾನು ಮತ್ತೊಮ್ಮೆ ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂದು ಈಶ್ವರಪ್ಪ ಈಗಾಗಲೇ ಹೇಳಿದ್ದಾರೆ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಹೇಳಿದರು.

Follow Us:
Download App:
  • android
  • ios