ಅಪರಾಧಿ ಅಪರಾಧಿಯೇ, ಪ್ರಲ್ಹಾದ್ ಜೋಶಿಗೆ ಕಾನೂನು ಗೊತ್ತಿದೆಯಾ?: ಸಿಎಂ ಸಿದ್ದರಾಮಯ್ಯ
ಅಪರಾಧಿ ಅಪರಾಧಿಯೇ. ಜೋಶಿಗೆ ಕಾನೂನು ಗೊತ್ತಿದೆಯಾ? ನ್ಯಾಯಾಲಯ ಹಳೇ ಕೇಸ್ ಚುಕ್ತಾ ಮಾಡಿ ಎಂದಿದ್ದಾರೆ. ಹಾಗಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೋಶಿಗೆ ಕಾನೂನು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ವಿಜಯಪುರ (ಜ.03): ಅಪರಾಧಿ ಅಪರಾಧಿಯೇ. ಪ್ರಲ್ಹಾದ್ ಜೋಶಿಗೆ ಕಾನೂನು ಗೊತ್ತಿದೆಯಾ? ನ್ಯಾಯಾಲಯ ಹಳೇ ಕೇಸ್ ಚುಕ್ತಾ ಮಾಡಿ ಎಂದಿದ್ದಾರೆ. ಹಾಗಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೋಶಿಗೆ ಕಾನೂನು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ರಾಮಮಂದಿರ ಹೋರಾಟದ ಕೇಸ್ ರೀ ಓಪನ್ ಮಾಡುತ್ತಿರುವ ವಿಚಾರ ಕುರಿತು ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೋಶಿ ಅವರು, ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಅವರೇನು ಕಾನೂನು ಪಂಡಿತರಾ? ಕಾನೂನು ತಿಳಿದು ಮಾತನಾಡಲಿ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದಾ? ಕಾನೂನು ಪ್ರಕಾರ ಕ್ರಮ ಎಲ್ಲವೂ ನಡೆಯುತ್ತಿದೆ.
ಪ್ರಹ್ಲಾದ್ ಜೋಶಿ ಹೇಳಿಕೆ ನೀಚತನದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಐಸಿಸಿ ಮಾದರಿ ಸರ್ಕಾರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಕಳೆದ ಐದು ವರ್ಷ ರಾಜ್ಯದಲ್ಲಿ ಯಾವ ಮಾದರಿ ಸರ್ಕಾರ ನಡೆಸಿದ್ದಾರೆ ಎಂದು ಹೇಳಲಿ? ಬಿಜೆಪಿ ಸರ್ಕಾರದಲ್ಲಿ ಹಲಾಲ್, ಹಿಜಾಬ್ ಇವೆಲ್ಲವೂ ಚರ್ಚೆಗೆ ಬಂದಿವೆ. ರಾಜ್ಯದ ಜನ ಇದನ್ನೆಲ್ಲಾ ನೋಡಿ ಬಿಜೆಪಿಯನ್ನು ಮನೆಗೆ ಕಳಿಸಿದ್ದಾರೆ ಎಂದರು. ರಾಜ್ಯದಲ್ಲಿ ಜನತೆ ಕಾಂಗ್ರೆಸ್‌ಗೆ 135 ಸ್ಥಾನ ನೀಡಿ ಅಧಿಕಾರಕ್ಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದೆ. ಕೇಂದ್ರದ ನರೇಂದ್ರ ಮೋದಿ ಯಾವ ಯೋಜನೆ ಕೊಟ್ಟಿದ್ದಾರೆ ಎಂದು ಮೊದಲು ಜೋಷಿ ಹೇಳಲಿ ಎಂದು ಕಿಡಿಕಾರಿದರು.
ಸಿದ್ದುರಿಂದ ದ್ವೇಷ ರಾಜಕಾರಣ: ದೇಶ, ರಾಜ್ಯದಲ್ಲೂ ರಾಮ ಮಂದಿರ ಉದ್ಘಾಟನೆಗೆ ಹೋಗಬೇಕೋ ಬೇಡವೋ ಎಂಬ ಕನ್‌ಫ್ಯೂಸನ್‌ನಲ್ಲಿ ಕಾಂಗ್ರೆಸ್‌ನವರಿದ್ದಾರೆ. ಕಾಂಗ್ರೆಸ್‌ಗೆ ರಾಮಮಂದಿರ ಬೇಕಿರಲಿಲ್ಲ, ರಾಮಮಂದಿರ ನಿರ್ಮಾಣದ ಕಲ್ಪನೆಯೂ ಅವರಿಗಿರಲಿಲ್ಲ. ಈಗ ಹೊಟ್ಟೆಕಿಚ್ಚಿನಿಂದ ರಾಮಮಂದಿರದ ಹಳೆಯ ಕೇಸ್ ತೆಗೆದು ಹೋರಾಟಗಾರರನ್ನು ಅರೆಸ್ಟ್ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ: ಎಂಎಲ್‌ಸಿ ಎನ್.ರವಿಕುಮಾರ್
ರಾಜ್ಯದಲ್ಲಿ ಇಸ್ಲಾಮಿಕ್, ಐಸಿಸ್, ಮೊಘಲ್ ಸರ್ಕಾರ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದು ಸಿದ್ದರಾಮಯ್ಯನವರ ಹಿಂದೂ ದ್ವೇಷದ, ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ಎಂದು ಹರಿಹಾಯ್ದರು. 31 ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಪುನಃ ಕೆದಕಿ ಶ್ರೀರಾಮ ಭಕ್ತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ತನ್ನ ನೀಚತನ ತೋರಿಸುತ್ತಿದೆ. ಒಂದು ಕಡೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೆಯುತ್ತಾರೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ, ಪಿಎಫ್‌ಐ ಪ್ರಕರಣವನ್ನು ಹಿಂಪಡೆಯುತ್ತಾರೆ ಎಂದು ಟೀಕಿಸಿದರು.