ಸಂಸ್ಕೃತಿರಹಿತ ಅನಂತ್‌ ಹೆಗಡೆ ಹೇಳಿಕೆ, ಇಂಥವರನ್ನು ಸುಸಂಸ್ಕೃತ ಎನ್ನಬೇಕಾ?: ಸಿಎಂ ಸಿದ್ದು

ಅನಂತಕುಮಾರ್ ಹೆಗಡೆ ಅವರ ಭಾಷೆ ಆ ರೀತಿ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರೂ ಇದ್ದಾರೆ, ಕೊಡದೇ ಇರೋರೂ ಇದ್ದಾರೆ. ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಎನ್ನಲು ಆಗುತ್ತಾ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಘನತೆಗೆ ಕುಂದು ಬರುತ್ತದೇ ಹೊರತು ನನಗಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah Slams Uttara Kannada BJP MP Anantkumar Hegde grg

ಬಾಗಲಕೋಟೆ(ಜ.14):  ಅನಂತಕುಮಾರ್ ಹೆಗಡೆ ಕೇಂದ್ರ ಮಂತ್ರಿ ಆಗಿದ್ದಾಗ ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳಿದ್ದರು. ಇಂಥವರನ್ನು ಸುಸಂಸ್ಕೃ ತರು ಎಂದು ಹೇಳಲು ಆಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೂಡಲಸಂಗಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಆ ರೀತಿಯ ಹೇಳಿಕೆ ಅವರ ಸಂಸ್ಕೃತಿ. ಅವರಿಂದ ನಾವು ಸಂಸ್ಕೃತಿ ಬಯಸಲು ಆಗುತ್ತಾ ಎಂದು ತಿರುಗೇಟು ನೀಡಿದರು.

ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳು: ಅನಂತ್‌ ಕುಮಾರ್‌ ಹೆಗಡೆ

ಇದೇ ವೇಳೆ ತಮ್ಮ ಕುರಿತು ಅವರು ಮಾಡಿದ ಟೀಕೆಗೆ ಪ್ರತಿಕ್ರಿಯಿಸಿ, 'ಅವರ ಭಾಷೆ ಆ ರೀತಿ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರೂ ಇದ್ದಾರೆ, ಕೊಡದೇ ಇರೋರೂ ಇದ್ದಾರೆ. ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಎನ್ನಲು ಆಗುತ್ತಾ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಘನತೆಗೆ ಕುಂದು ಬರುತ್ತದೇ ಹೊರತು ನನಗಲ್ಲ' ಎಂದರು.

Latest Videos
Follow Us:
Download App:
  • android
  • ios