ಬಿಜೆಪಿ ಪ್ರಣಾಳಿಕೆ, ಬೊಮ್ಮಾಯಿ ಹಳೆಯ ವಿಡಿಯೋ ಬಳಸಿ ಸಿಎಂ ವಕ್ಫ್ ತಿರುಗೇಟು: ಕಮಲ ಪಾಳಯಕ್ಕೆ ಭಾರೀ ಮುಜುಗರ!
2014ರ ಲೋಕಸಭೆ ಚುನಾವಣೆ ವೇಳೆ ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ನೀಡಿದ್ದ ಚುನಾವಣಾ ಭರವಸೆಯ ಪ್ರಣಾಳಿಕೆ ಪ್ರತಿ ಬಿಡುಗಡೆ ಮೂಲಕ ವಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಇದು ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಮತ್ತು ಕಾಂಗ್ರೆಸ್ ವಿರುದ್ಧ ವಕ್ಫ್ ಆಸ್ತಿ ದಾಳಿ ಉರುಳಿಸಲು ಮುಂದಾಗಿದ್ದ ಬಿಜೆಪಿಗೆ ಭಾರೀ ಮುಜುಗರ ತಂದಿದೆ.
ಬೆಂಗಳೂರು(ನ.05): ಮುಡಾ ಪ್ರಕರಣದಲ್ಲಿ ತಮ್ಮ ಕುಟುಂಬ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಹಾಗೂ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಬಿಜೆಪಿಗೆ, ಮಾಜಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಕ್ಫ್ ಆಸ್ತಿ ಕುರಿತು ಮಾತ ನಾಡಿರುವ ಹಳೆ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇದರ ಜೊತೆಗೆ, 2014ರ ಲೋಕಸಭೆ ಚುನಾವಣೆ ವೇಳೆ ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ನೀಡಿದ್ದ ಚುನಾವಣಾ ಭರವಸೆಯ ಪ್ರಣಾಳಿಕೆ ಪ್ರತಿ ಬಿಡುಗಡೆ ಮೂಲಕ ವಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಇದು ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಮತ್ತು ಕಾಂಗ್ರೆಸ್ ವಿರುದ್ಧ ವಕ್ಫ್ ಆಸ್ತಿ ದಾಳಿ ಉರುಳಿಸಲು ಮುಂದಾಗಿದ್ದ ಬಿಜೆಪಿಗೆ ಭಾರೀ ಮುಜುಗರ ತಂದಿದೆ. ಈ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ತಂಡ ಬಿಡುಗಡೆ ಮಾಡಿದೆ. ತನ್ಮೂಲಕ ವಕ್ಸ್ ಆಸ್ತಿಗಳ ಕುರಿತು ನೋಟಿಸ್ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದ ಬಿಜೆಪಿಗೆ ಮುಖ್ಯಮಂತ್ರಿಯವರ ಮಾಧ್ಯಮ ತಂಡ ತೀಕ್ಷ್ಯ ತಿರುಗೇಟು ನೀಡಿದೆ
ವಕ್ಫ್ ಜಟಾಪಟಿಯಲ್ಲಿ ಸಿಎಂ ಮಹತ್ವದ ನಿರ್ಧಾರದ ಹಿಂದಿನ ಅಸಲಿ ರಹಸ್ಯವೇನು?.
ಹಳೆ ವಿಡಿಯೋ:
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮುಸ್ಲಿಂ ಧಾರ್ಮಿಕ ಮುಖಂಡರು, ಸಾರ್ವಜನಿಕರನ್ನು ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ವೇಳೆ, 'ರಾಜ್ಯದಲ್ಲಿ 2,000 ಕೋಟಿ ರು. ಮೌಲ್ಯದ ವಕ್ಸ್ ಆಸ್ತಿಗಳು ಕಬಳಿಕೆ ಆಗಿದ್ದು, ಒಂದೊಂದು ಇಂಚು ವಕ್ಫ್ ಆಸ್ತಿಯೂ ವಕ್ಸ್ ಮಂಡಳಿಗೆ ವಾಪಸು ಬರಬೇಕು. ಅಲ್ಲಿಯವರೆಗೆ ನಾವೂ ಸುಮ್ಮನೆ ಇರಲ್ಲ, ನೀವೂ ಸುಮ್ಮನಿರ ಬೇಡಿ' ಎಂದು ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಕರೆ ನೀಡಿರುವ ಅಂಶ ವಿಡಿಯೋದಲ್ಲಿದೆ. ಜೊತೆಗೆ, 'ವಕ್ಸ್ ಆಸ್ತಿ ನಿಮ್ಮ ದೇವರ (ಅಲ್ಲಾಹು) ಆಸ್ತಿ. ಈಗ ಆಸ್ತಿ ಕಬಳಿಕೆ ಮಾಡಿರು ವವರು ನೀವು ಹೋಗಿ ಚಿಕ್ಕ ಮಸೀದಿ ಕಟ್ಟುತ್ತೇವೆ ಎಂದರೆ ಬಿಡುತ್ತಾರಾ? ಹೀಗಾಗಿ ಯಾವುದೇ ಕಾರಣಕ್ಕೂವಕ್ಸ್ ಆಸ್ತಿಗಳನ್ನು ವಾಪಸು ಪಡೆಯದೆ ಬಿಡಬಾರದು' ಎಂದು ಹೇಳಿರುವ ಅಂಶಗಳೂ ವಿಡಿಯೋದಲ್ಲಿದೆ.
ಬೊಮ್ಮಾಯಿ ಹೇಳಿರುವುದೇನು?:
ವಿಡಿಯೋದಲ್ಲಿ ಕನ್ನಡ ಹಾಗೂ ಉರ್ದು ಎರಡೂ ಭಾಷೆಗಳಲ್ಲಿ ಮಾತನಾಡಿರುವ ಬಸವರಾಜ ಬೊಮ್ಮಾಯಿ, 'ಇಲ್ಲಿ ವಕ್ಫ್ ಸಮಿತಿ ಅಧ್ಯಕ್ಷರಿದ್ದಾರೆ. ನಿಮ್ಮ ಕರ್ತವ್ಯ ವಕ್ಸ್ ಆಸ್ತಿ ಕಾಪಾಡುವುದು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಒಂದು ವೇಳೆ ರಾಜಿ ಆದರೆ ನಾವು ಏನೂ ಮಾಡಲಾಗದಿರಬಹುದು. ಆದರೆ ಮೇಲಿ ರುವವನು ನಿಮ್ಮನ್ನು ನೋಡುತ್ತಿರುತ್ತಾನೆ. ಅದು ದೇವರ ಆಸ್ತಿ. ದೇವರ ಆಸ್ತಿ ಲೂಟಿ ಆಗುತ್ತಿದ್ದರೂ ನೀವು ಕಣ್ಣು ಮುಚ್ಚಿ ಕುಳಿತರೆ ಲೂಟಿ ಆದವನಿಗೆ ಹೆಚ್ಚು ಸಮಸ್ಯೆ ಆಗದಿರಬಹುದು. ಆದರೆ ಸುಮ್ಮನೆ ಕೂತ ನಿಮಗೆ ಒಳ್ಳೆಯದಾಗಲ್ಲ. ನಿಮಗೆ ತುಂಬಾ ಅದೃಷ್ಟ ಇದ್ದರೆ ಮಾತ್ರ ದೇವರ ಆಸ್ತಿ ಕಾಪಾಡುವ ಜವಾಬ್ದಾರಿ ಸಿಕ್ಕಿರುತ್ತದೆ. ರಾಜ್ಯದಲ್ಲಿ 2,000 ಸಾವಿರ ಕೋಟಿ ರು. ಮೌಲ್ಯದ ವಕ್ಫ್ ಆಸ್ತಿ ಖಾಸಗಿಯವರ ಹೆಸರಿಗೆ ಆಗಿಬಿಟ್ಟಿದೆ. ಒತ್ತುವರಿ ಅಲ್ಲ ಅವರ ಹೆಸರಿಗೇ ಆಗಿಬಿಟ್ಟಿದೆ. ಅಲ್ಲಿ ಹೋಗಿ ನೀವು ಚಿಕ್ಕ ಮಸೀದಿ ಕಟ್ಟುತ್ತೇವೆ ಎಂದರೆ ಬಿಡುತ್ತಾರಾ? ಪೂರ್ಣ ವಕ್ಫ್ ಆಸ್ತಿ ವಾಪಸು ಬರಬೇಕು. ಒಂದೊಂದು ಇಂಚು ವಕ್ಫ್ ಆಸ್ತಿಯೂ ವಾಪಸು ಬರಬೇಕು. ಅಲ್ಲಿಯವರೆಗೆ ನಾವೂ ಸುಮ್ಮನೆ ಕೂರಲ್ಲ ನೀವೂ ಸುಮ್ಮನೆ ಕೂರಬೇಡಿ' ಎಂದು ಹೇಳಿದ್ದಾರೆ.
ರಿಪೋಟರ್ಸ್ ಡೈರಿ: ಸಿದ್ದರಾಮಯ್ಯ ಸಂಡೇ ಲಾಯರಂತೆ, ಹೌದಾ!
ಬಿಜೆಪಿ ಸರ್ಕಾರದ ಅವಧಿಯಲ್ಲಿ 216 ನೋಟಿಸ್ ಕೊಟ್ಟಿದ್ದರು ನಮ್ಮ ಸರ್ಕಾರ ರೈತರ ಪರವಿದೆ. ವಕ್ಫ್ ಆಸ್ತಿ ವಿಚಾರವಾಗಿ ನೋಟಿಸ್ ನೀಡಿದ್ದರೆ ಮರಳಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಬಿಜೆಪಿ ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿದೆ. ಬಿಜೆಪಿ ಕಾಲದಲ್ಲಿ ನೋಟಿಸ್ ನೀಡಿರುವ ಕುರಿತು ಏಕೆ ಮಾತನಾಡುತ್ತಿಲ್ಲ? ಬಿಜೆಪಿಯ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ನನ್ನ ಹೇಳಿಕೆ ತಿರುಚಿದೆ ನಾನು ವಕ್ಫ್ ಬೋರ್ಡ್ ಕಾಠ್ಯಕ್ರಮ ಕ್ಕೆ ಹೋದಾಗ ಅಲ್ಲಿದ್ದವರು 'ಕಾಂಗ್ರೆ ಸ್‌ನವರು ವಕ್ಫ್ ಆಸ್ತಿ ನುಂಗಿದ್ದಾರೆ' ಎಂದು ಚೀಟಿ ಕೊಟ್ಟರು. ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರೇ ವಕ್ಫ್ ಆಸ್ತಿ ನುಂಗಿದ್ದಾರೆ, ಅದನ್ನು ವಾಪಸ್ ಪಡೆಯಬೇಕು ಎಂದು ವಕ್ಫ್ ಬೋರ್ಡ್‌ಗೆ ಹೇಳಿದ್ದೆ. ಅದನ್ನು ಈಗ ತಿರುಚಿ ನಾನು ರೈತರ ಜಮೀನು ವಾಪಸ್ ಪಡೆಯಲು ಹೇಳಿದ್ದೆ ಎಂದು ತಿರುಚುತ್ತಿದ್ದಾರೆ. ನಾನು ಹಾಗೆ ಹೇಳಲು ಸಾಧ್ಯವೇ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.