Asianet Suvarna News Asianet Suvarna News

ಆ.9ರಂದು ಬಿಜೆಪಿಯ ಎಲ್ಲಾ ಭ್ರಷ್ಟಾಚಾರ ಬಿಚ್ಚಿಡುತ್ತೇನೆ: ಸಿದ್ದರಾಮಯ್ಯ

ನಾವೂ ಸುಮ್ಮನೆ ಕೂತಿಲ್ಲ. ಇವರು ಪಾದಯಾತ್ರೆ ಆರಂಭಿಸುತ್ತಿದ್ದಂತೆಯೇ ನಾವೂ ಸಮಾವೇಶಗಳನ್ನು ಆರಂಭಿಸಿದ್ದೇವೆ. ಕಡೆಯ ದಿನ ಅಂದರೆ, ಆ.9ರಂದು ಮೈಸೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಎಲ್ಲಾ ಹಗರಣಗಳನ್ನು ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

cm siddaramaiah slams karnataka bjp leaders grg
Author
First Published Aug 4, 2024, 12:34 PM IST | Last Updated Aug 5, 2024, 10:30 AM IST

ಹಾಸನ(ಆ.04):  ಜನರ ಆಶೀರ್ವಾದದಿಂದ ಬಂದಿರುವ ನಮ್ಮ ಸರ್ಕಾರವನ್ನು ಹೇಗಾದರೂ ಮಾಡಿ ಕೆಡವಬೇಕು ಎನ್ನುವ ಕುತಂತ್ರದಿಂದ ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಆದರೆ, ನಾವೂ ಸುಮ್ಮನೆ ಕೂತಿಲ್ಲ. ಇವರು ಪಾದಯಾತ್ರೆ ಆರಂಭಿಸುತ್ತಿದ್ದಂತೆಯೇ ನಾವೂ ಸಮಾವೇಶಗಳನ್ನು ಆರಂಭಿಸಿದ್ದೇವೆ. ಕಡೆಯ ದಿನ ಅಂದರೆ, ಆ.9ರಂದು ಮೈಸೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಎಲ್ಲಾ ಹಗರಣಗಳನ್ನು ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸುಳ್ಳುಸುದ್ದಿ: ತನಿಖೆಗೆ ಹೈಕೋರ್ಟ್‌ ತಡೆ

ಸಕಲೇಶಪುರ ತಾಲೂಕಿನ ದೊಡ್ಡತಪ್ಪಲಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾ ಡಿದರು. ಈ ದೇಶದಲ್ಲಿ 'ಭ್ರಷ್ಟಾಚಾರದ ಪಿತಾಮಹ ಅಂತಾ ಯಾರಾದರೂ ಇದ್ದರೆ ಅವರು ಬಿಜೆಪಿಯವರು. ಬಿಜೆಪಿಯವರದ್ದು
40% ಭ್ರಷ್ಟಾಚಾರ ಎಂದು ಕೆಂಪಣ್ಣ ಅವರೇ ಈ ಹಿಂದೆ ಆರೋಪ ಮಾಡಿದ್ದರು. ಈಗ ಮುಡಾ ಹಗರಣದನೈತಿಕ ಹೊಣೆಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವ ಅಗತ್ಯ ವೇನಿಲ್ಲ?, ಈ ಬಗ್ಗೆ ಪಾದಯಾತ್ರೆ ಮಾಡುವ ಅವಶ್ಯ ಕತೆಯೂ ಇಲ್ಲ. ಏಕೆಂದರೆ, ನಮ್ಮ ನೈತಿಕತೆ ಪ್ರಶ್ನಿಸುವಷ್ಟು ನೈತಿಕತೆಯನ್ನು ಅವರೇ ಉಳಿಸಿಕೊಂಡಿಲ್ಲ. ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರಿಗೂ ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಿಡಿ ಕಾಡಿದರು.

Latest Videos
Follow Us:
Download App:
  • android
  • ios