Asianet Suvarna News Asianet Suvarna News

ಅವನೊಬ್ಬ ಮೂರ್ಖ: ಸಂಸದ ಅನಂತ ಕುಮಾರ್‌ ಹೆಗಡೆ ವಿರುದ್ಧ ಸಿದ್ದು ಪರೋಕ್ಷ ತರಾಟೆ

‘ಹಿಂದು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಹಾಗಾಗಿ, ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಎಂದು ಅವನ್ಯಾರೋ ಮೂರ್ಖ ಹೇಳುತ್ತಾನೆ. ದಾರಿ ತಪ್ಪಿಸುವ ಇಂತಹ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ’ ಎಂದು ಸಂಸದ ಅನಂತ ಕುಮಾರ್‌ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷ ವಾಗ್ಧಾಳಿ ನಡೆಸಿದರು.

CM Siddaramaiah Slams On MP Ananth Kumar Hegde At Belagavi gvd
Author
First Published Jan 18, 2024, 5:43 AM IST

ಬೆಳಗಾವಿ (ಜ.18): ‘ಹಿಂದು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಹಾಗಾಗಿ, ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಎಂದು ಅವನ್ಯಾರೋ ಮೂರ್ಖ ಹೇಳುತ್ತಾನೆ. ದಾರಿ ತಪ್ಪಿಸುವ ಇಂತಹ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ’ ಎಂದು ಸಂಸದ ಅನಂತ ಕುಮಾರ್‌ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷ ವಾಗ್ಧಾಳಿ ನಡೆಸಿದರು. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯ ದ್ವೇಷ ಹರಡಿ, ಮಸೀದಿ ಧ್ವಂಸ ಮಾಡಲು ಕರೆಕೊಟ್ಟ ಮೂರ್ಖರು ಈಗಲೂ ಇದ್ದಾರೆ. ಅವನ್ಯಾರೋ ಮೂರ್ಖ ಹಿಂದು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಹಾಗಾಗಿ, ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಎನ್ನುತ್ತಾನೆ. ಇತಿಹಾಸ ಇದನ್ನೆಲ್ಲ ನಮಗೆ ಹೇಳುತ್ತದೆಯೇ ಎಂದು ಪ್ರಶ್ನಿಸಿದರು. ಆ ಮೂರ್ಖನ ಮಾತಿಗೂ ಜನ ಚಪ್ಪಾಳೆ ತಟ್ಟುತ್ತಾರೆ. ದಯವಿಟ್ಟು ಸಂಗೊಳ್ಳಿ ರಾಯಣ್ಣನಂತವರಿಗೆ ಚಪ್ಪಾಳೆ ತಟ್ಟೋಣ. ದಾರಿ ತಪ್ಪಿಸುವ ಇಂತಹ ಮೂರ್ಖರಿಗೆ ತಪ್ಪಾಳೆ ತಟ್ಟಬೇಡಿ ಎಂದು ಸಂಸದ ಅನಂತಕುಮಾರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

7ನೇ ವೇತನ ಆಯೋಗ ವರದಿ ಬಳಿಕ ನೌಕರರ ವೇತನ ಪರಿಷ್ಕರಣೆ ತೀರ್ಮಾನ: ಸಿದ್ದರಾಮಯ್ಯ

ಸೈಬರ್‌ ಹ್ಯಾಕಥಾನ್‌ ನೋಂದಣಿಗೆ ಸಿಎಂ ಚಾಲನೆ: ಅಪರಾಧ ತನಿಖಾ ವಿಭಾಗ(ಸಿಐಡಿ)ದಿಂದ ‘ಸಿಐಡಿ-ಡಿಕೋಡ್‌’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ‘ಸೈಬರ್‌ ಹ್ಯಾಕಥಾನ್‌’ ನೋಂದಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿ ಆವರಣದಲ್ಲಿ ಈ ಸೈಬರ್‌ ಹ್ಯಾಕಥಾನ್‌ ನೋಂದಣಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು.

ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವಲ್ಲಿ ಸ್ವಯಂಪ್ರೇರಿತವಾಗಿ ತನಿಖಾ ಸಂಸ್ಥೆಗಳ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಿಐಡಿ, ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾ(ಡಿಎಸ್‌ಸಿಐ), ಇನ್ಫೋಸಿಸ್‌ ಫೌಂಡೇಶನ್‌ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ‘ಸೆಂಟರ್‌ ಫಾರ್‌ ಸೈಬರ್‌ ಕ್ರೈಂ ಟ್ರೈನಿಂಗ್‌ ಆ್ಯಂಡ್ ರಿಸರ್ಚ್‌(ಸಿಸಿಐಟಿಆರ್‌) ವತಿಯಿಂದ ಈ ಸೈಬರ್‌ ಹ್ಯಾಕಥಾನ್‌ ಆಯೋಜಿಸಲಾಗಿದೆ. ಪಿಇಎಸ್‌ ವಿಶ್ವವಿದ್ಯಾಲಯವು ಈ ಕಾರ್ಯಕ್ರಮದ ಆತಿಥ್ಯ ವಹಿಸಿದೆ.

ಅಂಬಿಗ ಸಮುದಾಯ ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶೀಘ್ರವೇ ಸ್ಪಷ್ಟೀಕರಣ: ಸಿಎಂ ಸಿದ್ದರಾಮಯ್ಯ

ಮಾ.2ರಂದು ಹ್ಯಾಕಥಾನ್‌ ಡೇ: 24 ಗಂಟೆ ಅವಧಿಗೆ ನಿರ್ದಿಷ್ಟಪಡಿಸಲಾದ ಈ ಹ್ಯಾಕಥಾನ್‌ನಲ್ಲಿ ಡಾರ್ಕ್‌ ವೆಬ್‌ ಮೇಲ್ವಿಚಾರಣೆ ಮತ್ತು ಪತ್ತೆ, ಕ್ರಿಪ್ಟೋಕರೆನ್ಸಿಗಳು ಮತ್ತು ಓಪನ್‌ ಸೋರ್ಸ್‌ ಇಂಟೆಲಿಜೆನ್ಸ್‌ ವಿಷಯಾಧಾರಿತ ಏಕೀಕೃತ ವೇದಿಕೆಯನ್ನು ಒಳಗೊಂಡಿದೆ. ತಾಂತ್ರಿಕ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳು ಈ ಹ್ಯಾಕಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಇಂದಿನಿಂದ ನೋಂದಣಿ ಆರಂಭವಾಗಿದ್ದು, ಜ.31ರಂದು ನೋಂದಣಿ ಕೊನೆಗೊಳ್ಳಲಿದೆ. ಫೆ.15ರಂದು ತಂಡಗಳನ್ನು ಅಂತಿಮಗೊಳಿಸಲಾಗುತ್ತದೆ. ಮಾ.2ರಂದು ಹ್ಯಾಕಥಾನ್‌ ಡೇ ನಡೆಯಲಿದ್ದು, ಮಾ.3ರಂದು ವಿಜೇತರನ್ನು ಘೋಷಿಸಲಾಗುತ್ತದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

Follow Us:
Download App:
  • android
  • ios